Asianet Suvarna News Asianet Suvarna News

ಕರೀನಾ ಕಪೂರ್‌ಗ್ಯಾಕೆ ರಾಹುಲ್ ಜೊತೆ ಡೇಟಿಂಗ್ ಮಾಡೋ ಆಸೆ?

 ಯಾರ ಜೊತೆ ಡೇಟಿಂಗ್​ ಮಾಡುವ ಆಸೆ ಎಂದು ಕರೀನಾ ಕಪೂರ್​ಗೆ ಕೇಳಿದಾಗ ಇವರು ಹೇಳಿದ್ದು ಯಾರ ಹೆಸರು ಗೊತ್ತಾ?

kareena kapoor wants date with rahul gandhi old video goes viral
Author
First Published Jan 13, 2023, 3:22 PM IST

ಕಾಂಗ್ರೆಸ್​ ನಾಯಕ, ಸಂಸದ ರಾಹುಲ್​ ಗಾಂಧಿ ಸದ್ಯ ಭಾರತ್​ ಜೋಡೋ ಯಾತ್ರೆಯಲ್ಲಿದ್ದಾರೆ. 52 ವರ್ಷದ ರಾಹುಲ್​, ಇನ್ನೂ ಮೋಸ್ಟ್​ ಎಲಿಜಿಬಲ್​ ಬ್ಯಾಚುಲರ್​ ಎಂದೇ ಪ್ರಖ್ಯಾತವಾದವರು. ಇವರ ಜೊತೆ ಕನ್ನಡದ ಚಿತ್ರನಟಿ ಸೇರಿದಂತೆ ಕೆಲವರ ಹೆಸರು ತಳುಕು ಹಾಕಿಕೊಂಡಿದ್ದಿದೆ. ಹುಡುಗಿಯರ ಜೊತೆ ಇರುವ ಇವರ ಫೋಟೋಗಳು ಭಾರಿ ವೈರಲ್​ ಹಾಗೂ ಟ್ರೋಲ್​ ಆಗುವುದೂ ನಡೆದೇ ಇರುತ್ತದೆ. ಆದರೆ ಖುದ್ದು ಖ್ಯಾತ ಬಾಲಿವುಡ್​ ತಾರೆಯೊಬ್ಬರು (Bollywood actress) ತಮಗೆ ರಾಹುಲ್​ ಗಾಂಧಿ (Rahul Gandhi) ಜೊತೆ ಡೇಟಿಂಗ್​ ಮಾಡುವ ಆಸೆ ಇದೆ ಎಂದಿದ್ದು ಇದೀಗ ಭಾರಿ ಸುದ್ದಿಯಾಗಿದೆ.  ಕೆಲ ತಿಂಗಳ ಹಿಂದೆ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದ ಈ ನಟಿಯ ಆಸೆ ಇನ್ನೂ ಈಡೇರಲಿಲ್ಲವಂತೆ!

ಅಷ್ಟಕ್ಕೂ ಈ ನಟಿ ಯಾರು ಎಂದು ನಿಮಗೆ ಕುತೂಹಲ ಆಗಿರಬಹುದು. ರಾಹುಲ್​ ಗಾಂಧಿ ಜೊತೆ ನನಗೆ ಕ್ರಶ್​ (Crush)ಆಗಿದ್ದು, ಇಂದಿಗೂ ಅವರ ಜೊತೆಗೆ ಡೇಟಿಂಗ್​ ಆಸೆ ಈಡೇರಲೇ ಇಲ್ಲ ಎಂದಿರುವ ನಟಿಯೆಂದರೆ, ಕರೀನಾ ಕಪೂರ್​. ಸದ್ಯ ಕರೀನಾ ಕಪೂರ್​ ಖಾನ್​ ಆಗಿರುವ ಈ ಬೆಡಗಿ ರಾಹುಲ್ ಗಾಂಧಿ ಜೊತೆಗಿನ ತಮ್ಮ ಆಸೆಯನ್ನು ಸಂದರ್ಶನವೊಂದರಲ್ಲಿ ಬಹಿರಂಗಪಡಿಸಿದ್ದು, ಇದುವರೆಗೂ ಆಸೆ ಈಡೇರಲಿಲ್ಲ ಎಂದಿದ್ದಾರೆ. 

ರಾಖಿಗೂ ಮದ್ವೆಗೂ ಆಗಿ ಬರೋಲ್ವಾ? ಏಕೆ ಯಾವಾಗಲೂ ಮೋಸ ಹೋಗ್ತಾರೆ?

ಇತ್ತೀಚೆಗೆ ನೀಡಿದ್ದ ಸಂದರ್ಶನವೊಂದರಲ್ಲಿ ಈಕೆಗೆ  'ನೀವು ಯಾರೊಂದಿಗೆ ಡೇಟ್ (Dating) ಮಾಡಲು ಬಯಸುತ್ತೀರಿ' ಎಂದು ಕೇಳಿದ್ದಾಗ ಆಕೆ ಕೊಟ್ಟ ಉತ್ತರ 'ರಾಹುಲ್ ಗಾಂಧಿ' ಎಂದರು. ಅಷ್ಟಕ್ಕೂ ನೀವ್ಯಾಕೆ ಅವರನ್ನು ಆಯ್ದುಕೊಂಡಿದ್ದೀರಿ ಎಂದು ಕೇಳಿದಾಗ ಕರೀನಾ, 'ನೋಡಿ ನಾನು ಮನರಂಜನಾ ಉದ್ಯಮಕ್ಕೆ ಸಂಬಂಧಿಸಿದ ಕುಟುಂಬಕ್ಕೆ ಸೇರಿದವಳು. ನನ್ನ ಅಪ್ಪ, ಅಜ್ಜ ಈಗ ಗಂಡ ಸೈಫ್​ ಅಲಿ ಖಾನ್​ (Saif Ali Khan) ಎಲ್ಲರೂ ಸಿನಿಮಾ ಕ್ಷೇತ್ರದಲ್ಲಿ ಸೇರಿದವರು. ನನಗೆ ರಾಜಕೀಯ (Political) ಕ್ಷೇತ್ರದ ಬಗ್ಗೆ ತಿಳಿಯುವ ಕುತೂಹಲ. ಅದಕ್ಕಾಗಿಯೇ ರಾಹುಲ್ ಗಾಂಧಿಯವರನ್ನು ಆಯ್ಕೆ ಮಾಡಿಕೊಂಡಿದ್ದೇನೆ. ಅವರು ರಾಜಕೀಯ ಕುಟುಂಬದೊಂದಿಗೆ ಸಂಬಂಧ ಹೊಂದಿರುವ ಕಾರಣ, ಅವರ ಜೊತೆ ಡೇಟಿಂಗ್​ ಮಾಡಿದರೆ ಎಲ್ಲವನ್ನೂ ತಿಳಿದುಕೊಳ್ಳಬಹುದು' ಎಂದಿದ್ದರು. 'ನಾನು ರಾಹುಲ್​ ಗಾಂಧಿಯವರ  ಬಗ್ಗೆ ತಿಳಿದುಕೊಳ್ಳಲು ಬಯಸುತ್ತೇನೆ, ನಾನು ಅವರ ಫೋಟೋಗಳನ್ನು ನೋಡುತ್ತಿದ್ದೇನೆ. ಅವರ ಜೊತೆ ಮಾತನಾಡಬೇಕು, ಡೇಟಿಂಗ್​ ಮಾಡಬೇಕು ಎನ್ನುವ ಆಸೆ' ಇದೆ ಎಂದಿದ್ದರು. 

ಇದು ಇತ್ತೀಚಿನ ಸಂದರ್ಶನದ (Interview) ಮಾತಾಯಿತು. ಅದರ ಮುಂದುವರೆದ ಭಾಗವಾಗಿ ಈಗ ಅದೇ ಪ್ರಶ್ನೆಯನ್ನು ಕರೀನಾ ಮುಂದೆ ಇಡಲಾಗಿತ್ತು. ಕ್ಯಾಚ್‌ನ್ಯೂಸ್‌ ಇವರ ಜೊತೆ ಸಂದರ್ಶನ ನಡೆಸಿತ್ತು. ಆಗ ಕರೀನಾ ಇನ್ನೂ ತಮ್ಮ ಈ ಆಸೆ ಈಡೇರಲಿಲ್ಲ ಎಂದು ನೇರಾನೇರವಾಗಿಯೇ ಹೇಳಿದ್ದಾರೆ. 'ಈಗಲೂ ನನ್ನ ಆಸೆ ಈಡೇರಲಿಲ್ಲ. ಈಗಲೂ ನನಗೆ ರಾಹುಲ್​ ಗಾಂಧಿ ಜೊತೆ ಡೇಟಿಂಗ್​ ಮಾಡುವ ಆಸೆ.  ಅವರನ್ನು ಆತಿಥಿಯಾಗಿ ನಮ್ಮ ಮನೆಗೆ ಬರಮಾಡಿಕೊಳ್ಳಲು ಇಷ್ಟಪಡುತ್ತೇನೆ. ನಾನು ಅವರನ್ನು ಪ್ರಧಾನಿಯಾಗಿ (Prime Minister) ನೋಡಲು ಬಯಸುತ್ತೇನೆ' ಎಂದಿದ್ದಾರೆ. 

ಮೊದಲ ದಿನವೇ 'ವರಿಸು' ಆನ್​ಲೈನ್​ನಲ್ಲಿ ಲೀಕ್​, ಇದಕ್ಕೂ ರಶ್ಮಿಕಾನೇ ದೂಷಿಸ್ತಾರೆ ನೆಟ್ಟಿಗರು!

ಮನಸ್ಸಿಗೆ ಬಂದದ್ದನ್ನು ನೇರಾನೇರವಾಗಿ ಹೇಳುವ ಕರೀನಾ ಕಪೂರ್ ಈ ಮಾತಿನಿಂದ ಈಗ ಮತ್ತೆ ಟ್ರೋಲ್​ಗೂ ಒಳಗಾಗಿದ್ದಾರೆ. ಈ ಹಿಂದೆ ಸಿಟ್ಟಿನಿಂದ ಉತ್ತರಿಸಿದ್ದ ಈಕೆ ಟ್ರೋಲ್​ಗೆ ಒಳಗಾಗಿದ್ದರು. ಈಗಾಗಲೇ ಮದುವೆಯಾಗಿ ಮಕ್ಕಳನ್ನು ಹೊಂದಿರುವ ಸೈಫ್​ ಅಲಿ ಖಾನ್​ ಜೊತೆ ಮದುವೆಯ ಬಗ್ಗೆ  ಕೇಳಿದ್ದ ಪ್ರಶ್ನೆಗೆ (Question) ರೊಚ್ಚಿಗೆದ್ದಿದ್ದ  ಕರೀನಾ 'ಹಾಗಿದ್ದರೆ ನನ್ನ ಸಿನಿಮಾಗಳನ್ನು (Cinema) ನೋಡಬೇಡಿ, ನೋಡುವಂತೆ ಯಾರೂ ನಿಮ್ಮನ್ನು ಬಲವಂತಪಡಿಸಲ್ಲ. ತಾನು ಸ್ತ್ರೀವಾದಿಯಲ್ಲ, ನಾನೂ ಒಬ್ಬ ಮಹಿಳೆ.   ಸಮಾನತೆಯನ್ನು ನಂಬುತ್ತೇನೆ. ಎಲ್ಲಕ್ಕಿಂತ ಹೆಚ್ಚಾಗಿ ನಾನು ಮನುಷ್ಯಳು' ಎಂದು ಪುನಃ ಟ್ರೋಲ್​ಗೆ (Troll) ಒಳಗಾಗಿದ್ದರು. ಈಗ ರಾಹುಲ್​ ಗಾಂಧಿಯ ಜೊತೆ ಡೇಟಿಂಗ್​ ಸುದ್ದಿ ಕೇಳಿ ಪುನಃ ನೆಟ್ಟಿಗರ ಆಕ್ರೋಶಕ್ಕೆ ಕಾರಣವಾಗಿದ್ದಾರೆ. 

ಅಂದಹಾಗೆ ಕರೀನಾ ಕಪೂರ್​, 2012 ರಲ್ಲಿ  ನಟ ಸೈಫ್ ಖಾನ್ ಅವರನ್ನು ಮದುವೆಯಾಗಿದ್ದಾರೆ. ಈ ಜೋಡಿಗೆ  ಸೈಫ್‌ಗೆ ತೈಮೂರ್ ಮತ್ತು ಜಹಾಂಗೀರ್ ಎಂಬ ಇಬ್ಬರು ಮಕ್ಕಳಿದ್ದಾರೆ.  ಈಗ ಕರೀನಾಗೆ 42 ವರ್ಷ ವಯಸ್ಸು ಹಾಗೂ ಸೈಫ್​ಗೆ 52 ವರ್ಷ. ಕರೀನಾಗೂ ಮದುವೆಯಾಗುವ ಮುಂಚೆ ಸೈಫ್​ ನಟಿ ಅಮೃತಾ ಸಿಂಗ್​ ಅವರನ್ನು ಮದುವೆಯಾಗಿದ್ದರು. 1991ರಲ್ಲಿ ಇವರ ಮದುವೆ (Wedding) ನಡೆದಿತ್ತು, 2004ರಲ್ಲಿ ಡಿವೋರ್ಸ್​ (Divorce) ಪಡೆದುಕೊಂಡಿದ್ದರು. ಈ ಜೋಡಿಗೆ ಇಬ್ಬರು ಮಕ್ಕಳು. 
 

Follow Us:
Download App:
  • android
  • ios