ಬಾಲಿವುಡ್​ ನಟಿ ಕಿಯಾರಾ ಅಡ್ವಾಣಿ ಗರ್ಭಿಣಿಯಾಗಲು ಬಯಸಿದ್ದಾರಂತೆ. ಆದರೆ ಇದಕ್ಕೆ ಅವರು ಕೊಟ್ಟಿರೋ ಕಾರಣ ಫನ್ನಿಯಾಗಿದ್ದು, ಫ್ಯಾನ್ಸ್​ ಬಿದ್ದೂ ಬಿದ್ದೂ ನಗುತ್ತಿದ್ದಾರೆ. 

ಬಾಲಿವುಡ್​ನ ಕ್ಯೂಟ್​ ಜೋಡಿಗಳಲ್ಲಿ ಒಂದು ಸಿದ್ಧಾರ್ಥ್ ಮಲ್ಹೋತ್ರಾ (Sidharth Malhotra) ಮತ್ತು ಕಿಯಾರಾ ಅಡ್ವಾಣಿ ಅವರದ್ದು. ಕಳೆದ ಫೆಬ್ರವರಿ 7ರಂದು ಈ ಜೋಡಿ ಹಸೆಮಣೆ ಏರಿದೆ. ಕಿಯಾರಾ ಮತ್ತು ಸಿದ್ಧಾರ್ಥ್ ತಮ್ಮ ವೈಯಕ್ತಿಕ ಜೀವನವನ್ನು ಖಾಸಗಿಯಾಗಿ ಇರಿಸಿಕೊಳ್ಳಲು ಬಯಸಿದರೂ ಆಗಾಗ್ಗೆ ತಮ್ಮ ಅಭಿಮಾನಿಗಳೊಂದಿಗೆ ಕೆಲವು ಮಾಹಿತಿಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಾರೆ. ಇತ್ತೀಚಿಗೆ ಕಿಯಾರಾ ಅವರ ಒಂದು ಫೋಟೋ ಸಕತ್​ ವೈರಲ್​ ಆಗಿತ್ತು. ವೈರಲ್​ ಮಾತ್ರವಲ್ಲದೇ ಸುದ್ದಿಯನ್ನೂ ಮಾಡಿತ್ತು. ಸತ್ಯಪ್ರೇಮ್ ಕಿ ಕಥಾ ಸಿನಿಮಾ ಪ್ರಚಾರಕ್ಕಾಗಿ ಕಿಯಾರಾ ಅಡ್ವಾಣಿ ರಾಜಸ್ಥಾನಕ್ಕೆ ಭೇಟಿ ನೀಡಿದ್ದಾಗ ತೆಗೆದ ಫೋಟೋ ಇದು. ಅರಮನೆ ನಗರಿಗೆ ಬಂದ ಕಿಯಾರಾ ಅಡ್ವಾಣಿ ಜೈಪುರದಲ್ಲಿ ಕಾಣಿಸಿಕೊಂಡಿದ್ದರು. ಈ ಫೋಟೋ ನೋಡಿದವರು ಕಿಯಾರಾ ಗರ್ಭಿಣಿ ಎಂದು ಹೇಳಲು ಶುರು ಮಾಡಿದ್ದರು. ಬೇಬಿ ಬಂಪ್‌ ಕಾಣಿಸುತ್ತಿದೆ ಎಂದು ಕಮೆಂಟ್​ ಹಾಕಿದ್ದರು. ಇದಕ್ಕೆ ಇನ್ನಷ್ಟು ಪುಷ್ಟಿ ನೀಡಿದ್ದು, ಕಾರ್ಯಕ್ರಮವೊಂದರಲ್ಲಿ ವೇದಿಕೆಯ ಮೇಲೆಯೇ ಕಿಯಾರಾ ಅಡ್ವಾಣಿ ಅವರಿಗೆ ಚಪ್ಪಲಿ ಹಾಕಿಕೊಳ್ಳಲು ಕಾರ್ತಿಕ್​ ಆರ್ಯನ್​ ಸಹಾಯ ಮಾಡಿದ್ದರು. ಅದರ ವಿಡಿಯೋ ವೈರಲ್​ ಆಗಿತ್ತು. ಆಗ ನೆಟ್ಟಿಗರು ಬಹಳ ಶ್ಲಾಘನೆ ವ್ಯಕ್ತಪಡಿಸಿದ್ದರು. ಈಗ ಪತ್ನಿ ಗರ್ಭಿಣಿ ಎನ್ನುವ ಕಾರಣಕ್ಕೆ ಹೀಗೆ ಮಾಡಿರಬಹುದು ಎಂದು ನೆಟ್ಟಿಗರು ಕಮೆಂಟ್‌ ಮಾಡುತ್ತಿದ್ದರು.

Add Asianetnews Kannada as a Preferred SourcegooglePreferred

ಆಗ ಸೈಲೆಂಟ್​ ಇದ್ದ ಕಿಯಾರಾ (Kiara Advani)ಈಗ ತಮ್ಮ ಗರ್ಭಧಾರಣೆ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ. ಇದಕ್ಕೆ ಕಾರಣ, ಅವರು ಪ್ರೆಗ್ನೆಂಟ್​ ಇರುವ ಬಗ್ಗೆ ಮತ್ತೆ ಈಗ ಸುದ್ದಿಯಾಗುತ್ತಿದೆ. ಮದುವೆಯ ನಂತರ, ಕಿಯಾರಾ ಅಡ್ವಾಣಿ ಮತ್ತು ಸಿದ್ಧಾರ್ಥ್ ಮಲ್ಹೋತ್ರಾ ಇಬ್ಬರೂ ತಮ್ಮ ತಮ್ಮ ವೃತ್ತಿಜೀವನದಲ್ಲಿ ನಿರತರಾಗಿದ್ದಾರೆ. ಮದುವೆಯ ನಂತರವೂ ಸಿನಿಮಾ ಮಾಡುವುದರಲ್ಲಿ ಸಕ್ರಿಯರಾಗಿರುವ ಈ ಜೋಡಿ ಇದುವರೆಗೂ ಮಕ್ಕಳ ಬಗ್ಗೆ ಯೋಚನೆ ಮಾಡಿಲ್ಲ. ಆದರೆ ಫ್ಯಾನ್ಸ್​ ಸುಮ್ಮನೆ ಬಿಡಬೇಕಲ್ಲ ಮದುವೆಯಾಗಿ ಆರು ತಿಂಗಳಾಗಿದೆ. ಈ ಹಿನ್ನೆಲೆಯಲ್ಲಿ ಕಿಯಾರಾ ಏನಾದ್ರೂ ಗರ್ಭಿಣಿಯಾಗಿರಬಹುದಾ ಎನ್ನುವ ಚಿಂತೆ ಅಭಿಮಾನಿಗಳದ್ದು. ಬಹುಶಃ ಈ ಮಾತನ್ನು ಕೇಳಿ ಕೇಳಿ ಖುದ್ದು ಕಿಯಾರಾ ಅವರಿಗೂ ಸುಸ್ತಾಗಿ ಹೋದಂತಿದೆ. ಅದೇ ಕಾರಣಕ್ಕೆ ಈಗ ತಮ್ಮ ಗರ್ಭಧಾರಣೆ ಕುರಿತು ಮಾಹಿತಿ ನೀಡಿದ್ದಾರೆ. ಆದರೆ ಫನ್ನಿಯಾಗಿ ರಿಪ್ಲೈ ಕೊಟ್ಟಿದ್ದಾರೆ. 

ನಟಿ ಕಿಯಾರಾ ಕ್ಯೂಟ್‌ ಫೋಟೋ ಶೇರ್‌ ಮಾಡಿದ್ರೆ, ಪ್ರೆಗ್ನೆಂಟಾ ಕೇಳ್ತಿದ್ದಾರೆ ಫ್ಯಾನ್ಸ್‌?

ಕೆಲ ವರ್ಷಗಳಿಂದಲೂ ಗರ್ಭಧಾರಣೆಯ ಬಗ್ಗೆ ಯೋಚಿಸುತ್ತಿದ್ದೆ. ಗರ್ಭಿಣಿಯಾಗಲು (Pregnant) ಬಹಳ ದಿನಗಳಿಂದ ಬಯಸಿರುವುದಾಗಿ ಹೇಳಿದ್ದಾರೆ. ಆದರೆ ಇದಕ್ಕೆ ಅವರು ಕೊಟ್ಟಿರೋ ಕಾರಣ ಮಾತ್ರ ಸಕತ್​ ಫನ್ನಿಯಾಗಿದೆ. ನನಗೆ ಗರ್ಭಿಣಿಯಾಗಲು ಇಷ್ಟ ಏಕೆಂದರೆ... ಆ ಸಮಯದಲ್ಲಿ ಏನು ಬೇಕಾದರೂ ತಿನ್ನಬಹುದು, ಅದೂ ತಿನ್ನಬೇಡ, ಇದು ತಿನ್ನಬೇಡ ಎಂದು ತಡೆಯುವವರು ಯಾರೂ ಇರುವುದಿಲ್ಲ. ಏಕೆಂದರೆ ಗರ್ಭಿಣಿಗೆ ಬಯಕೆ ಇರುತ್ತದೆ ಎಂದು ಸುಮ್ಮನಾಗ್ತಾರೆ. ಅದಕ್ಕೇ ನನಗೆ ಗರ್ಭ ಧರಿಸಲು ಇಷ್ಟವಿದೆ ಎಂದು ನಕ್ಕಿರುವ ನಟಿ, ಹುಟ್ಟುವ ಮಗು ಗಂಡು ಅಥವಾ ಹೆಣ್ಣು ಯಾವುದು ಆದರೂ ಪರವಾಗಿಲ್ಲ. ಆರೋಗ್ಯವಾಗಿದ್ರೆ ಸಾಕು ಎಂದಿದ್ದಾರೆ.

ಸದ್ಯಕ್ಕೆ ಬಾಲಿವುಡ್ ಸಿನಿಮಾಗಳಲ್ಲಿ ನಟಿಸುತ್ತಿರುವ ಕಿಯಾರಾ ಅಡ್ವಾಣಿ ರಾಮ್ ಚರಣ್-ಶಂಕರ್ ಕಾಂಬಿನೇಷನ್​ನ ಹೊಸ ಸಿನಿಮಾದ ಭಾಗವಾಗಿದ್ದಾರೆ. ಶ್ರೀ ವೆಂಕಟೇಶ್ವರ ಕ್ರಿಯೇಷನ್ಸ್ ಬ್ಯಾನರ್​ ಅಡಿ ಈ ಸಿನಿಮಾ ಬರುತ್ತಿದೆ. ಈ ಬ್ಯಾನರ್​ ಅಡಿ ಇದು 50ನೇ ಸಿನಿಮಾ ಆಗಿದೆ.

ಕಿಯಾರಳಿಗೆ ಅತ್ತೆ ಸಪೋರ್ಟ್: ಎಲ್ಲಾ ಓಕೆ, ಇಂಥ ಡ್ರೆಸ್ ಯಾಕೆ? ಎಂದ ಫ್ಯಾನ್ಸ್