ಬಾಲಿವುಡ್ ಜೋಡಿ ಕಿಯಾರಾ ಅಡ್ವಾಣಿ ಮತ್ತು ಸಿದ್ಧಾರ್ಥ್ ಮಲ್ಹೋತ್ರಾ ಪೋಷಕರಾಗುತ್ತಿದ್ದಾರೆ. ಈ ಸಂತಸದ ಸುದ್ದಿಯನ್ನು ದಂಪತಿಗಳು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ಬೇಬಿ ಸಾಕ್ಸ್‌ನ ಫೋಟೋವನ್ನು ಹಂಚಿಕೊಂಡು, "ನಮ್ಮ ಜೀವನದ ಸುಂದರ ಉಡುಗೊರೆ ಶೀಘ್ರದಲ್ಲೇ ಬರಲಿದೆ" ಎಂದು ಬರೆದಿದ್ದಾರೆ. ಇತ್ತೀಚೆಗಷ್ಟೇ ಈ ಜೋಡಿ ತಮ್ಮ ಎರಡನೇ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿಕೊಂಡಿದ್ದರು.
ಬಾಲಿವುಡ್‌ನ ಕಪಲ್ ಕಿಯಾರಾ ಅಡ್ವಾಣಿ ಮತ್ತು ಸಿದ್ಧಾರ್ಥ್ ಮಲ್ಹೋತ್ರಾ ಪೋಷಕರಾಗುತ್ತಿದ್ದಾರೆ. ಈ ವಿಷಯವನ್ನು ದಂಪತಿಗಳು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಶೇರ್ ಮಾಡಿ ತಿಳಿಸಿದ್ದಾರೆ.
ನಮ್ಮ ಜೀವನದ ಶ್ರೇಷ್ಠ ಉಡುಗೊರೆ. ಶೀಘ್ರದಲ್ಲೇ ಬರಲಿದೆ ಎಂದು ಶೀರ್ಷಿಕೆ ಬರೆದು ಗುಡ್ ನ್ಯೂಸ್ ಹಂಚಿಕೊಂಡಿದ್ದಾರೆ. ಕಿಯಾರಾ ಈ ವಿಷಯನ ಒಂದು ಫೋಟೋ ಶೇರ್ ಮಾಡಿ ತಿಳಿಸಿದ್ದಾರೆ, ಅದರಲ್ಲಿ ಕಿಯಾರಾ ಮತ್ತು ಸಿದ್ಧಾರ್ಥ್ ಬೇಬಿ ಸಾಕ್ಸ್ ತೋರಿಸ್ತಾ ಇದ್ದಾರೆ. ಈ ಫೋಟೋ ಶೇರ್ ಮಾಡಿ ಅವರು ಕ್ಯಾಪ್ಷನ್‌ನಲ್ಲಿ ಬರೆದಿದ್ದಾರೆ, ‘ನಮ್ಮ ಜೀವನದ ತುಂಬಾ ಸುಂದರವಾದ ಗಿಫ್ಟ್. ಬೇಗನೆ ಬರ್ತಿದೆ.’ ಎಂದಿದ್ದಾರೆ. ಅಭಿಮಾನಿಗಳು ದಂಪತಿಗೆ ಕಂಗ್ರಾಟ್ಸ್ ಹೇಳಿ ಕಮೆಂಟ್ ಮಾಡಿದ್ದಾರೆ.
ಟಾಕ್ಸಿಕ್‌ಗಾಗಿ ಕಿಯಾರ, ಯಶ್ ಭರ್ಜರಿ ಸ್ಟೆಪ್ಸ್: ಕೊರಿಯೋಗ್ರಾಫ್ ಮಾಡ್ತಿರೋದು ಯಾರು?
ಕಿಯಾರಾ ಪ್ರಸ್ತುತ ಯಶ್ ಜೊತೆ ಟಾಕ್ಸಿಕ್ ಚಿತ್ರದ ಚಿತ್ರೀಕರಣದಲ್ಲಿದ್ದಾರೆ ಮತ್ತು ಹೃತಿಕ್ ರೋಷನ್ ಜೊತೆ ವಾರ್ 2 ಮತ್ತು ರಣವೀರ್ ಸಿಂಗ್ ಜೊತೆ ಡಾನ್ 3 ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಏತನ್ಮಧ್ಯೆ, ಸಿದ್ಧಾರ್ಥ್ ಕಳೆದ ವರ್ಷ ತಮ್ಮ ಪ್ರಾಜೆಕ್ಟ್ VVAN: ಫೋರ್ಸ್ ಆಫ್ ದಿ ಫಾರೆಸ್ಟ್ ಅನ್ನು ಘೋಷಿಸಿದರು, ಇದು ಈ ವರ್ಷದ ನವೆಂಬರ್‌ನಲ್ಲಿ ಬಿಡುಗಡೆಯಾಗಲಿರುವ ಜಾನಪದ ಥ್ರಿಲ್ಲರ್ ಕಥೆಯಾಗಿದೆ.
450 ಕೋಟಿ ಸುರಿದ್ರೂ ವೇಸ್ಟ್ ಆಯ್ತು; ಹಾಡಿಗಾಗಿಯೇ 75 ಕೋಟಿ ಹಣ ಖರ್ಚು; ಇದುವೇ 2025ರ ಫಸ್ಟ್ ಫ್ಲಾಪ್ ಸಿನಿಮಾ
ಫೆಬ್ರವರಿ 7 ರಂದು, ಸಿದ್ಧಾರ್ಥ್ ಮಲ್ಹೋತ್ರಾ ಮತ್ತು ಕಿಯಾರಾ ಅಡ್ವಾಣಿ ಅವರು ತಮ್ಮ ಎರಡನೇ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡಿದ್ದರು. ಈ ಸಂದರ್ಭವನ್ನು ಕಿಯಾರಾ ತನ್ನ ಸಂಗಾತಿಗೆ ಶುಭ ಹಾರೈಸಲು ತಮಾಷೆಯ ವೀಡಿಯೊವನ್ನು ಹಂಚಿಕೊಂಡರು. ತಮ್ಮ ಮದುವೆಯ ವೀಡಿಯೊದಿಂದ ಸ್ಮರಣೀಯ ಕ್ಷಣವನ್ನು ಮರುಸೃಷ್ಟಿಸುವ ಮೂಲಕ ಆಚರಣೆಗೆ ಹಾಸ್ಯಮಯ ಸ್ಪರ್ಶ ನೀಡಿದರು. ಎರಡು ವರ್ಷಗಳ ಹಿಂದೆ ವೈರಲ್ ಆಗಿದ್ದ ಮೂಲ ಕ್ಲಿಪ್‌ನಲ್ಲಿ, ಕಿಯಾರಾ ಸಿದ್ಧಾರ್ಥ್ ಅವರನ್ನು ಹತ್ತಿರಕ್ಕೆ ಎಳೆದುಕೊಂಡು ಹೋಗುತ್ತಿರುವುದನ್ನು ತೋರಿಸಲಾಗಿತ್ತು.
