ಕೌನ್ ಬನೇಗಾ ಕರೋಡ್‌ಪತಿಯಲ್ಲಿ 1 ಕೋಟಿ ಗೆದ್ದ ಐಪಿಎಸ್ ಆಫೀಸರ್ ಮೋಹಿತಾ ಶರ್ಮಾ ಗಾರ್ಗ್ ಇನ್ನಷ್ಟು ಲಕ್ಕಿಯಾಗಿದ್ದಾರೆ. ಕೆಬಿಸಿಯ 12ನೇ ಸೀಸನ್‌ನಲ್ಲಿ ಈ ಅಧಿಕಾರಿ 1 ಕೋಟಿ ಗೆದ್ದಿದ್ದಾರೆ.

ಶೋನಲ್ಲಿ ಗೆದ್ದಾದ ಮೇಲೆ ಇನ್ನಷ್ಟು ಲಕ್ಕಿಯಾಗಿದ್ದಾರೆ ಮೋಹಿತಾ. ಒಂದೇ ಮ್ಯಾಗಿ ಪ್ಯಾಕೆಟ್‌ನಲ್ಲಿ ಎರಡು ಮಸಾಲೆ ಪ್ಯಾಕೆಟ್ ಸಿಕ್ಕಿದ್ರೆ ಹೇಗಿರ್ಬೋದು..? ಅನಿರೀಕ್ಷಿತವಾಗಿ ಹಾಗೇನಾದ್ರೂ ಸಿಕ್ಕಿದ್ರೆ ಸಿಕ್ಕಾಪಟ್ಟೆ ಖುಷಿಯಾಗುತ್ತೆ ಅಲ್ವಾ..?

ಕೋಟ್ಯಾಧಿಪತಿಯಾದ ಮಹಿಳಾ IPS ಅಧಿಕಾರಿ

ಕೋಟಿಪತಿಯಾದ ನಂತರ ಮೋಹಿತಾ ಅವರಿಗೆ ಮ್ಯಾಗಿ ಪ್ಯಾಕೆಟ್‌ನಲ್ಲಿ ಎರಡು ಮಸಾಲಾ ಸಾಶೆಟ್ಸ್ ಸಿಕ್ಕಿದೆ. ಕೆಬಿಸಿ12ನಲ್ಲಿ ಗೆದ್ದಾದ ನಂತರ 2 ಮ್ಯಾಗಿ ಮಸಾಲಾ ಸಿಕ್ಕಿದೆ. ಈ ಹಿಂದೆ ಇಷ್ಟೊಂದು ಲಕ್ಕಿ ಅಂತ ಅನಿಸಿಯೇ ಇಲ್ಲ. ದೇವರು ಕರುಣಾಮಯಿ ಎಂದು ಮೋಹಿತಾ ಟ್ವೀಟ್ ಮಾಡಿದ್ದಾರೆ.

ಮೋಹಿತಾ ಅವರ ಟ್ವೀಟ್ ವೈರಲ್ ಆಗಿದೆ. ಇದಕ್ಕೆ 2200ಕ್ಕೂ ಹೆಚ್ಚು ಲೈಕ್ಸ್ ಬಂದಿದೆ. ಒಂದೇ ಮ್ಯಾಗಿ ಪ್ಯಾಕೆಟ್‌ನಲ್ಲಿ ಎರಡು ಮಸಾಲೆ ಪ್ಯಾಕೆಟ್ ಸಿಗೋದು ಲೈಫ್‌ನಲ್ಲಿ ಒಂದೇ ಸಲ ಅಲ್ವಾ..? ಕೆಬಿಸಿಯಲ್ಲಿ ಗೆಲ್ಲೋದು ಓಕೆ, ಆದ್ರೆ ಎರಡು ಮಸಾಲಾ ಪ್ಯಾಕೆಟ್ ಸಿಗೋದು ನಿಜಕ್ಕೂ ಎಚೀವ್‌ಮೆಂಟ್ ಎಂದು ನೆಟ್ಟಿಗರು ಕಮೆಂಟ್ ಮಾಡಿದ್ದಾರೆ.