ಕೆಜಿಎಫ್‌: ಚಾಪ್ಟರ್ 1 ಸಿನಿಮಾದಲ್ಲಿ ಗರುಡ ಪಾತ್ರ ಮಾಡಿದ ರಾಮ್ ಅಲಿಯಾಸ್ ರಾಮಚಂದ್ರ ರಾಜು ಮಾಲಿವುಡ್‌ಗೆ ಎಂಟ್ರಿ ಕೊಡುತ್ತಿದ್ದಾರೆ. ಮಾಲಿವುಡ್ ಲೆಜೆಂಡ್ ನಟ ಮೋಹನ್‌ಲಾಲ್‌ ಜೊತೆ ನಟಿಸುತ್ತಿದ್ದಾರೆ. ಇಲ್ಲಿಯೂ ರಾಜು ಅವರದ್ದು ವಿಲನ್ ಪಾತ್ರ.

ಕಳೆದ ವರ್ಷ ಮೋಹನ್‌ಲಾಲ್ ತಮ್ಮ ಆರಾಟ್ಟು ಸಿನಿಮಾ ಅನೌನ್ಸ್ ಮಾಡಿದ್ದರು. ಡಿಸೆಂಬರ್‌ನಲ್ಲಿ ಸಿನಿಮಾದ ಫಸ್ಟ್‌ಲುಕ್ ರಿಲೀಸ್ ಆಗಿದ್ದು, ಸೋಷಿಯಲ್ ಮೀಡಿಯಾದಲ್ಲಿ ಇದು ಸಖತ್ ವೈರಲ್ ಆಗಿತ್ತು.

ಸಿನಿಮಾಗಾಗಿ ಏನು ಬೇಕಾದರೂ ಮಾಡುತ್ತೇನೆ: ಧ್ರುವ ಸರ್ಜಾ

ಸಿನಿಮಾ ನಿರ್ದೇಶಕ ಉಣ್ಣಿಕೃಷ್ಣನ್ ಇನ್‌ಸ್ಟಾಗ್ರಾಂನಲ್ಲಿ ಸಿನಿಮಾ ಮಾಹಿತಿ ಹಂಚಿಕೊಂಡಿದ್ದಾರೆ. ಸಿನಿಮಾ ಶೂಟಿಂಗ್ ಸಂದರ್ಭ ಮೋಹನ್ ಲಾಲ್ ಮತ್ತು ರಾಜು ಜೊತೆಗೆ ಕ್ಲಿಕ್ಕಿಸಿದ ಫೋಟೋ ಶೇರ್ ಮಾಡಿದ್ದಾರೆ. ರಾಜು ಸಿನಿಮಾದಲ್ಲಿ ಪ್ರಮುಖ ವಿಲನ್ ಪಾತ್ರ ಮಾಡಲಿದ್ದಾರೆ ಎನ್ನಲಾಗಿದೆ.

ಗರುಡ ರಾಮ್ ಜೊತೆ ಕೆಲಸ ಮಾಡೋಕೆ ಖುಷಿ ಇದೆ ಎಂದು ನಿರ್ದೇಶಕ ಕ್ಯಾಪ್ಶನ್ ಕೊಟ್ಟು ಫೋಟೋ ಶೇರ್ ಮಾಡಿಕೊಂಡಿದ್ದಾರೆ. ಸಿನಿಮಾ ಶೂಟಿಂಗ್ ಕೇರಳದಲ್ಲಿ ನಡೆಯುತ್ತಿದ್ದು, ನವೆಂಬರ್ 24ಕ್ಕೆ ಚಿತ್ರೀಕರಣ ಆರಂಭವಾಗಿದೆ.

ಅಭಿಮಾನಿಗಳ ಅದೊಂದು ಬೇಡಿಕೆಗೆ ಮಾಲ್ಡೀವ್ಸ್‌ನಿಂದಲೇ ಸ್ಪಂದಿಸಿದ ಯಶ್ ಕುಟುಂಬ

ಆರಾಟ್ಟು ಸಿನಿಮಾದಲ್ಲಿ ಮೋಹನ್ ಲಾಲ್ ನೆಯ್ಯಾಟಿನ್ ಕರ ಗೋಪನ್ ಪಾತ್ರವನ್ನು ಮಾಡಲಿದ್ದಾರೆ. ಈ ಹಿಂದೆ ನಿರ್ದೇಶಕ ಮಾಡಂಬಿ, ಮಿ.ಫ್ರಾಡ್, ಗ್ರಾಂಡ್‌ಮಾಸ್ಟರ್ ಸಿನಿಮಾಗಳನ್ನು ಮೋಹನ್‌ಲಾಲ್ ಜೊತೆ ಮಾಡಿದ್ದಾರೆ. ಉದಯಕೃಷ್ಣ ಕಥೆ ಬರೆದಿದ್ದಾರೆ.

ಈ ನಡುವೆ ಮೋಹನ್‌ಲಾಲ್ ದೃಶ್ಯಂ 2 ಸಿನಿಮಾ ಶೂಟಿಂಗ್ ಮುಗಿಸಿದ್ದಾರೆ. ಇದೀಗ ಸಿನಿಮಾ ತೆರೆಯ ಮೇಲೆ ಬರೋಕೆ ರೆಡಿಯಾಗಿದೆ. ಇದಲ್ಲದೆ ಮರಕ್ಕಾರ್: ಅರಬಿಕಡಲಿಂಡೆ ಸಿಂಹಂ ಸಿನಿಮಾ ಕೂಡಾ ರಿಲೀಸ್ ಆಗುವುದರಲ್ಲಿದೆ.