* ಖಾಸಗಿ ಶಾಲಾ ಶಿಕ್ಷರ ಸಹಾಯಕ್ಕೆ ಮುಂದಾದ ಕಿಚ್ಚ ಸುದೀಪ್ * ಸುದೀಪ ಚಾರಿಟೇಬಲ್ ಟ್ರಸ್ಟ್ ನಿಂದ ಶಿಕ್ಷಕರಿಗೆ ಅಳಿಲು ಸೇವೆ * ವ್ಯಕ್ತಿತ್ವ ರೂಪಿಸಿದ ..ವಿದ್ಯೆ ಕಲಿಸಿದ ಗುರುಗಳಿಗೆ ಗೌರವ ಸಲ್ಲಿಸಲು ಮುಂದಾದ ಸುದೀಪ್ ತಂಡ * ಖಾಸಗಿ ಶಾಲೆಯ ಶಿಕ್ಷಕರಿಗೆ ಈ ಕರೋನಾ ಸಂಕಷ್ಟದ ಕಾಲದಲ್ಲಿ ನಿಮ್ಮ ಜೊತೆ ನಾವಿದ್ದೇವೆ
ಬೆಂಗಳೂರು(ಮೇ 25) ಕೊರೋನಾ ಕಾಲದಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಖಾಸಗಿ ಶಾಲಾ ಶಿಕ್ಷರ ಸಹಾಯಕ್ಕೆ ಮುಂದಾದ ಕಿಚ್ಚ ಸುದೀಪ್ ಮುಂದಾಗಿದ್ದಾರೆ. ಕಿಚ್ಚ ಸುದೀಪ ಚಾರಿಟೇಬಲ್ ಸೊಸೈಟಿ ಶಿಕ್ಷಕರಿಗೆ ನೆರವು ನೀಡಲು ಮುದಾಗಿದೆ. ವ್ಯಕ್ತಿತ್ವ ರೂಪಿಸಿದ, ವಿದ್ಯೆ ಕಲಿಸಿದ ಗುರುಗಳಿಗೆ ಗೌರವ ಸಲ್ಲಿಸಲು ಮುಂದಾಗಿದೆ.
ಲೋಕ ಮೆಚ್ಚುವಂತೆ ನಡೆದುಕೊಂಡ ಕಿಚ್ಚನಿಗೆ ಕಲಾವಿದರ ಆಶೀರ್ವಾದ
ಖಾಸಗಿ ಶಾಲೆಯ ಶಿಕ್ಷಕರಿಗೆ ಈ ಕರೋನಾ ಸಂಕಷ್ಟದ ಕಾಲದಲ್ಲಿ ನಿಮ್ಮ ಜೊತೆ ನಾವಿದ್ದೇವೆ ಎನ್ನುವ ಸಂದೇಶ ನೀಡುವುದರ ಜತೆಗೆ ನೆರವು ನೀಡಲು ಸಹಾಯ ಹಸ್ತ ಚಾಚಿದೆ. ಗುರುಗಳಿಗೆ ಕಿಚ್ಚನ ನಮನ
ಈ ಕಾರ್ಯಕ್ರಮದ ಹೆಸರಿನಲ್ಲಿ ಸಹಾಯ ಮಾಡಲಾಗುತ್ತಿದ್ದು ಮೊದಲ ಹಂತವಾಗಿ ಕರ್ನಾಟಕದ ಕಷ್ಟದಲ್ಲಿರುವ ಐವತ್ತು ಜನ ಶಿಕ್ಷಕರಿಗೆ 2000 ರೂಪಾಯಿಗಳ ಗೌರವ ಧನ ನೀಡಲಾಗುತ್ತಿದೆ. ಒಂದಿಷ್ಟು ಷರತ್ತುಗಳನ್ನ ಅನ್ವಯ ಮಾಡಿಕೊಂಡು ನೆರವು ನೀಡಲಾಗುತ್ತಿದೆ.
ಸರ್ಕಾರ ಮಾತ್ರವಲ್ಲದೇ ಕೊರೋನಾ ಸಂಕಷ್ಟದ ಕಾಲದಲ್ಲಿ ಸಿನಿಮಾ ನಟರು, ಸಂಘ ಸಂಸ್ಥೆಗಳು ನೆರವು ನೀಡುತ್ತಾ ಬಂದಿವೆ. ಸಂಕಷ್ಟದಲ್ಲಿರುವ ಸಿನಿಮಾ ಕಲಾವಿರ ನೆರವಿಗೂ ಸುದೀಪ್ ನಿಂತಿದ್ದರು.
