ಟಿವಿ ರಿಯಾಲಿಟಿ ಶೋ ಕೌನ್ ಬನೇಗಾ ಕರೋಡ್ಪತಿ ಮತ್ತೆ ಬರ್ತಿದೆ. ಟಿವಿ ಶೋ ಜೊತೆ ಅಮಿತಾಭ್ ಬಚ್ಚನ್ ಸಂಭಾವನೆ ಸದ್ಯ ಚರ್ಚೆಯಲ್ಲಿದೆ.
ಪ್ರಸಿದ್ಧ ಟಿವಿ ರಿಯಾಲಿಟಿ ಶೋ (TV reality show) ಕೌನ್ ಬನೇಗಾ ಕರೋಡ್ಪತಿ (kaun banega crorepati) ಮತ್ತೊಮ್ಮೆ ಪ್ರೇಕ್ಷಕರನ್ನು ರಂಜಿಸಲು ಬರ್ತಿದೆ. ಕಳೆದ 25 ವರ್ಷಗಳಿಂದ ಈ ಪ್ರೋಗ್ರಾಂ ಪ್ರೇಕ್ಷಕರ ಮನಸ್ಸು ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಕೌನ್ ಬನೇಗಾ ಕರೋಡ್ ಪತಿ ಅಂದ್ರೆ ಮೊದಲು ನೆನಪಾಗೋದು ಬಾಲಿವುಡ್ ಬಿಗ್ ಬಿ ಅಮಿತಾಭ್ ಬಚ್ಚನ್ (Bollywood Big B Amitabh Bachchan). ಬಹುತೇಕ ಸ್ಪರ್ಧಿಗಳು ಹಣ ಗೆಲ್ಲೋದಕ್ಕಿಂತ ಅಮಿತಾಬ್ ಬಚ್ಚನ್ ಭೇಟಿ ಮಾಡೋಕೆ, ಅವ್ರ ಜೊತೆ ಮಾತನಾಡೋಕೆ ಆಸಕ್ತಿ ತೋರ್ತಾರೆ. ಯಾವಾಗ ಕೌನ್ ಬನೇಗಾ ಕರೋಡ್ ಪತಿ ಶುರುವಾಗುತ್ತೆ ಅಂತ ಕಾದು ಕುಳಿತುಕೊಳ್ಳುವವರ ಸಂಖ್ಯೆ ಕೂಡ ಕಡಿಮೆ ಏನಿಲ್ಲ. ಈಗ ಬಚ್ಚನ್ ಮತ್ತೆ ಕಿರು ತೆರೆ ಮೇಲೆ ಬರ್ತಿದ್ದಾರೆ. ಈಗಾಗಲೇ ಕೌನ್ ಬನೇಗಾ ಕರೋಡ್ ಪತಿ ಪ್ರೋಮೋ ಬಿಡುಗಡೆಯಾಗಿದೆ. ಈ ಬಾರಿ ಕಾರ್ಯಕ್ರಮದ ಟ್ಯಾಗ್ಲೈನ್ ಜಹಾ ಅಕಲ್ ಹೈ, ವಹಾ ಅಕಡ್ ಹೈ. ಈ ಬಾರಿ ಕೌನ್ ಬನೇಗಾ ಕರೋಡ್ ಪತಿ ಪ್ರೋಮೋ ಮಾತ್ರವಲ್ಲ ಬಿಗ್ ಬಿ ಅವರ ಶುಲ್ಕದ ಬಗ್ಗೆಯೂ ಚರ್ಚೆ ಆಗ್ತಿದೆ.
ಕೌನ್ ಬನೇಗಾ ಕರೋಡ್ಪತಿ 17 ಗಾಗಿ ಅಮಿತಾಬ್ ಬಚ್ಚನ್ ಅವರ ಶುಲ್ಕ ಎಷ್ಟು ಎಂಬ ಬಗ್ಗೆ ಅನೇಕ ಮಾಧ್ಯಮಗಳು ವರದಿ ಮಾಡ್ತಿವೆ. ವರದಿ ಒಂದರ ಪ್ರಕಾರ, ಕೌನ್ ಬನೇಗಾ ಕರೋಡ್ಪತಿ 17 ಅನ್ನು ಆಯೋಜಿಸುತ್ತಿರುವ ಅಮಿತಾಬ್ ಬಚ್ಚನ್ ಪ್ರತಿ ಸಂಚಿಕೆಗೆ 5 ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಿದ್ದಾರೆ ಎನ್ನಲಾಗ್ತಿದೆ. ಆದ್ರೆ ಈ ಬಗ್ಗೆ ಅಮಿತಾಬ್ ಬಚ್ಚನ್ ಆಗ್ಲಿ ಕೌನ್ ಬನೇಕಾ ಕರೋಡ್ ಪತಿ ನಿರ್ವಾಹಕರಾಗ್ತಿ ಯಾವುದೇ ಮಾಹಿತಿ ನೀಡಿಲ್ಲ.
ಕೌನ್ ಬನೇಗಾ ಕರೋಡ್ ಪತಿ ಶೋ ಜುಲೈ 3, 2025 ರಂದು ತನ್ನ 25 ವರ್ಷಗಳನ್ನು ಪೂರೈಸಿದೆ. ಕಳೆದ ವರ್ಷ ಕೌನ್ ಬನೇಗಾ ಕರೋಡ್ ಪತಿ 16 ಬಂದಿತ್ತು. ಅದೇ ಬಿಗ್ ಬಿಯ ಕೊನೆಯ ಕೌನ್ ಬನೇಗಾ ಕರೋಡ್ ಪತಿಯ ಸೀಸನ್ ಅಂತ ಹೇಳಲಾಗಿತ್ತು. ಆದ್ರೆ ಸ್ವಲ್ಪ ಸಮಯದ ಹಿಂದೆ ಸೀಸನ್ 17 ಅನ್ನು ಘೋಷಣೆ ಮಾಡಲಾಗಿದೆ. ಈ ಗೇಮ್ ಶೋ ಆಗಸ್ಟ್ 11, 2025 ರಂದು ಶುರುವಾಗ್ತಿದೆ. ತಯಾರಕರು KBC 17 ರ ಮೊದಲ ಪ್ರೋಮೋವನ್ನು ಬಿಡುಗಡೆ ಮಾಡಿದ್ದಾರೆ. ಇದರಲ್ಲಿ ಟಿವಿ ನಟಿ ಸುಂಬುಲ್ ತೌಕೀರ್ ಖಾನ್ ವೇಟರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಪ್ರೋಮೋದ ಕೊನೆಯಲ್ಲಿ, ಅಮಿತಾಬ್ ಬಚ್ಚನ್ ಸ್ವತಃ ಕಾರ್ಯಕ್ರಮ ಮತ್ತೆ ಬರುತ್ತಿದೆ ಅನ್ನೋದನ್ನು ಕಾಣ್ಬಹುದು.
ಕೊನೆಯ ಸೀಸನ್ ಅಂದರೆ ಸೀಸನ್ 16 ಕ್ಕೆ ಅಮಿತಾಬ್ ಬಚ್ಚನ್ ಪ್ರತಿ ತಿಂಗಳು ಸುಮಾರು 60 ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದರು. ಇಡೀ ಸೀಸನ್ನ ಒಟ್ಟು ಶುಲ್ಕ 250 ಕೋಟಿ ರೂಪಾಯಿಗಳು ಎನ್ನಲಾಗ್ತಿದೆ. ಈ ಬಾರಿಯೂ ಎಂದಿನಂತೆ ಸೋನಿ ಟಿವಿ ಮತ್ತು ಸೋನಿ ಎಲ್ಐವಿ ಅಪ್ಲಿಕೇಶನ್ನಲ್ಲಿ ಪ್ರಸಾರವಾಗುವ ನಿರೀಕ್ಷೆಯಿದೆ.ಕೌನ್ ಬನೇಗಾ ಕರೋಡ್ ಪತಿ ಶೋ ಬಗ್ಗೆ ಕೆಲ ದಿನಗಳ ಹಿಂದೆ ಅಭಿಷೇಕ್ ಬಚ್ಚನ್ ಕೂಡ ಇನ್ಸ್ಟಾಗ್ರಾಮ್ ನಲ್ಲಿ ಮಾಹಿತಿ ನೀಡಿದ್ದರು. ದಿ ಬಾಸ್. ಅವರು ಹಿಂತಿರುಗುತ್ತಿದ್ದಾರೆ. ಅಪಾಯಿಂಟ್ಮೆಂಟ್, ಕೆಬಿಸಿಯೊಂದಿಗೆ ಅಪಾಯಿಂಟ್ಮೆಂಟ್... ಇಂಗ್ಲಿಷ್ ಮಾತನಾಡುತ್ತಾರೆ! #KBC2025 ಎಂದು ಬರೆದಿದ್ದರು.
