Asianet Suvarna News Asianet Suvarna News

ಕತ್ರಿನಾ ಕೈಫ್‌ ಈ ಲೆವೆಲ್‌ಗೆ ಡ್ಯಾನ್ಸ್‌ ಮಾಡ್ತಾರೆ ಅಂದರೆ ಅದಕ್ಕೆ ಕಾರಣ ನಂದಮೂರಿ ಅಂತೆ!

ತೆಲುಗಿನ ಜನಪ್ರಿಯ ನಾಯಕ ನಟ ನಂದಮೂರಿ ಬಾಲಕೃಷ್ಣ ಡ್ಯಾನ್ಸ್ ಹಿಲೇರಿಯಸ್ ಆಗಿರುತ್ತೆ ಅನ್ನೋದು ನಿಮಗೆ ಗೊತ್ತು. ಆದರೆ ಈ ವ್ಯಕ್ತಿ ಡ್ಯಾನ್ಸೇ ಗೊತ್ತಿಲ್ಲದ ಕತ್ರಿನಾಗೆ ಡ್ಯಾನ್ಸ್ ಕಲಿಸಿದ್ದು ಗೊತ್ತಾ?

Katrina dance inspiration actor Nandamuri Balakrishna
Author
First Published Jan 18, 2024, 2:46 PM IST

ಕತ್ರಿಕಾ ಕೈಫ್ ನಟನೆಯ 'ಮೇರಿ ಕ್ರಿಸ್‌ಮಸ್' ಸಿನಿಮಾ ವಿಮರ್ಶರ ಮೆಚ್ಚುಗೆ ಪಡೆದಿದೆ. ಥಿಯೇಟರ್‌ನಲ್ಲಿ ಅಬ್ಬರಿಸದಿದ್ದರೂ ಒಳ್ಳೆಯ ಹೆಸರನ್ನಂತೂ ಮಾಡಿದೆ. ಈ ಸಿನಿಮಾ ಪ್ರಚಾರದ ವೇಳೆಗೇ ಒಂದು ಸುದ್ದಿ ಕಾಳ್ಗಿಚ್ಚಿನ ಹಾಗೆ ಹಬ್ಬಿದೆ. ಅದೇನು ಗೊತ್ತಾ? ಮತ್ತೇನೂ ಅಲ್ಲ, ಕತ್ರಿನಾ ಕೈಫ್‌ ಡ್ಯಾನ್ಸ್ ಬಗೆಗಿನ ಸುದ್ದಿ. ಕತ್ರಿನಾ ಕೈಫ್‌ ತನ್ನ ಬ್ಯೂಟಿ, ಮಾದಕತೆ ಜೊತೆಗೆ ಡ್ಯಾನ್ಸ್‌ಗೂ ಭಲೇ ಫೇಮಸ್. ಅವರ ಶಿಲಾ ಕಿ ಜವಾನಿ ಸಾಂಗ್ ಈಗಲೂ ಬೆಸ್ಟ್ ಐಟಂ ನಂಬರ್ ಆಗಿಯೇ ಇದೆ. ಇನ್ನು 'ಕಮಲಿ ಕಮಲಿ' ಹಾಡಿಗೆ ಅವರು ಹಾಕಿರೋ ಸ್ಟೆಪ್ ಮರೆಯೋದಕ್ಕಾಗುತ್ತಾ? ಅದೇನು ಬಾಡಿನಾ, ಸ್ಪ್ರಿಂಗಾ ಗುರೂ ಅಂತ ಅದೆಷ್ಟು ಪಡ್ಡೆಗಳು ಕಣ್ ಕಣ್ ಬಿಟ್ಕೊಂಡು ಒದ್ದಾಡಿದವೋ?

ಇವಿಷ್ಟೂ ಕತ್ರಿನಾ ಕಥೆ ಆಯ್ತು. ಆದರೆ ನಂದಮೂರಿ ಬಾಲಕೃಷ್ಣ ಅನ್ನೋ ನಟ ದಕ್ಷಿಣ ಭಾರತೀಯರಿಗೆ ಚಿರಪರಿಚಿತ. ಅವರ ಮಾಸ್ ಸಿನಿಮಾಗಳು ಸಖತ್ ಹವಾ ಕ್ರಿಯೇಟ್ ಮಾಡುತ್ತಿರುತ್ತವೆ. ಈ ನಟನ ಡ್ಯಾನ್ಸ್ ಅಂತೂ ಸೋಷಿಯಲ್ ಮೀಡಿಯಾದಲ್ಲಿ ಭರ್ಜರಿ ರೆಸ್ಪಾನ್ಸ್ ಪಡೆದಿದೆ. ತೀರಾ ಹೃತಿಕ್ ರೋಷನ್ ಲೆವೆಲ್‌ಗೆ ಈ ನಟ ಡ್ಯಾನ್ಸ್ ಮಾಡ್ತಿರಬೇಕು ಅಂತ ಅಂದ್ಕೊಂಡ್ರೆ ನಿಮ್ಮ ಊಹೆ ತಪ್ಪು. ಈ ನಟನ ಹಿಲೇರಿಯಸ್ ಸ್ಟೆಪ್‌ಗಳು ಜನ ಬಿದ್ದೂ ಬಿದ್ದೂ ನಗುವ ಹಾಗೆ ಮಾಡಿದವು. ಕೆಟ್ಟ ಭರತನಾಟ್ಯದ ಅನುಕರಣೆ, ವಿಚಿತ್ರವಾದ ವೆಸ್ಟರ್ನ್ ಡ್ಯಾನ್ಸ್ ಸ್ಟೆಪ್‌ಗಳನ್ನು ನೆನೆಸಿಕೊಂಡರೇ ಜನರಿಗೆ ನಗು ತಡೆಯಲಾಗುವುದಿಲ್ಲ. ಆದರೆ ಈ ನಟನನ್ನು ಬೆಂಬಲಿಸುವವರೂ ಸಾಕಷ್ಟು ಜನ ಇದ್ದಾರೆ.

ಪಂಚ್‌ ಡೈಲಾಗ್ ಹೊಡೆದು 1000 ಕೋಟಿಯ ಸಿನ್ಮಾ ಮಾಡಿದ್ದ ನಟ; ಈಗ ಮರೆವಿನ ಕಾಯಿಲೆಯಿಂದ ಮಾತೇ ಬರಲ್ಲ!

ಈಗ ಜೋಕ್ ಸೈಡಿಗಿಟ್ಟು ನೋಡಿದರೆ ಸಿಡಿಲಿನಂಥಾ ಸುದ್ದಿ ಇದೆ. ಮತ್ತೇನೂ ಅಲ್ಲ, ಸ್ಪ್ರಿಂಗಿನಂತೆ ನರ್ತಿಸುವ ಕತ್ರಿನಾಗೆ ಡ್ಯಾನ್ಸ್ ಸ್ಟೆಪ್ (dance step) ಹೇಳ್ಕೊಟ್ಟಿದ್ದೇ ನಂದಮೂರಿ ಅಂದರೆ ನಂಬ್ತೀರಾ? ಹಲವು ಹಿಟ್ ಹಾಡುಗಳಲ್ಲಿ ಅದ್ಭುತವಾಗಿ ಡ್ಯಾನ್ಸ್ ಮಾಡಿರುವ ಕತ್ರಿನಾ ಕೈಫ್‌ಗೆ ಒಂದು ಸಮಯದಲ್ಲಿ ಡ್ಯಾನ್ಸ್ ಬರುತ್ತಲೇ ಇರಲಿಲ್ಲವಂತೆ. ಕತ್ರಿನಾ ಕೈಫ್ ಮೊದಲು ಸಿನಿಮಾ ನಟಿಯಾದಾಗ ಅವರ ಲುಕ್ಸ್ ಏನೋ ಚೆನ್ನಾಗಿತ್ತು, ಆದರೆ ಅವರ ನಟನೆ ಹಾಗೂ ವಿಶೇಷವಾಗಿ ಅವರ ಡ್ಯಾನ್ಸ್ ಬಗ್ಗೆ ಹಲವರು ಟೀಕೆ ಮಾಡಿದ್ದರು. ಆದರೆ ಈಗ ಕತ್ರಿನಾ, ಬಾಲಿವುಡ್ನ ಟಾಪ್ ಡ್ಯಾನ್ಸ್ರ್ಗಳಲ್ಲಿ ಒಬ್ಬರು. ಅವರ ಈ ಬದಲಾವಣೆಗೆ (change) ಕಾರಣ, ದಕ್ಷಿಣ ಭಾರತದ ಸ್ಟಾರ್ ನಟ. ಕತ್ರಿನಾ ಕೈಫ್ ನಟನೆಗೆ ಕಾಲಿರಿಸಿದ್ದು, ತೆಲುಗಿನ ಸೂಪರ್ ಡೂಪರ್ ಹಿಟ್ ಸಿನಿಮಾ ‘ಮಲ್ಲೇಶ್ವರಿ’ ಮೂಲಕ. ಆ ಸಿನಿಮಾದ ಬಳಿಕ ಅವರಿಗೆ ಹಲವು ಆಫರ್‌ಗಳು ಬಂದವಂತೆ ಆದರೆ ಕತ್ರಿನಾ ಕೈಫ್ ಒಪ್ಪಿಕೊಂಡಿದ್ದು, ನಂದಮೂರಿ ಬಾಲಕೃಷ್ಣ ನಟಿಸಲಿದ್ದ ‘ಅಲ್ಲರಿ ಪಿಡುಗು’ ಸಿನಿಮಾ. ಕತ್ರಿನಾ ಕೈಫ್ಗೆ ಡ್ಯಾನ್ಸ್ ಬರುತ್ತಿರಲಿಲ್ಲ. ಇದರಿಂದ ತೀವ್ರ ಸಮಸ್ಯೆಯನ್ನು (problem) ಕತ್ರಿನಾ ಕೈಫ್ ಎದುರಿಸಿದ್ದರಂತೆ.

ಎಲ್ಲರೂ ನನ್ನ ಡ್ಯಾನ್ಸ್ ಅನ್ನು ಟೀಕಿಸುತ್ತಿದ್ದರು. ಆದರೆ ಬಾಲಕೃಷ್ಣ ನನ್ನ ಬೆಂಬಲಕ್ಕೆ ನಿಂತರು, ಕ್ಯಾಮೆರಾ (camara) ಮುಂದೆ ಆಗಬಹುದಾದ ಅವಮಾನದಿಂದ ಕಾಪಾಡಿ, ಸರಳವಾದ ಸ್ಟೆಪ್‌ಗಳನ್ನೇ ನನಗೆ ನೀಡುವಂತೆ ಸೂಚಿಸಿದರು. ಅಲ್ಲದೆ, ಕ್ಯಾಮೆರಾ ಮುಂದೆ ಹೇಗೆ ಡ್ಯಾನ್ಸ್ ಮಾಡಬೇಕು, ಸಂಗೀತಕ್ಕೆ ತಕ್ಕಂತೆ ಹೇಗೆ ಕುಣಿಯಬೇಕು, ಅಲ್ಲದೆ ಡ್ಯಾನ್ಸ್‌ಗಿಂತಲೂ ಎಎಕ್ಸ್‌ಪ್ರೆಶನ್‌ಗೆ ಹೆಚ್ಚು ಗಮನ ಕೊಡಬೇಕು, ತಾಳವನ್ನು ಏಕೆ ಮಿಸ್ ಮಾಡಬಾರದು ಎಂಬುದೆಲ್ಲವನ್ನೂ ಹೇಳಿಕೊಟ್ಟರು ಎಂದು ಸ್ವತಃ ಕತ್ರಿನಾರೇ ಹೇಳಿದ್ದಾರೆ.

ನಟ ಧರ್ಮೇಂದ್ರ ಬಂದಾಗ ಕಮಲ್​ ಹಾಸನ್​ ಪುತ್ರಿಯರದ್ದು ಇದೆಂಥ ವರ್ತನೆ? ಇದು ಗೌರವವಂತೆ!

ಇದೀಗ ಕತ್ರಿನಾ ಕೈಫ್, ದಕ್ಷಿಣದ ನಟ ವಿಜಯ್ ಸೇತುಪತಿ ಜೊತೆಗೆ ‘ಮೇರಿ ಕ್ರಿಸ್ಮಸ್’ ಸಿನಿಮಾದಲ್ಲಿ ನಟಿಸಿದ್ದಾರೆ. ರೊಮ್ಯಾಂಟಿಕ್ ಥ್ರಿಲ್ಲರ್ ಕತೆಯನ್ನು ಈ ಸಿನಿಮಾ (movie) ಒಳಗೊಂಡಿದ್ದು ಕಳೆದ ವಾರವಷ್ಟೆ ಬಿಡುಗಡೆ ಆಗಿ ಉತ್ತಮ ಪ್ರತಿಕ್ರಿಯೆಯನ್ನು ಗಳಿಸಿಕೊಂಡಿದೆ. ಸಿನಿಮಾದಲ್ಲಿ ವಿಜಯ್ ಹಾಗೂ ಕತ್ರಿನಾ ನಡುವೆ ಕೆಲವು ರೊಮ್ಯಾಂಟಿಕ್ ದೃಶ್ಯಗಳು ಸಹ ಸಿನಿಮಾದಲ್ಲಿವೆ. ಕತ್ರಿನಾ ಇದೀಗ ಹಲವು ಬಾಲಿವುಡ್ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.

Follow Us:
Download App:
  • android
  • ios