Asianet Suvarna News Asianet Suvarna News

Assault Case: ನಟ ದಿಲೀಪ್‌ ಸೇರಿ 6 ಜನರ ಮೊಬೈಲು ಕೋರ್ಟಿಗೆ ಒಪ್ಪಿಸಿ

ಖ್ಯಾತ ನಟಿ ಮೇಲಿನ ಲೈಂಗಿಕ ಕಿರುಕುಳ ಪ್ರಕರಣದ ತನಿಖೆ ನಡೆಸುತ್ತಿದ್ದ ಅಧಿಕಾರಿಗಳ ವಿರುದ್ಧ ಸಂಚು ರೂಪಿಸಿದ ಆರೋಪ ಎದುರಿಸುತ್ತಿರುವ ನಟ ದಿಲೀಪ್‌ ಸೇರಿ 6 ಜನರ ಮೊಬೈಲ್‌ ಫೋನ್‌ಗಳನ್ನು ರಿಜಿಸ್ಟಾರ್‌ ಜನರಲ್‌ಗೆ ಸಲ್ಲಿಸುವಂತೆ ಕೇರಳ ಹೈಕೋರ್ಟ್‌ ಶನಿವಾರ ಸೂಚಿಸಿದೆ.
 

Kerala HC Orders Actor Dileep To Hand Over Mobile Phones to Registrar General gvd
Author
Bangalore, First Published Jan 30, 2022, 10:56 AM IST | Last Updated Jan 30, 2022, 10:57 AM IST

ಕೊಚ್ಚಿ (ಜ.30): ಖ್ಯಾತ ನಟಿ ಮೇಲಿನ ಲೈಂಗಿಕ ಕಿರುಕುಳ ಪ್ರಕರಣದ ತನಿಖೆ ನಡೆಸುತ್ತಿದ್ದ ಅಧಿಕಾರಿಗಳ ವಿರುದ್ಧ ಸಂಚು ರೂಪಿಸಿದ ಆರೋಪ ಎದುರಿಸುತ್ತಿರುವ ನಟ ದಿಲೀಪ್‌ (Dileep) ಸೇರಿ 6 ಜನರ ಮೊಬೈಲ್‌ ಫೋನ್‌ಗಳನ್ನು (Mobiles) ರಿಜಿಸ್ಟಾರ್‌ ಜನರಲ್‌ಗೆ ಸಲ್ಲಿಸುವಂತೆ ಕೇರಳ ಹೈಕೋರ್ಟ್‌ (Kerala HighCourt) ಶನಿವಾರ ಸೂಚಿಸಿದೆ.

ಆರೋಪಿ ದಿಲೀಪ್‌ ಮತ್ತಿತರರು ಮೊಬೈಲ್‌ ಫೋನ್‌ಗಳನ್ನು ಪರೀಕ್ಷೆಗೆ ಕಳುಹಿಸಲು ನಿರಾಕರಿಸುವ ಮೂಲಕ ಸಾಕ್ಷ್ಯ ನಾಶಕ್ಕೆ ಪ್ರಯತ್ನಿಸುತ್ತಿದ್ದಾರೆ ಎಂದು ತನಿಖಾ ತಂಡ ಆರೋಪಿಸಿತ್ತು. ಈ ಹಿನ್ನೆಲೆಯಲ್ಲಿ ಕೇರಳ ಹೈಕೋಟ್‌ ಈ ತಾಕೀತು ಮಾಡಿದೆ. ಏತನ್ಮಧ್ಯೆ, ಆರೋಪಿಗಳು ಸಲ್ಲಿಸಿರುವ ನಿರೀಕ್ಷಣಾ ಜಾಮೀನು ಅರ್ಜಿ ವಿಚಾರಣೆಯನ್ನು ಹೈಕೋರ್ಟ್‌ ಫೆಬ್ರವರಿ 2ಕ್ಕೆ ಮುಂದೂಡಿದೆ.

2017 ಫೆ. 17ರಂದು ತಮಿಳು, ತೆಲುಗು ಮತ್ತು ಮಲಯಾಳಂ ಸಿನಿಮಾಗಳಲ್ಲಿ ನಟಿಸಿರುವ ನಟಿಯ ಕಾರಿಗೆ ನುಗ್ಗಿದ ಆರೋಪಿಗಳು ಅಪಹರಿಸಿ ಎರಡು ಗಂಟೆಗಳ ಕಾಲ ಆಕೆ ಮೇಲೆ ಅತ್ಯಾಚಾರ ಎಸಗಿ, ತಮ್ಮ ಕೃತ್ಯವನ್ನು ಚಿತ್ರೀಕರಿಸಿದ್ದರು. ನಂತರ ವಿಡಿಯೋ ತೋರಿಸಿ ಬ್ಲಾಕ್‌ಮೇಲ್‌ ಮಾಡುತ್ತಿದ್ದರು ಎಂಬ ಗಂಭೀರ ಆರೋಪ ಕೇಳಿಬಂದಿದೆ.

Assault Case: ಅತ್ಯಾಚಾರ ಎಸಗಿದ ಆರೋಪಿ ಪಲ್ಸರ್‌ ಸುನಿ ನ್ಯಾಯಾಲಯದ ಮುಂದೆ?

ಕ್ರೈಂ ಬ್ರಾಂಚ್ ರೇಡ್: ಜನವರಿ 13 ರಂದು ಆಲುವಾದಲ್ಲಿರುವ ನಟ ದಿಲೀಪ್ ಅವರ ಮನೆಯ ಮೇಲೆ ಕೇರಳ ಕ್ರೈಂ ಬ್ರಾಂಚ್ (Crime Branch) ಅಧಿಕಾರಿಗಳ ತಂಡ ದಾಳಿ ನಡೆಸಿದೆ. ಪೊಲೀಸರು ಅಲುವಾ(Aluva) ಮ್ಯಾಜಿಸ್ಟ್ರೇಟ್ ನ್ಯಾಯಾಲಯದಿಂದ ಅನುಮತಿ ಪಡೆದ ನಂತರ ದಾಳಿ ಪ್ರಾರಂಭವಾಗಿದೆ. 2017ರ ಫೆಬ್ರವರಿಯಲ್ಲಿ ಮಹಿಳಾ ನಟಿಯೊಬ್ಬರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ದೃಶ್ಯಾವಳಿಗಳು ದಿಲೀಪ್ ಬಳಿ ಇದೆ ಎಂದು ಆರೋಪಿಸಿ ಬಾಲಚಂದ್ರಕುಮಾರ್ ಎಂಬವರ ಹೇಳಿಕೆಯನ್ನು ಕ್ರೈಂ ಬ್ರಾಂಚ್ ದಾಖಲಿಸಿದ ಒಂದು ದಿನದ ನಂತರ ಪೋಲೀಸ್ ಈ ಕ್ರಮ ಕೈಗೊಂಡಿದೆ. 

ಪಲ್ಸರ್ ಸುನಿ ಎಂಬಾತನನ್ನು ಅಪಹರಣಕ್ಕೆ ನೇಮಿಸಿದ ಆರೋಪ ದಿಲೀಪ್ ಮೇಲಿದೆ. ಸಹೋದ್ಯೋಗಿ ಮೇಲೆ ಲೈಂಗಿಕ ದೌರ್ಜನ್ಯ ಹಾಗೂ ಕಿಡ್ನಾಪ್ ಆರೋಪವನ್ನು ಅವರು ಎದುರಿಸುತ್ತಿದ್ದಾರೆ. ಪೊಲೀಸ್ ವರಿಷ್ಠಾಧಿಕಾರಿ ಮೋಹನಚಂದ್ರನ್ ನೇತೃತ್ವದ 20 ಸದಸ್ಯರ ಕ್ರೈಂ ಬ್ರಾಂಚ್ ತಂಡವು ದಿಲೀಪ್ ಅವರ ‘ಪದ್ಮಸರೋವರಂ’ ಎಂಬ ಹೆಸರಿನ ಮನೆ ಮೇಲೆ ದಾಳಿ ನಡೆಸಿದೆ. ಹಲ್ಲೆ ಪ್ರಕರಣದ ತನಿಖೆ ನಡೆಸಿದ ಪೊಲೀಸ್ ಅಧಿಕಾರಿಗಳ ಮೇಲೆ ಹಲ್ಲೆ ನಡೆಸಲು ಸಂಚು ರೂಪಿಸಲಾಗಿದೆ ಎಂದು ಬಾಲಚಂದ್ರಕುಮಾರ್ ಆರೋಪಿಸಿದ ಮನೆ ಇದಾಗಿದೆ.

Assault Case: 5 ವರ್ಷ ಬಳಿಕ ಮೌನ ಮುರಿದ ಭಾವನಾ ಮೆನನ್

ಬಾಲಚಂದ್ರಕುಮಾರ್ ಅವರ ಆರೋಪದ ನಂತರ, ಕ್ರೈಂ ಬ್ರಾಂಚ್ ಕಳೆದ ವಾರ ದಿಲೀಪ್ ವಿರುದ್ಧ ಎಫ್ಐಆರ್ ದಾಖಲಿಸಿದೆ. ಈ ಎಫ್‌ಐಆರ್‌ಗೆ ಸಂಬಂಧಿಸಿದಂತೆ ದಿಲೀಪ್ ಮನೆ ಮೇಲೆ ದಾಳಿ ನಡೆದಿದೆ. ನಟಿಯ ಲೈಂಗಿಕ ದೌರ್ಜನ್ಯದ ದೃಶ್ಯಗಳು ದಿಲೀಪ್ ಬಳಿ ಇದೆಯೇ ಎಂದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಮಲಯಾಳಂ ಚಾನೆಲ್‌ಗಳ ಪ್ರಕಾರ, ಅಧಿಕಾರಿಗಳು ಬಂದಾಗ ಗೇಟ್‌ಗೆ ಬೀಗ ಹಾಕಲಾಗಿತ್ತು. ಪೊಲೀಸ್ ಅಧಿಕಾರಿಗಳು ಕಾಂಪೌಂಡ್ ಗೋಡೆ ಹಾರಿ ಒಳಗೆ ಪ್ರವೇಶಿಸಿದರೂ, ದಿಲೀಪ್ ಅವರ ಸಹೋದರಿ ನಂತರ ಆಗಮಿಸಿ ಅವರಿಗೆ ಗೇಟ್ ತೆರೆದರು. ಕೆಲ ಹೊತ್ತಿನಲ್ಲಿ ದಿಲೀಪ್ ಮನೆ ತಲುಪಿದ್ದಾರೆ ಎಂದು ತಿಳಿದುಬಂದಿದೆ. ದಿಲೀಪ್ ಅವರನ್ನು ಪ್ರಶ್ನಿಸಿಲ್ಲ ಎಂದು ಎಸ್ಪಿ ಮೋಹನಚಂದ್ರನ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.

Latest Videos
Follow Us:
Download App:
  • android
  • ios