ಕಾಲಿವುಡ್, ಟಾಲಿವುಡ್‌ನಲ್ಲಿ ಹೆಸರು ಮಾಡಿದ ನಟಿ ಕೀರ್ತಿ ಸುರೇಶ್ ಫನ್ ಲವಿಂಗ್ ಹುಡುಗಿ. ಮುಕ್ತವಾಗಿ ಮಾತನಾಡುವ, ನಗುವ ಸಿಂಪಲ್ ಚೆಲುವೆ ಮಹಾನಟಿಯಂತಹ ಸಿನಿಮಾ ಮೂಲಕ ತಾವು ಟ್ಯಾಲೆಂಟೆಡ್ ಅನ್ನೋದನ್ನೂ ಪ್ರೂವ್ ಮಾಡಿದ್ದಾರೆ.

ಚೈಲ್ಡಿಶ್ ಆಗಿ ಕೀಟಲೆ ಮಾಡುವ ಈ ಸುಂದರಿ ಇತ್ತೀಚೆಗೆ ಏನ್ ಮಾಡಿದ್ದಾರೆ ನೋಡಿ... ಸೆಟ್‌ನಲ್ಲಿ ನಿರ್ದೇಶಕರನ್ನು ಅಟ್ಟಾಡಿಸಿ ಹೊಡೆದಿದ್ದಾರೆ. ನಿತಿನ್ ಮತ್ತು ಕೀರ್ತಿ ಸುರೇಶ್ ಅಭಿನಯದ ರಂಗ್‌ ದೇ ಸಿನಿಮಾ ಶೂಟಿಂಗ್ ಆರಂಭವಾಗಿ 2 ವಾರ ಆಗಿದೆ. ಅಷ್ಟರಲ್ಲೇ ನಿರ್ದೇಶಕರನ್ನು ಹೀಗೆ ಅಟ್ಟಾಡಿಸಿ ಹೊಡೆಯೋದಾ..?

ಟ್ವಿಟರ್‌ನಲ್ಲಿ ಸುದ್ದಿ ಮಾಡೋ ಬದಲು ಬಡ ಜನಕ್ಕೆ ಉಚಿತ ಆಹಾರ ನೀಡಿ: ಕಂಗನಾಗೆ ಸಿಂಗರ್ ಟಾಂಗ್

ದುಬೈನಲ್ಲಿ ಶೂಟಿಂಗ್ ನಡೆಯುತ್ತಿದೆ. ಶೂಟಿಂಗ್ ಮಧ್ಯೆ ಕೀರ್ತಿ ಸುರೇಶ್ ರಿಲ್ಯಾಕ್ಸ್ ಆಗೋ ಫೋಟೋ ಶೇರ್ ಮಾಡಿದ್ರು ನಿತಿನ್. ನಾನೂ ಡೈರೆಕ್ಟರ್ ದುಬೈ ಬಿಸಲಿಗೆ ಬೆವರಿಳಿಸಿಕೊಂಡು ಕಷ್ಟಪಡ್ತಿದ್ರೆ ಕೀರ್ತಿ ರಿಲ್ಯಾಕ್ಸ್ ಮಾಡ್ತಿದ್ದಾರೆ ಎಂದು ಬರೆದಿದ್ದರು.

ಈಗ ನಟಿ ನಿರ್ದೇಶಕ ನಿಂಕಿ ಅವರನ್ನು ಓಡಿಸಿಕೊಂಡು ಹೊಡೆದಿದ್ದಾರೆ. ವೆಂಕಿ ಅಟ್ಲುರಿ ಅವರನ್ನು ಓಡಿಸಿ ಕೊಡೆಯಲ್ಲಿ ಹೊಡೆಯೋ ವಿಡಿಯೋ ಪೋಸ್ಟ್ ಮಾಡಿದ್ದಾರೆ ನಟಿ. ಫೋಟೋ ತೆಗೆದು ಪೋಸ್ಟ್ ಮಾಡಿದ್ದಕ್ಕೆ ರಿವೆಂಜ್ ತಗೊಂಡಿದ್ದಾರೆ ನಟಿ. ಹಾಗೇ ನಿತಿನ್‌ಗೂ ರಿವೆಂಜ್ ತಗೊಳೋದಾಗಿ ಎಚ್ಚರಿಸಿದ್ದಾರೆ.

ಅಕ್ಷಯ್ ಕುಮಾರ್ ಜೊತೆ ಸೈಫ್ ಅಲಿ ಖಾನ್ ಮಗಳ ರೊಮ್ಯಾನ್ಸ್..!

ರಂಗ್‌ ದೇ ಸಿನಿಮಾ ರೊಮ್ಯಾಂಟಿಕ್ ಸ್ಟೋರಿಯಾಗಿದ್ದು, ದೇವಿ ಶ್ರೀ ಅವರ ಸಂಗೀತವಿದೆ. ಸಿನಿಮಾ 2021ರಲ್ಲಿ ರಿಲೀಸ್ ಆಗಲಿದ್ದು ಕೊನೆಯ ಹಂತದ ಶೂಟಿಂಗ್ ನಡೆಯುತ್ತಿದೆ.