ನೇಣು ಬಿಗಿದುಕೊಂಡು ಸ್ಥಿತಿಯಲ್ಲಿ ಮಲಯಾಳಂ ಕಿರುತೆರೆ ನಟ ರಮೇಶ್ ವಾಲಿಯಸಾಲ ಮೃತದೇಹ ಪತ್ತೆಯಾಗಿದೆ ಎಂದು ವರದಿಯಾಗಿದೆ. 

ಸುಮಾರು 22 ವರ್ಷಗಳ ಕಾಲ ಬೆಳ್ಳಿತೆರೆ ಹಾಗೂ ಕಿರುತೆರೆಯಲ್ಲಿ ಬ್ಯುಸಿಯಾಗಿದ್ದ ನಟ ರಮೇಶ್ ವಾಲಿಯಸಾಲ ನಿಧನರಾಗಿದ್ದಾರೆ. ತಿರುವನಂತಪುರಂ ನಿವಾಸಿಯಾಗಿರುವ ರಮೇಶ್ ದೇಹ ಇಂದು ಮನೆಯ ಸೀಲಿಂಗ್‌ಗೆ ನೇಣು ಬಿದುಕೊಂಡಿರುವ ಸ್ಥಿತಿಯಲ್ಲಿ ಪತ್ತೆಯಾಗಿದೆ. ಇದು ಅಸಹಜ ಸಾವು ಎಂದು ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ. 

ಖ್ಯಾತ ನಿರ್ಮಾಪಕ ಸಿ. ಜಯರಾಮ್ ನಿಧನ

ಬಣ್ಣದ ಲೋಕದಲ್ಲಿ ಸಾಕಷ್ಟು ಹೆಸರು ಮಾಡಿದ್ದ ರಮೇಶ್ ಅವರಿಗೆ 54 ವರ್ಷ. ಕೊರೋನಾ ಪ್ಯಾಂಡಮಿಕ್ ಸಮಯದಲ್ಲಿ ಆರ್ಥಿಕ ಸಮಸ್ಯೆಗಳನ್ನು ಎದುರಿಸುತ್ತಿದ್ದರು. ಆದರೆ ಎರಡು ದಿನಗಳ ಹಿಂದೆಯಷ್ಟೇ ಚಿತ್ರೀಕರಣದಲ್ಲಿ ಭಾಗಿಯಾಗಿದ್ದರು ಎನ್ನಲಾಗಿದೆ. ಆದರೆ ಪೊಲೀಸರು ಅಸಹಜ ಸಾವಿನ ಬಗ್ಗೆ ಈಗಾಗಲೇ ತನಿಖೆ ಆರಂಭಿಸಿದ್ದಾರೆ. ರಮೇಶ್ ಸಾವಿನ ಸುದ್ದಿ ಕೇಳಿ ಇಡೀ ಮಾಲಿವುಡ್ ಚಿತ್ರರಂಗ ಶಾಕ್ ಆಗಿದೆ. ನಟನ ಸಾವಿನ ಹಿಂದೆ ಏನೋ ರಹಸ್ಯವಿದೆ ಎಂದು ಎಲ್ಲೆಡೆ ಹೇಳಲಾಗುತ್ತಿದೆ. 

ರಮೇಶ್ ಅವರ ಮೃತದೇಹವನ್ನು ಪತ್ನಿ ಮೊದಲು ನೋಡಿದ್ದು, ಕೂಡಲೇ morgue ಮೆಡಿಕಲ್ ಕಾಲೇಜ್‌ಗೆ ಶಿಫ್ಟ್ ಮಾಡಿದ್ದಾರೆ. ಹಲವು ವರ್ಷಗಳಿಂದ ತಮ್ಮ ಎರಡನೇ ಪತ್ನಿ ಹಾಗೂ ಪುತ್ರನೊಟ್ಟಿಗೆ ಇವರು ವಾಸವಿದ್ದರಂತೆ. 

'ಜೀವನದಲ್ಲಿ ಬಹಳಷ್ಟು ಸಮಸ್ಯೆಗಳಿರುತ್ತದೆ ಆದರೆ ಅದರಿಂದ ತಪ್ಪಿಸಿಕೊಂಡು ಓಡಿ ಹೋಗುವುದರಲ್ಲಿ ಅರ್ಥವಿಲ್ಲ. ನನ್ನ ಆತ್ಮೀಯ ಗೆಳೆಯ ರಮೇಶ್‌ಗೆ ಶ್ರದ್ಧಾಂಜಲಿಗಳು' ಎಂದು ನಿರ್ಮಾಪಕ ಬಾದುಷಾ ಬರೆದುಕೊಂಡಿದ್ದಾರೆ.