Asianet Suvarna News Asianet Suvarna News

KBCಗೆ 21 ವರ್ಷ: ಸೀಸನ್ 13ರ ಶೂಟಿಂಗ್ ಶುರು ಮಾಡಿದ ಅಮಿತಾಭ್

  • ಬಿಗ್‌ಬಿ ನಡೆಸಿಕೊಡೋ ಕೆಬಿಸಿಗೆ 21 ವರ್ಷ
  • ಸೀಸನ್ 13ಕ್ಕೆ ಶೂಟಿಂಗ್ ಆರಂಭಿಸಿದ ಅಮಿತಾಭ್ ಬಚ್ಚನ್
KBC 13 Schedule of Amitabh Bachchans show Kaun Banega Crorepati 13 released dpl
Author
Bangalore, First Published Aug 11, 2021, 2:39 PM IST
  • Facebook
  • Twitter
  • Whatsapp

ಎಲ್ಲ ವಯಸ್ಸಿನವರೂ ಆಸಕ್ತಿಯಿಂದ ವೀಕ್ಷಿಸೋ ಕೌನ್ ಬನೇಗಾ ಕರೋಡ್‌ಪತಿ ಸೀಸನ್ 13 ಕುರಿತು ಮಹತ್ವದ ಡೇಟ್ಸ್ ಹೊರಬಿದ್ದಿದೆ. ಬರೋಬ್ಬರಿ 21 ವರ್ಷಗಳನ್ನು ಪೋರೈಸಿದಿ ಶೋ 13ನೇ ಸೀಸನ್ ಸದ್ಯದಲ್ಲೇ ಆರಂಭವಾಗಲಿದ್ದು ಬಾಲಿವುಡ್ ಬಿಗ್‌ ಬಿ ಅಮಿತಾಭ್ ಬಚ್ಚನ್ ಈಗಾಗಲೇ ಶೂಟಿಂಗ್ ಕೂಡಾ ಶುರು ಮಾಡಿದ್ದಾರೆ. ಶೋ ಡೇಟ್ ಹೊರಬೀಳುತ್ತಿದ್ದಂತೆ ಶೋ ಪ್ರಿಯರು ಇನ್ನಷ್ಟು ಕುತೂಹಲದಿಂದ ಕಾಯುತ್ತಿದ್ದಾರೆ.

21 ವರ್ಷದ ಶೋ ಕುರಿತು ನೆನಪಿಸಿಕೊಂಡ ಅಮಿತಾಭ್ ಬಚ್ಚನ್ ಇಲ್ಲಿವರೆಗಿನ ನಿರಂತರ ಪ್ರೀತಿ ಮತ್ತು ಬೆಂಬಲಕ್ಕಾಗಿ ಅಭಿಮಾನಿಗಳಿಗೆ ಥ್ಯಾಂಕ್ಸ್ ಹೆಳಿದ್ದಾರೆ. ನಟ ಶೋ ಶೂಟಿಂಗ್‌ನ ಫೋಟೋ ಒಂದನ್ನು ಅಭಿಮಾನಿಗಳೊಂದಿಗೆ ಶೇರ್ ಮಾಡಿದ್ದಾರೆ. 2000 ದಿಂದ ಆರಂಭಿಸಿದ ಇದೀಗ 21 ವರ್ಷಗಳಾದವು. ಮಂಗಳವಾರ ನಟ ಕೆಬಿಸಿಯ 13ನೇ ಸೀಸನ್‌ಗಾಗಿ ಶೂಟಿಂಗ್ ಆರಂಭಿಸಿದ್ದಾರೆ. 2000ದಿಂದಲೂ ಅಮಿತಾಭ್ ಅವರೇ ಈ ಕಾರ್ಯಕ್ರಮ ನಡೆಸಿಕೊಡುತ್ತಿದ್ದು 2007ರಲ್ಲಿ ಮಾತ್ರ ಒಮ್ಮೆ ಶಾರೂಖ್ ಖಾನ್ ಕಾರ್ಯಕ್ರಮ ನಡೆಸಿಕೊಟ್ಟಿದ್ದರು. 

ಕೆಬಿಸಿ ಎಂದು ಜನ ಪ್ರೀತಿಯಿಂದ ಕರೆಯಫ ಕಾರ್ಯಕ್ರಮ ಸೋಮವಾರದಿಂದ ಶುಕ್ರವಾರದವರೆಗೆ ರಾತ್ರಿ 9 ಗಂಟೆಗೆ ವಾರಕ್ಕೆ ಐದು ಬಾರಿ ಪ್ರಸಾರವಾಗುತ್ತದೆ. ದಂಗಲ್ ಮತ್ತು ಚಿಚೋರ್ ನಂತಹ ಚಿತ್ರಗಳಿಗೆ ಹೆಸರುವಾಸಿಯಾದ ನಿರ್ದೇಶಕ ನಿತೇಶ್ ತಿವಾರಿ, ಈ ವರ್ಷ ಕೆಬಿಸಿಯ ಪ್ರಚಾರ ಅಭಿಯಾನದ ಭಾಗವಾಗಿ ಬಿಡುಗಡೆಯಾದ ಸಮ್ಮಾನ್ ಎಂಬ ಮೂರು ಕಿರುಚಿತ್ರಗಳಿಗೆ ಸಹಾಯ ಮಾಡಿದ್ದಾರೆ.

ಸೋನಿ ಟಿವಿ ಕಾರ್ಯಕ್ರಮವನ್ನು ಆಗಸ್ಟ್ 23 ರಂದು ಪ್ರಸಾರ ಮಾಡಲಾಗುತ್ತದೆ ಎಂದು ಘೋಷಿಸಿದೆ. ಸಿನಿಮಾ ವಿಚಾರವಾಗಿ ಬಚ್ಚನ್ ಥ್ರಿಲ್ಲರ್ 'ಚೆಹ್ರೆ', ನಾಗರಾಜ್ ಮಂಜುಲೆ ಅವರ "ಜುಂಡ್", ಕರಣ್ ಜೋಹರ್ ಅವರ 'ಬ್ರಹ್ಮಾಸ್ತ್ರ' ಮತ್ತು ಅಜಯ್ ದೇವಗನ್ ನಿರ್ದೇಶನದ 'ಮೇಡೇ' ನಂತಹ ಪ್ರಾಜೆಕ್ಟ್ ಮಾಡುತ್ತಿದ್ದಾರೆ.

Follow Us:
Download App:
  • android
  • ios