Asianet Suvarna News Asianet Suvarna News

ವಾಟ್ಸಪ್ ಚಾನೆಲ್‌ನಲ್ಲಿ ಪ್ರಧಾನಿ ಮೋದಿ, ಅಕ್ಷಯ್‌ಕುಮಾರ್‌ ಹಿಂದಿಕ್ಕಿದ ಕತ್ರಿನಾ ಕೈಫ್‌!

ನಟ-ನಟಿಯರನ್ನು ಹೊರತುಪಡಿಸಿ ಭಾರತದ ಪ್ರಧಾನಿ ನರೇಂದ್ರ ಮೋದಿ 'ರಾಜಕೀಯ ನಾಯಕರು'ಗಳಲ್ಲಿ ಟಾಪ್  ಎನಿಸಿಕೊಂಡಿದ್ದಾರೆ. ಕತ್ರಿನಾ ಕೈಫ್, ಅಕ್ಷಯ್ ಕುಮಾರ್ ಹಾಗೂ ಸನ್ನಿ ಲಿಯೋನ್ ಹೊರತಪಡಿಸಿದರೆ ವೈಯಕ್ತಿಕ ಸೆಲೆಬ್ರಿಟಿಗಳ ಪಟ್ಟಿಯಲ್ಲಿ ಪ್ರಧಾನಿ ಮೋದಿ ಕೂಡ ಟಾಪ್  ಸ್ಥಾನದಲ್ಲಿದ್ದಾರೆ.
 

Katrina kaif stands top position in WhatsApp channel most followed Indians srb
Author
First Published Sep 22, 2023, 3:27 PM IST

ಸದ್ಯದ ಸೆನ್ಸೇಷನಲ್ ಸಬ್ಜೆಕ್ಟ್‌ 'ವಾಟ್ಸಪ್ ಚಾನೆಲ್. ಇಂದಿನ ಟೆಕ್ನಾಲಜಿ ಯುಗದಲ್ಲಿ ಆಗಾಗ ಹೊಸ ಹೊಸ ಫೀಚರ್‌ಗಳು ಹೊರಬರುತ್ತಲೇ ಇರುತ್ತವೆ. ಇತ್ತೀಚೆಗಷ್ಟೇ ಜಗತ್ತಿನಲ್ಲಿ ಜನ್ಮ ತಾಳಿರುವ ವಾಟ್ಸಪ್‌ನ 'ವಾಟ್ಸಪ್ ಚಾನೆಲ್, ಇಂದು ಅತ್ಯಂತ ಹೆಚ್ಚು ಸದ್ದು-ಸುದ್ದಿ ಮಾಡುತ್ತಿರುವ ಸಂಗತಿ. ಹೊಸದಾಗಿ ಬಿಡುಗಡೆ ಆಗಿರುವ 'ವಾಟ್ಸಪ್ ಚಾನೆಲ್' ವಿಶೇಷ ಫೀಚರ್ ಸೆಲೆಬ್ರಿಟಿಗಳನ್ನು ಹಾಗೂ ವಿಐಪಿಗಳನ್ನು ಅತಿ ಹೆಚ್ಚು ಸೆಳೆದಿದೆ ಎನ್ನಬಹುದು. 

ಭಾರತದ ಸಲೆಬ್ರಿಟಿಗಳಲ್ಲಿ ಬಾಲಿವುಡ್ ನಟಿ 'ಕತ್ರಿನಾ ಕೈಫ್' ಅತಿ ಹೆಚ್ಚು ಫಾಲೋವರ್ಸ್‌ಗಳನ್ನು ಹೊಂದಿರುವ ನಟಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದಾರೆ. ಕತ್ರಿನಾ ಬರೋಬ್ಬರಿ '10 ಮಿಲಿಯನ್ಸ್' ಹಿಂಬಾಲಕರನ್ನು ಹೊಂದಿರುವ ಮೂಲಕ ಭಾರತದ ಇತರ ಸೆಲೆಬ್ರಿಟಿಗಳನ್ನು ಹಿಂದಿಕ್ಕಿ ನಂಬರ್ ಒನ್ ಸ್ಥಾನ ಸಂಪಾದಿಸಿಕೊಂಡಿದ್ದಾರೆ. ಕತ್ರಿನಾ ಹೊರತಪಡಿಸಿದರೆ ಬಾಲಿವುಡ್ ನಟ ಅಕ್ಷಯ್ ಕುಮಾರ್ ಹಾಗೂ ಸನ್ನಿ ಲಿಯೋನ್ ಟಾಪ್ ಲಿಸ್ಟ್‌ನಲ್ಲಿದ್ದಾರೆ. ಈ ಸಿನಿಮಾ ತಾರೆಗಳು ಪ್ರಧಾನಿ ನರೇಂದ್ರ ಮೋದಿಯವರನ್ನೂ  'ವಾಟ್ಸಪ್ ಚಾನೆಲ್' ಫಾಲೋವರ್ಸ್ ಲಿಸ್ಟ್‌ನಲ್ಲಿ ಕೆಳಕ್ಕೆ ತಳ್ಳಿದ್ದಾರೆ. 

ವ್ಯಾಟ್ಸ್ಆ್ಯಪ್ ಚಾನೆಲ್ ಆರಂಭಿಸಿದ ಒಂದೇ ದಿನಕ್ಕೆ ಪ್ರಧಾನಿ ಮೋದಿಗೆ 1 ಮಿಲಿಯನ್ ಫಾಲೋವರ್ಸ್!

ಈ ನಟ-ನಟಿಯರನ್ನು ಹೊರತುಪಡಿಸಿ ಭಾರತದ ಪ್ರಧಾನಿ ನರೇಂದ್ರ ಮೋದಿ 'ರಾಜಕೀಯ ನಾಯಕರು'ಗಳಲ್ಲಿ ಟಾಪ್  ಎನಿಸಿಕೊಂಡಿದ್ದಾರೆ. ಕತ್ರಿನಾ ಕೈಫ್, ಅಕ್ಷಯ್ ಕುಮಾರ್ ಹಾಗೂ ಸನ್ನಿ ಲಿಯೋನ್ ಹೊರತಪಡಿಸಿದರೆ ವೈಯಕ್ತಿಕ ಸೆಲೆಬ್ರಿಟಿಗಳ ಪಟ್ಟಿಯಲ್ಲಿ ಪ್ರಧಾನಿ ಮೋದಿ ಕೂಡ ಟಾಪ್  ಸ್ಥಾನದಲ್ಲಿದ್ದಾರೆ. ಆದರೆ, ಎಲ್ಲರನ್ನು ಹಿಂದಿಕ್ಕಿರುವ ಕತ್ರಿನಾ ಕೈಫ್ ಭಾರೀ ಅಂತರದಿಂದ ತಮ್ಮ ಮುನ್ನಡೆ ಕಾಯ್ದುಕೊಂಡಿದ್ದಾರೆ. 

ನಟಿ ಸಮಂತಾ ತ್ವಚೆ ಹಾಳಾಗಿದ್ದು ಯಾಕೆ ಅಂತ ಹೇಳ್ತಿದಾರೆ ಕೇಳಿ!

ಹೊಸ ವಾಟ್ಸ್‌ಪ್ ಚಾನೆಲ್ ಲಾಂಚ್ ಮಾಡಿ ತಮ್ಮ ಅಭಿಮಾನಿಗಳಿಗೆ 'ಹಾಯ್, ನಾನು ಕತ್ರಿನಾ ಕೈಫ್. ನನ್ನ ಹೊಸ ವಾಟ್ಸ್‌ಪ್ ಚಾನೆಲ್ ಮೂಲಕ ನಾನು ನನ್ನ ಪ್ರಾಜೆಕ್ಟ್‌, ಟ್ರಾವೆಲ್ಸ್‌, ಇಷ್ಟಾನಿಷ್ಟಗಳು ಹಾಗೂ ನನ್ನ ಹವ್ಯಾಸಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳಲಿದ್ದೇನೆ. ಪಾಲೋ ಮಾಡುತ್ತಾ ಇರಿ' ಎಂಬ ಸಂದೇಶ ನೀಡಿದ್ದಾರೆ. ಒಟ್ಟಿನಲ್ಲಿ, ಪ್ರಧಾನಿ ಮೋದಿ ಹಾಗೂ ಅಕ್ಷಯ್ ಕುಮಾರ್ ಅವರನ್ನು ಹಿಂದಿಕ್ಕಿರುವ ನಟಿ ಕತ್ರಿನಾ ಕೈಫ್ ಸದ್ಯಕ್ಕೆ ಭಾರತದ ಟಾಪ್ ಮೋಸ್ಟ್ ಸೆಲೆಬ್ರಿಟಿ ಎನಿಸಿಕೊಂಡಿದ್ದಾರೆ.

 

 
 
 
 
 
 
 
 
 
 
 
 
 
 
 

A post shared by Katrina Kaif (@katrinakaif)

Follow Us:
Download App:
  • android
  • ios