ಪತಿ ವಿಕ್ಕಿ ಕೌಶಾಲ್ ಪ್ರೀತಿಯ ಮತ್ತು ಕಿರಿಕಿರಿ ಅಭ್ಯಾಸದ ಬಗ್ಗೆ ಮೊದಲ ಬಾರಿಗೆ ರಿವೀಲ್ ಮಾಡಿದ ಕತ್ರಿನಾ....

ಬಾಲಿವುಡ್ ಸ್ಟಾರ್ ನಟ ವಿಕ್ಕಿ ಕೌಶಾಲ್ ಮತ್ತು ನಟಿ ಕತ್ರಿನಾ ಕೈಫ್‌ ಮಾರ್ಚ್‌ 2022ರಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಅಂದಿನಿಂದ ಹೆಡ್‌ಲೈನ್ಸ್‌ನಲ್ಲಿರುವ ಕ್ಯಾಟ್ ಆಂಡ್ ವಿಕ್ಕಿ ಜೋಡಿ ಪದೇ ಪದೇ ಪ್ಯಾಪರಾಜಿಗಳ ಕಣ್ಣಿಗೆ ಕಾಣಿಸಿಕೊಂಡ್ಡರೂ ಪರ್ಸನಲ್ ಲೈಫ್‌ ಬಗ್ಗೆ ಮಾತನಾಡುತ್ತಿರಲಿಲ್ಲ ಆದರೆ ಮೊದಲ ಸಲ ಅಪರೂಪಕ್ಕೆ ಮಾಧ್ಯಮಗಳು ಜೊತೆ ಮಾತನಾಡಿದ ಕ್ಯಾಟ್ ಪತಿಗಿರುವ ಪ್ರೀತಿಯ ಮತ್ತು ಕಿರಿಕಿರಿ ಅಭ್ಯಾಸದ ಬಗ್ಗೆ ರಿವೀಲ್ ಮಾಡಿದ್ದಾರೆ.

ಪಿಂಕ್ವಿಲ್ಲಾ ಮತ್ತು ನೈಕಾ ಬ್ಯುಟಿ ಜಂಟಿಯಾಗಿ ನಡೆಸಿರುವ ಸಂದರ್ಶನದಲ್ಲಿ ರ್ಯಾಪಿಡ್ ಫಯರ್ ಗೇಮ್‌ ಆಡಿದ ಕತ್ರಿನಾ ಕೈಫ್ ವಿಕ್ಕಿ ಮತ್ತು ಇನ್ನಿತ್ತರ ಸ್ಟಾರ್‌ಗಳ ಬಗ್ಗೆ ಮಾತನಾಡಿದ್ದಾರೆ. 

ವಿಕ್ಕಿ ಕೌಶಲ್ ನೋಡಿ ಯಾರೀತ ಎಂದು ತಲೆಕೆಡಿಸಿಕೊಂಡಿದ್ದೆ; ಕತ್ರಿನಾ ಕೈಫ್

ಸಲ್ಮಾನ್ ಖಾನ್ - ಸದಾ ಫನ್‌ ತುಂಬಿರುವ ವ್ಯಕ್ತಿ 

ಆಲಿಯಾ ಭಟ್ - ಸದಾ ನನಗೆ ಸ್ಪೆಷಲ್

ಪ್ರಿಯಾಂಕಾ ಚೋಪ್ರಾ - ಜನರಿಗೆ ಯಾವಾಗಲೂ ಸ್ಫೂರ್ತಿದಾಯಕ

ಶಾರುಖ್ ಖಾನ್ - ಅತಿ ಹೆಚ್ಚು ಮಾಹಿತಿ ತಿಳಿದುಕೊಂಡಿರುವ ವ್ಯಕ್ತಿ

ವಿಜಯ್ - ಪ್ರಾಮಾಣಿಕ 

ವಿಕ್ಕಿ ಕೌಶಾಲ್ ಪ್ರೀತಿಯ ಮತ್ತು ಕಿರಿಕಿರಿ ಅಭ್ಯಾಸ - ನನಗೆ ತುಂಬಾ ಇಷ್ಟ ಆಗುವುದು ಅಂದ್ರೆ ವಿಕ್ಕಿ ಹಾಡುವುದು ಮತ್ತು ಡ್ಯಾನ್ಸ್ ಮಾಡುವುದು. ಸುಮ್ಮನೆ ಸಂಗೀತ ಕೇಳಿದ್ದರೆ ಸಾಕು ಸಖತ್ ಎಂಜಾಯ್ ಮಾಡುತ್ತಾನೆ ಡ್ಯಾನ್ಸ್‌ ಮಾಡುವುದು ನೋಡಲು ಸಖತ್ ಖುಷಿಯಾಗುತ್ತದೆ. ಅದೆಷ್ಟೋ ಸಲ ನಿದ್ರೆ ಮಾಡಲು ಆಗದ ಸಮಯದಲ್ಲಿ ಪ್ಲೀಸ್ ನನಗೆ ಹಾಡು ಹೇಳು ಎಂದು ಒತ್ತಾಯ ಮಾಡುತ್ತೀನಿ. ಕಿರಿಕರಿ ಅಭ್ಯಾಸ ಅಂದ್ರೆ ವಿಕ್ಕಿ ಕೆಲವೊಮ್ಮೆ ತುಂಬಾ ಹಠವಾದಿ.

ಪತಿ ವಿಕ್ಕಿ ಕೌಶಲ್‌ ಜೊತೆಯ ರೊಮ್ಯಾಂಟಿಕ್ ಪೋಟೋ ಶೇರ್‌ ಮಾಡಿದ ಕತ್ರಿನಾ ಕೈಫ್‌

ಜನರ ತಪ್ಪು ತಿಳುವಳಿಕೆ - ಈ ವಿಚಾರದ ಬಗ್ಗೆ ಗೊತ್ತಿಲ್ಲ ಆದರೆ ಪ್ರತಿಯೊಬ್ಬರು ದಿನದಿಂದ ದಿನಕ್ಕೆ ಬದಲಾಗುತ್ತಾರೆ. ಕೆಲವೊಂದು ದಿನ ಚೆನ್ನಾಗಿರುತ್ತದೆ ಕೆಲವೊಂದು ದಿನ ಕೆಟ್ಟದಾಗಿರುತ್ತದೆ ಒಂದೊಂದು ದಿನ ತುಂಬಾ ತಾಳ್ಮೆ ಇರುತ್ತೆ ಮತ್ತೊಂದು ದಿನ ಸ್ಟ್ರೆಸ್ ಹೆಚ್ಚಿರುತ್ತದೆ ಹೀಗಾಗಿ ನಾವು ಯಾವತ್ತು ಹೇಗಿರುತ್ತೀವಿ ಅದರ ಮೇಲೆ ಅಭಿಪ್ರಾಯ ಮೂಡುತ್ತದೆ. 

ವಿಕ್ಕಿಯಿಂದ ಕದಿಯಲು ಇಷ್ಟ ಪಡುವ ದೈಹಿಕ ಲಕ್ಷಣ - ತುಂಬಾ ಸುಲಭವಾಗಿ ದೇಹದ ತೂಕ ಇಳಿಸಿಕೊಳ್ಳುತ್ತಾರೆ ಆ ಶಕ್ತಿ ನನಗೆ ಬೇಕು.

ಕತ್ರಿನಾ ಕೈಫ್‌ಗೆ ದೆವ್ವ ಅಂದರೆ ಭಯ?:

 ಕತ್ರಿನಾ ಕೈಫ್ ಸಾಧ್ಯವಾದಷ್ಟು ವಿವಾದಗಳನ್ನು ಎಬ್ಬಿಸುತ್ತಿದ್ದಾರೆ. ಇತ್ತೀಚಿನ ಸಂದರ್ಶನವೊಂದರಲ್ಲಿ ಅವಳು ದೆವ್ವವನ್ನು ನಂಬುವ ಬಗ್ಗೆ ಸಹ ಚರ್ಚಿಸಿದರು.ಅವರು ದೆವ್ವಗಳನ್ನು ನಂಬುತ್ತಾರೆಯೇ ಅಥವಾ ಇಲ್ಲವೇ ಎಂದು TOI ಗೆ ನೀಡಿದ ಸಂದರ್ಶನದಲ್ಲಿ ಕತ್ರಿನಾ ಕೈಫ್ ಅವರನ್ನು ಪ್ರಶ್ನಿಸಲಾಯಿತು. ಇತರ ಆಯಾಮಗಳ ಅಸ್ತಿತ್ವವನ್ನು ಒಬ್ಬರು ನಿರಾಕರಿಸಲಾಗುವುದಿಲ್ಲ ಮತ್ತು ಅವುಗಳು ಹೇಗೆ ಪ್ರಕಟವಾಗುತ್ತವೆ ಎಂಬುದನ್ನು ಊಹಿಸಲು ಸಾಧ್ಯವಿಲ್ಲ ಎಂದು ಅವರು ಹೇಳಿದ್ದಾರೆ. ರಾತ್ರಿ ಏನಾದ್ರೂ ಹಾರರ್‌ ನೋಡಿದ್ರೆ ನಿದ್ದೆ ಬರಲ್ಲ ಎಂದು ಹೇಳಿದ್ದಾರೆ.ಅವರಿಗೆ ದುಃಸ್ವಪ್ನಗಳಿವೆ. ರಾತ್ರಿಯ ಬೆಳಕು ಅಥವಾ ಟಿವಿ ಇಲ್ಲದೆ ನಿದ್ರಿಸಲು ಸಾಧ್ಯವಾಗುವುದಿಲ್ಲ ಎಂಬ ಬಗ್ಗೆ ನಟಿ ಮಾತನಾಡಿದ್ದಾರೆ. 'ನಾನು ಆಹ್ಲಾದಕರ, ಲವಲವಿಕೆ, ಬಬ್ಲಿ ಚಿತ್ರಗಳನ್ನು ನೋಡಬೇಕು ಮತ್ತು ನಾನು ಜಾಗರೂಕರಾಗಿರಬೇಕು ಎಂದು ನಟಿ ಹೇಳಿದ್ದಾರೆ.