ದೆಹಲಿ ರೈತರ ಪ್ರತಿಭಟನೆ ಬಗ್ಗೆ ಟ್ವೀಟ್ ಮಾಡಿದ ಮೇಲೆ ನಟಿ ಕಂಗನಾ ರಣಾವತ್ ಅವರನ್ನು ಬಹಳಷ್ಟು ಸೆಲೆಬ್ರಿಟಿಗಳು ಟೀಕಿಸುತ್ತಿದ್ದಾರೆ. ಶಾಹೀನ್‌ಭಾಗ್ ಅಜ್ಜಿಯ ಬಗ್ಗೆ ಮಾಡಿದ ಟ್ವೀಟ್ ಅಂತೂ ಭಾರೀ ಟೀಕೆಗೆ ಕಾರಣವಾಗಿದೆ.

ಇದೀಗ ಇನ್ನೊಬ್ಬ ಟಾಪ್ ಗಾಯಕ ನಟಿಗೆ ಟಾಂಗ್ ಕೊಟ್ಟಿದ್ದಾರೆ. ಪಂಜಾಬಿ ಸಿಂಗರ್ ಮತ್ತು ನಟ ದಿಲ್‌ಜಿತ್ ದೋಸಂಜ್ ಕಂಗನಾ ಅವರನ್ನು ಟೀಕಿಸಿದ ಬೆನ್ನಲ್ಲೇ ಇದೀಗ ಮಿಕಾ ಸಿಂಗ್ ಅವರು ಟೀಕಿಸಿದ್ದಾರೆ.

ಶಾಹೀನ್‌ಭಾಗ್ ಅಜ್ಜಿ ಬಗ್ಗೆ ಸುಳ್ಳು ಟ್ವೀಟ್: ಕಂಗನಾ ವಿರುದ್ಧ ಸಿಖ್ ಸಿಂಗರ್ ಕಿಡಿ

ಜಾವೇದ್ ಅಖ್ತರ್, ಮಹಾರಾಷ್ಟ್ರ ಸರ್ಕಾರ, ಹಾಗೂ ಇತರ ಗುಂಪುಗಳಿಂದ ಟಾರ್ಗೆಟ್ ಆಗ್ತಿದ್ದೇನೆ ಎಂದು ನಟಿ ಮಾಡಿದ ಟ್ವೀಟ್‌ಗೆ ಪ್ರತಿಕ್ರಿಯಿಸಿದ ಮಿಕಾ ಸಿಂಗ್, ನಿಮ್ಮಲ್ಲಿ ತಟ್ಟಂತ ದೇಶ ಭಕ್ತಿ ಹುಟ್ಟೋಕೆ ಕಾರಣವೇನು ಎಂದು ಪ್ರಶ್ನಿಸಿದ್ದಾರೆ.

ನೀವು ಒಳ್ಳೆಯ ನಟಿ. ಸುಂದರ ನಟಿ. ನೀವ್ಯಾಕೆ ಈ ರೀತಿ ಮಾತನಾಡುತ್ತಿದ್ದೀರಿ..? ನಾವು ಪ್ರತಿ ದಿನ 5 ಲಕ್ಷ ಬಡ ಜನರಿಗೆ ಆಹಾರ ಒದಗಿಸುತ್ತಿದ್ದೇವೆ. ನೀವು ನಮ್ಮೊಡನೆ ಸೇರಿ 20 ಜನರಿಗಾದರೂ ಆಹಾರ ಒದಗಿಸಿ. ಟ್ವಿಟರ್ ಮತ್ತು ನ್ಯೂಸ್‌ನಲ್ಲಿ ದೊಡ್ಡ ಜನ ಆಗೋದು ಅಷ್ಟು ದೊಡ್ಡ ವಿಷ್ಯ ಅಲ್ಲ. ಆದ್ರೆ ಯಾವತ್ತೂ ನಾನು ನಿಮ್ಮ ದೊಡ್ಡ ಫ್ಯಾನ್ ಎಂದಿದ್ದಾರೆ.