Ormax List: ಆಲಿಯಾ vs ಕಿಯಾರಾ- ಜನಪ್ರಿಯತೆ ಲಿಸ್ಟ್​ನಲ್ಲಿ ಯಾರ ಸ್ಥಾನ ಎಷ್ಟು?

ಬಾಲಿವುಡ್​ ನಟಿಯರಲ್ಲಿ ಹೆಚ್ಚು ಜನಪ್ರಿಯತೆ ಗಳಿಸಿರುವವರು ಯಾರು ಎಂಬ ಬಗ್ಗೆ ಓರ್ಮ್​ರ್ಮ್ಯಾಕ್ಸ್ ಪಟ್ಟಿ ಬಿಡುಗಡೆಯಾಗಿದ್ದು, ಇದಕ್ಕೆ ಕುತೂಹಲದ ತಿರುವು ಸಿಕ್ಕಿದೆ. 
 

Kiara Advani beats Katrina Kaif and Shraddha Kapoor to become the most popular actress

ಬಹಳ ಕಾಲದಿಂದ ಸಂಬಂಧದಲ್ಲಿದ್ದ ಸಿದ್ಧಾರ್ಥ್ ಮಲ್ಹೋತ್ರಾ (Siddharth Malhotra) ಮತ್ತು ಕಿಯಾರಾ ಅಡ್ವಾಣಿ (Kiara Adwani)ಅಂತಿಮವಾಗಿ ಫೆಬ್ರವರಿ 7 ರಂದು ರಾಜಸ್ಥಾನದ ಜೈಸಲ್ಮೇರ್‌ನಲ್ಲಿ ತಮ್ಮ ಕುಟುಂಬ ಮತ್ತು ಸ್ನೇಹಿತರ ನಡುವೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ವಿವಾಹವಾದಲ್ಲಿನ ದುಬಾರಿ ಉಡುಗೊರೆ, ಬಳಿಕ  ಅದ್ಧೂರಿ ರಿಸೆಪ್ಷನ್​, ಹನಿಮೂನ್​ ಇವುಗಳಿಂದ ತಿಂಗಳಾನುಗಟ್ಟಲೆ ಭಾರಿ ಚರ್ಚೆಯಲ್ಲಿದ್ದ ಜೋಡಿ ಇದು. ಶೇರ್ಷಾ ಚಿತ್ರದ ಸೆಟ್‌ನಲ್ಲಿ ಡೇಟಿಂಗ್ ಆರಂಭಿಸಿದ ಜೋಡಿ, ತಮ್ಮ ಮದುವೆಯ ಮೊದಲ ಫೋಟೋಗಳನ್ನು ಹಂಚಿಕೊಂಡಿದ್ದು ಸಖತ್‌ ವೈರಲ್‌ ಆಗಿತ್ತು.  ಅಷ್ಟೇ ಅಲ್ಲ  ಫೋಟೋಗಳು ಕೆಲವೇ ಗಂಟೆಗಳಲ್ಲಿ ಲಕ್ಷಗಟ್ಟಲೇ ವ್ಯೂಸ್‌ ಪಡೆದು Instagram ನಲ್ಲಿ ಎರಡನೇ ಅತಿ ಹೆಚ್ಚು ವೀಕ್ಷಿಸಿದ ಮದುವೆಯ ಫೋಟೋ ಎನ್ನಿಸಿತ್ತು.  ಫೋಟೋಗಳು ಇನ್​ಸ್ಟಾಗ್ರಾಮ್​ನಲ್ಲಿ  19 ಮಿಲಿಯನ್‌ ವ್ಯೂಸ್​ ಪಡೆದಿದ್ದವು. ಇದೀಗ ಮತ್ತೊಂದು ದಾಖಲೆ ಬರೆದು ಕಿಯಾರಾ ಸುದ್ದಿಯಾಗಿದ್ದಾರೆ. 

ಅದೇನೆಂದರೆ, ಓರ್ಮ್​ರ್ಮ್ಯಾಕ್ಸ್ ಪಟ್ಟಿಯ (Ormax list) ಪ್ರಕಾರ, ನಟಿ ಬಾಲಿವುಡ್‌ನ ಅತ್ಯಂತ ಜನಪ್ರಿಯ ನಟಿಯರಾದ ಕತ್ರಿನಾ ಕೈಫ್ ಮತ್ತು ಟಿಜೆಎಂಎಂ ನಟಿ ಶ್ರದ್ಧಾ ಕಪೂರ್‌ ಅವರನ್ನು ಹಿಂದಿಕ್ಕಿದ್ದಾರೆ.  ಈ ಮೂಲಕ ಅವರು ಮೂರನೆಯ ಸ್ಥಾನವನ್ನು ಪಡೆದಿದ್ದಾರೆ. ಆದರೆ ಆಲಿಯಾ ಭಟ್​ ಹಾಗೂ ದೀಪಿಕಾ ಪಡುಕೋಣೆ ಅವರನ್ನು ಹಿಂದಿಕ್ಕುವಲ್ಲಿ ಕಿಯಾರಾ ಸಫಲರಾಗಲಿಲ್ಲ. ಈ ನಿಟ್ಟಿನಲ್ಲಿ ಅವರ ಗುರಿ ಇನ್ನೂ ನಡೆದಿದೆ. ಮದುವೆಯ ಫೋಟೋದ ದಾಖಲೆಯ ವಿಷಯದಲ್ಲಿ ಹೇಳುವುದಾದರೆ ಈ ಜೋಡಿ, ಕಳೆದ ವರ್ಷ ಮದುವೆಯಾದ ಆಲಿಯಾ ಭಟ್‌  ಮತ್ತು ರಣಬೀರ್‌ ಕಪೂರ್‌ ಜೋಡಿಯನ್ನು ಹಿಂದಿಕ್ಕಿ  ಮೊದಲ ಸ್ಥಾನ ಗಳಿಸಿದೆ. ಆದರೆ ಜನಪ್ರಿಯ ಪಟ್ಟಿಯ ಲಿಸ್ಟ್​ನಲ್ಲಿ ಮಾತ್ರ ಆಲಿಯಾ ಅವರನ್ನು ಮುಟ್ಟಲು ಕಿಯಾರಾ ಅವರಿಗೆ ಸಾಧ್ಯವಾಗಲಿಲ್ಲ. 

ನಾಯಕನಿಗಿಂತಲೂ ಹೆಚ್ಚು ಸಂಭಾವನೆ ಪಡೆದ ಬಾಲಿವುಡ್​ ನಟಿಯರಿವರು!

ಹಾಗಿದ್ದರೆ ಈ ಪಟ್ಟಿಯಲ್ಲಿ ಜನಪ್ರಿಯ ನಟಿಯರು ಎಂದು ಕರೆಸಿಕೊಂಡಿರುವವರು ಯಾರು ಎಂದು ನೋಡುವುದಾದರೆ, ಪಟ್ಟಿಯಲ್ಲಿ ಮೊದಲ ಹೆಸರು ಇರುವುದು ನಟಿ ಆಲಿಯಾ ಭಟ್ (Alia Bhatt) ಅವರದ್ದು. ಆಲಿಯಾ ಭಟ್ ಇನ್ನೂ ನಂ. 1 ಸ್ಥಾನವನ್ನು ಕಾಯ್ದುಕೊಂಡಿದ್ದಾರೆ.  ಗಂಗೂಬಾಯಿ ಕಥಿಯಾವಾಡಿ ನಟಿ ಇಲ್ಲಿಯವರೆಗೆ ಓರ್ಮ್ಯಾಕ್ಸ್ ಪಟ್ಟಿಯ ಪ್ರಕಾರ ಅತ್ಯಂತ ಪ್ರೀತಿಯ ನಟಿಯಾಗಿದ್ದಾರೆ. ಇನ್ನು ನಂ.2 ನಟಿಯ ಬಗ್ಗೆ ಹೇಳುವುದಾದರೆ ಅದು ದೀಪಿಕಾ ಪಡುಕೋಣೆ (Deepika Padukone). ದೀಪಿಕಾ ಪಡುಕೋಣೆ ಎರಡನೇ ಸ್ಥಾನದಲ್ಲಿದ್ದು, ಆಲಿಯಾ ಭಟ್ ಅವರ ಸಮೀಪದಲ್ಲಿದ್ದಾರೆ.  ಪಠಾಣ್ ನಟಿ ಇದೀಗ ಆಸ್ಕರ್ 2023 ಗೆ ಹಾಜರಾಗಲು ಅಮೆರಿಕದಲ್ಲಿದ್ದಾರೆ. ಏಕೆಂದರೆ   ಅವರು ಆಸ್ಕರ್​ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ನಿರೂಪಕರಲ್ಲಿ ಒಬ್ಬರು.

ಇನ್ನು ಮೂರನೆಯ ಸ್ಥಾನದಲ್ಲಿದ್ದ ಕತ್ರಿನಾ ಕೈಫ್ (Katrina Kaif) ನಾಲ್ಕನೆಯ ಸ್ಥಾನಕ್ಕೆ ಇಳಿದಿದ್ದಾರೆ. ಒರ್ಮ್ಯಾಕ್ಸ್ ಪಟ್ಟಿಯಲ್ಲಿ ಅತ್ಯಂತ ಜನಪ್ರಿಯ ನಟಿಯಾಗಿ ಕತ್ರಿನಾ ಕೈಫ್​ (Katrina Kaif) 4 ನೇ ಸ್ಥಾನದಲ್ಲಿದ್ದಾರೆ. ಈ ಪಟ್ಟಿಯಲ್ಲಿ ಕತ್ರಿನಾ ಅವರು ಕರೀನಾ ಕಪೂರ್ ಖಾನ್ ಮತ್ತು ಐಶ್ವರ್ಯಾ ರೈ ಬಚ್ಚನ್ ಅವರನ್ನು ಹಿಂದಿಕ್ಕಿದ್ದಾರೆ. 5ನೇ ಸ್ಥಾನದಲ್ಲಿ ಕೃತಿ ಸನೋನ್ ಇದ್ದಾರೆ. ಇವರು ಶ್ರದ್ಧಾ ಕಪೂರ್ ಅವರನ್ನು ಸೋಲಿಸಿ 5 ನೇ ರ್ಯಾಂಕ್ ಗಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆದಿಪುರುಷ ನಟಿ ಹೊರಗಿನವಳಾಗಿರುವುದರಿಂದ ಅಸಾಧಾರಣವಾಗಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. 

ಸಲ್ಮಾನ್‌ ಖಾನ್‌ ನನ್ನ ಅಪ್ಪನಂತೆ ಎಂದ ನಟಿ ಪಾಲಕ್​: ಬಿಡ್ತಾರೆಯೇ ಟ್ರೋಲಿಗರು?

ತೂ ಝೂಟಿ ಮೈನ್ ಮಕ್ಕಾರ್ ಚಿತ್ರದ ಸೂಪರ್ ಯಶಸ್ಸಿನ ನಂತರ ಮತ್ತೆ ಟ್ರ್ಯಾಕ್‌ಗೆ ಮರಳಿರುವ ಶ್ರದ್ಧಾ ಕಪೂರ್ (Shruddha Kapoor), ಬಾಲಿವುಡ್‌ನ ಅತ್ಯಂತ ಜನಪ್ರಿಯ ಮಹಿಳಾ ನಟಿಯಾಗಿ ಆರನೇ ಸ್ಥಾನದಲ್ಲಿದ್ದಾರೆ. ಕರೀನಾ ಕಪೂರ್ ಖಾನ್ ಟಾಪ್​ 10 ರ ಪಟ್ಟಿಯಲ್ಲಿ 7 ನೇ ಸ್ಥಾನದಲ್ಲಿದ್ದಾರೆ. ವೈಯಕ್ತಿಕ ಮತ್ತು ವೃತ್ತಿಪರ ಜೀವನವನ್ನು ಹೇಗೆ ಸುಂದರವಾಗಿ ನಿರ್ವಹಿಸಬಹುದು ಎಂಬುದಕ್ಕೆ ಬೆಬೋ ಅತ್ಯುತ್ತಮ ಉದಾಹರಣೆಯಾಗಿದೆ.

Latest Videos
Follow Us:
Download App:
  • android
  • ios