Asianet Suvarna News Asianet Suvarna News

ಅನಂತ್ ಮದುವೆಯಲ್ಲಿ ಕಾಶಿ ಚಾಟ್ಸ್.. ಅತಿಥಿಗಳ ಬಾಯಿರುಚಿ ಹೆಚ್ಚಿಸಲಿದೆ ಬಗೆ ಬಗೆ ಮೃಷ್ಷಾನ್ನ ಭೋಜನ

ಅಂಬಾನಿ ಮನೆಯಲ್ಲಿ ಮದುವೆ ಸಂಭ್ರಮ. ಇಂದು ಅನಂತ್ – ರಾಧಿಕಾ ಮದುವೆ ಸಡಗರ.. ಅತಿಥಿಗಳಿಗೆ ಖಾದ್ಯಗಳ ರಸದೌತಣ. ಬಗೆ ಬಗೆ ಆಹಾರದ ಜೊತೆ ಕಾಶಿ ಚಾಟ್ಸ್ ಸವಿಯುವ ಅವಕಾಶ. 
 

Kashi Chat Bandar Chats At Ananth Radhikas Wedding roo
Author
First Published Jul 12, 2024, 3:03 PM IST | Last Updated Jul 12, 2024, 3:03 PM IST

ಅನಂತ್ ಅಂಬಾನಿ ಹಾಗೂ ರಾಧಿಕಾ ರಾಯಲ್ ವೆಡ್ಡಿಂಗ್ (Anant Ambani and Radhi Merchant Wedding) ಇಂದು ನಡೆಯುತ್ತಿದೆ. ದೇಶ – ವಿದೇಶದಿಂದ ಸೆಲೆಬ್ರಿಟಿಗಳು ಮದುವೆ ಸಮಾರಂಭಕ್ಕೆ ಬಂದಿದ್ದಾರೆ. ಮದುವೆಗೂ ಮುನ್ನ ನೀತಾ ಅಂಬಾನಿ, ಕಾರ್ಡ್ ಹಿಡಿದು ಕಾಶಿಗೆ ಹೋಗಿದ್ದು ನಿಮಗೆ ನೆನಪಿರಬೇಕು. ನೀತಾ ಅಂಬಾನಿ, ಕಾಶಿ ವಿಶ್ವನಾಥನ ಮುಂದೆ ಮದುವೆ ಕಾರ್ಡ್ ಇಟ್ಟು, ಎಲ್ಲ ಒಳ್ಳೆದಾಗ್ಲಿ ಅಂತ ಪ್ರಾರ್ಥಿಸುವ ಜೊತೆಗೆ ಅಲ್ಲೇ ಇದ್ದ ಕಾಶಿ ಚಾಟ್ ಬಂಡಾರ್ ಒಳ ಹೊಕ್ಕಿದ್ದರು. ಅಲ್ಲಿನ ಸ್ಪೇಷಲ್ ಚಾಟ್ ಸವಿ ಸವಿದು, ಮಗನ ಮದುವೆಗೆ ಬನ್ನಿ ಅಂತಾ ಆಹ್ವಾನ ನೀಡಿದ್ರು. ಈಗ ಮಾತಿನಂತೆ ನಡೆದುಕೊಂಡಿದ್ದಾರೆ ನೀತಾ ಅಂಬಾನಿ. ಮಗನ ಮದುವೆಯಲ್ಲಿ ಉತ್ತರ ಪ್ರದೇಶದ ಚಾಟ್ ಸವಿರುವ ಅವಕಾಶ ಗೆಸ್ಟ್ ಗೆ ಸಿಗ್ತಿದೆ. 

ಅನಂತ್ ಅಂಬಾನಿ (Anant Ambani) ಮದುವೆಯಲ್ಲಿ ಉತ್ತರ ಪ್ರದೇಶದ ಚಾಟ್ಸ್ (Chats) ಎಲ್ಲರನ್ನು ಸೆಳೆಯಲಿದೆ. ಯುಪಿಯ ಪ್ರಸಿದ್ಧ ಚಾಟ್ ಅಂಗಡಿ ಕಾಶಿ (Kashi) ಚಾಟ್ ಭಂಡಾರ್, ಅನಂತ್ ಮದುವೆಯಲ್ಲಿ ಚಾಟ್ ನೀಡಲಿದೆ. ಮದುವೆಯಲ್ಲಿ ಟಿಕ್ಕಿ ಚಾಟ್, ಪನ್ನೀರ್ ಚಾಟ್, ಟೊಮೆಟೊ ಚಾಟ್, ಪಾಲಕ್ ಚಾಟ್, ಕುಲ್ಫಿ ಮತ್ತು ಚನಾ ಕಚೋರಿ, ಆಲೂ ಟಿಕ್ಕಿ ಸವಿಯಲು ಅವಕಾಶವಿದೆ. ವಿಶ್ವವಿಖ್ಯಾತ ಕೈಗಾರಿಕೋದ್ಯಮಿ ಅಂಬಾನಿ ಕುಟುಂಬದ ವಿವಾಹ ಸಮಾರಂಭಕ್ಕೆ ನಮ್ಮ ಅಂಗಡಿಯಿಂದ ತರಬೇತಿ ಪಡೆದ ಕುಶಲಕರ್ಮಿಗಳ ತಂಡ ತೆರಳುತ್ತಿದೆ ಎಂದು ಕಾಶಿ ಚಾಟ್ ಭಂಡಾರದ ನಿರ್ದೇಶಕ ರಾಜೇಶ್ ಕೇಸರಿ ತಿಳಿಸಿದ್ದಾರೆ. ನೀತಾ ಅಂಬಾನಿ ಇಲ್ಲಿಗೆ ಬಂದು 4 ಬಗೆಯ ಚಾಟ್ ಸೇವಿಸಿದ್ದರು. ಅವರಿಗೆ ಇದ್ರ ರುಚಿ ಇಷ್ಟವಾಗಿತ್ತು. ನಂತ್ರ ಮದುವೆಯಲ್ಲಿ ಸ್ಟಾಲ್ ಹಾಕಲು ಅವರು ನಮ್ಮನ್ನು ಆಹ್ವಾನಿಸಿದ್ದರು ಎಂದು ರಾಜೇಶ್ ಹೇಳಿದ್ದಾರೆ. ಜೂನ್ 27ರಂದು ಕಾಶಿಗೆ ಹೋಗಿದ್ದ ನೀತಾ ಅಂಬಾನಿ, ಚಾಟ್ ಶಾಪ್ ನಲ್ಲಿಯೇ ಕುಳಿತ ಟೊಮಾಟೊ ಚಾಟ್ ಹಾಗೂ ಆಲೂ ಟಿಕ್ಕಿಯ ಸವಿ ಸವಿದ್ರು. ನಂತ್ರ ಏಳು ಐಟಂ ಫೈನಲ್ ಮಾಡಿ ಬಂದಿದ್ರು. ಈಗ ಆ ಎಲ್ಲ ಐಟಂ ಅನಂತ್ ಮದುವೆಯಲ್ಲಿ ಲಭ್ಯವಿದೆ.  

ಮುಖೇಶ್ ಅಂಬಾನಿಯ ಮೂವರು ಮಕ್ಕಳಲ್ಲಿ ಶ್ರೀಮಂತರು ಯಾರು? ಆಕಾಶ್, ಇಶಾ,ಅನಂತ್ ಆಸ್ತಿ ಮೌಲ್ಯ ಎಷ್ಟು?

ಈ ಮದುವೆಯಲ್ಲಿ ಸ್ಥಳೀಯ ಆಹಾರದ ಜೊತೆ ಕೆಲ ವಿದೇಶಿ ಆಹಾರದ (Foreign Food) ವ್ಯವಸ್ಥೆ ಮಾಡಲಾಗಿದೆ. ಮದುವೆ ಆಹಾರದ ಮೆನ್ಯುವಿನಲ್ಲಿ 2000 ಕ್ಕೂ ಫುಡ್ ಲಭ್ಯವಿದೆ. ದೇಶದಲ್ಲಿ ನಡೆಯುತ್ತಿರುವ ಅದ್ಧೂರಿ ಮದುವೆಗಳಲ್ಲಿ ಅನಂತ್ – ರಾಧಿಕಾ ಮದುವೆ ಸೇರಿದೆ. ಈ ಮದುವೆಗೆ ಅಂಬಾನಿ ಕುಟುಂಬ 5000 ಕೋಟಿ ಖರ್ಚು ಮಾಡಿದೆ. ಅನಂತ್ ಅಂಬಾನಿ ಮದುವೆಗೆ ಅತಿಥಿಗಳಿಗಾಗಿ 100 ಕ್ಕೂ ಹೆಚ್ಚು ಖಾಸಗಿ ಜೆಟ್‌ಗಳನ್ನು ಬುಕ್ ಮಾಡಲಾಗಿದೆ. 

ಅನಂತ್ ಮದುವೆ ಸಂಭ್ರಮ ನಾಲ್ಕು ತಿಂಗಳಿಂದ್ಲೇ ನಡೆಯುತ್ತಿದೆ. ಇಂದು ಮದುವೆಯಾದ್ರೆ ನಾಳೆ ಆಶೀರ್ವಾದ ಸಮಾರಂಭ ನಡೆಯಲಿದೆ. ನಾಡಿದ್ದು ಆರತಕ್ಷತೆ ನಡೆಯಲಿದೆ. ಮದುವೆ ಪೂರ್ವ ಕಾರ್ಯಕ್ರಮಗಳು ನಾಲ್ಕೈದು ದಿನಗಳಿಂದ ನಿರಂತರವಾಗಿ ನಡೆಯುತ್ತಿತ್ತು. 

ಅನಂತ್​ ಅಂಬಾನಿ- ರಾಧಿಕಾ ಮದುವೆ ಅಡುಗೆಯಲ್ಲಿ ಕೂದಲು! ಸಕತ್​ ವೈರಲ್​ ಆಗ್ತಿದೆ ವಿಡಿಯೋ...

ಇನ್ನು ಅಂಬಾನಿ ಮನೆ ಮದುವೆಯಲ್ಲಿ ಜಾಗ ಪಡೆದಿರುವ ಬನಾರಸ್ ಆಹಾರದ ಬಗ್ಗೆ ಹೇಳೋದಾದ್ರೆ ಇಲ್ಲಿನ ಚಾಟ್  ಪ್ರಪಂಚದಾದ್ಯಂತ ಬಹಳ ಪ್ರಸಿದ್ಧವಾಗಿದೆ. ಅದರಲ್ಲೂ ಬನಾರಸ್‌ಗೆ ಬಂದಾಗಲೆಲ್ಲಾ ಇಲ್ಲಿನ ರುಚಿಕರ ಚಾಟ್ ತಿನ್ನಲು ಜನರು ಮರೆಯೋದಿಲ್ಲ. ಬನಾರಸ್‌ನ ಹಳೆಯ ಅಂಗಡಿಗೆ ಹೋಗಿ ಈ ರುಚಿಕರವಾದ ಖಾದ್ಯವನ್ನು ಆನಂದಿಸಲು ಪ್ರವಾಸಿಗರು ಬಯಸುತ್ತಾರೆ. ಅವುಗಳಲ್ಲಿ ಬನಾರಸ್‌ನ ಈ ಕಾಶಿ ಚಾಟ್ ಭಂಡಾರ್ ಒಂದು. ಹತ್ತಾರು ಬಗೆಯ ಚಾಟ್ ಮತ್ತು ಗೋಲ್ಗಪ್ಪಗಳು ಇಲ್ಲಿ ಲಭ್ಯ. ಇದು ವಾರಣಾಸಿಯ ಪ್ರಸಿದ್ಧ ಚರ್ಚ್ ಸ್ಕ್ವೇರ್ ಮತ್ತು ಲಾರ್ಡ್ ಕಾಶಿ ವಿಶ್ವನಾಥ ಧಾಮ್ ಮಾರ್ಗದಲ್ಲಿದೆ. 

Latest Videos
Follow Us:
Download App:
  • android
  • ios