ಸೈಫ್ ಅಲಿ ಖಾನ್ ಮತ್ತು ಕರೀನಾ ಕಪೂರ್ ಬಾಲಿವುಡ್‌ನ ಯಶಸ್ವಿ ಜೋಡಿ. ಸೈಫ್‌ಗೆ ಇದು ಎರಡನೇ ಮದುವೆ. ಹಳೆಯ ಸಂದರ್ಶನದಲ್ಲಿ ಕರೀನಾ ರಾಹುಲ್ ಗಾಂಧಿಯವರೊಂದಿಗೆ ಡೇಟಿಂಗ್ ಮಾಡುವ ಆಸೆಯನ್ನು ವ್ಯಕ್ತಪಡಿಸಿದ್ದರು. ರಾಹುಲ್ ಅವರ ವ್ಯಕ್ತಿತ್ವದಿಂದ ಆಕರ್ಷಿತರಾಗಿದ್ದಾಗಿ ಹೇಳಿದ್ದರು. ಈ ವಿಡಿಯೋ ಈಗ ವೈರಲ್ ಆಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಗ್ರಾಸವಾಗಿದೆ.
ಬಾಲಿವುಡ್‌ನ ಸದ್ಯದ ಯಶಸ್ವಿ ಜೋಡಿಗಳಲ್ಲಿ ಒಂದೆನಿಸಿರುವುದು ಸೈಫ್ ಅಲಿ ಖಾನ್ ಮತ್ತು ಕರೀನಾ ಕಪೂರ್ ಅವರದ್ದು. ಸೈಫ್ ಅಲಿ ಅವರಿಗೆ ಇದು ಎರಡನೆಯ ಮದುವೆಯಾಗಿದ್ದು, ಈ ಮದುವೆಯಿಂದ ಇಬ್ಬರು ಮಕ್ಕಳಿದ್ದಾರೆ. ಮೊದಲ ಮದುವೆ ನಟಿ ಅಮೃತಾ ಸಿಂಗ್ ಅವರ ಜೊತೆಗೆ ಆಗಿದ್ದ ಸಂದರ್ಭದಲ್ಲಿ, ಅಲ್ಲಿಗೆ ಬಂದಿದ್ದ ಕರೀನಾ ಕಪೂರ್‌ರನ್ನು ಮಗಳೇ ಎಂದು ಕರೆದಿದ್ದ ಸೈಫ್, ಬಳಿಕ ಅವರನ್ನೇ ಮದುವೆಯಾಗಿ ಸಕತ್ ಸದ್ದು ಮಾಡಿದ್ದು ಬಿ-ಟೌನ್‌ನಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. ಸೈಫ್ ಅಲಿ ಖಾನ್ ಕರೀನಾರಿಗಿಂತಲೂ 10 ವರ್ಷ ದೊಡ್ಡವರು. 5 ವರ್ಷಗಳ ಕಾಲ ಲಿವ್-ಇನ್ (Live in relation) ಸಂಬಂಧದಲ್ಲಿದ್ದ ಈ ಜೋಡಿ ಕೊನೆಗೆ ಮದುವೆಯಾಗಿತ್ತು. ಅದಾಗಲೇ ಲವ್ ಜಿಹಾದ್ ಎಂಬ ಬಗ್ಗೆಯೂ ದೊಡ್ಡ ಮಟ್ಟದಲ್ಲಿ ಸುದ್ದಿಯೇ ಆಗಿಬಿಟ್ಟಿತ್ತು. ಅದೇನೇ ಇದ್ದರೂ ಈಗ ಇವರದ್ದು ಸುಖಿ ದಾಂಪತ್ಯ.
ಇದೀಗ ನಟಿ ಕರೀನಾ ಕಪೂರ್ ಅವರ ಹಳೆಯ ವಿಡಿಯೋ ಒಂದು ವೈರಲ್ ಆಗುತ್ತಿದೆ. ಅದರಲ್ಲಿ ಅವರು, ರಾಹುಲ್ ಗಾಂಧಿ ಜೊತೆಗೆ ಡೇಟಿಂಗ್ ಮಾಡುವ ಆಸೆಯನ್ನು ವ್ಯಕ್ತಪಡಿಸಿದ್ದರು. ಇಡೀ ವಿಶ್ವದಲ್ಲಿಯೇ ಯಾರ ಜೊತೆ ಡೇಟಿಂಗ್ ಮಾಡಬೇಕು ಎಂದು ಕೇಳಿದಾಗ, ಇದು ಹೇಳಿದ್ರ ಕಾಂಟ್ರವರ್ಸಿಯಾಗತ್ತೋ ಗೊತ್ತಿಲ್ಲ ಎನ್ನುತ್ತಲೇ ರಾಹುಲ್ ಗಾಂಧಿ ಹೆಸರು ಹೇಳಿದ್ದರು. ಅವರ ಫೋಟೋ ನೋಡಿ ನನಗೆ ತುಂಬಾ ಆಸೆಯಾಗಿತ್ತು. ರಾಜಕಾರಣಿಯಾಗಿ ಹಾಗೂ ಸಾಮಾನ್ಯ ವ್ಯಕ್ತಿಯಾಗಿ ಅವರು ನನಗೆ ತುಂಬಾ ಇಂಪ್ರೆಸ್ ಆಗಿದ್ದಾರೆ. ಒಮ್ಮೆ ಅವರ ಜೊತೆ ಡೇಟಿಂಗ್ ಮಾಡುವ ಆಸೆ ಎಂದಿದ್ದರು.
ಮದುವೆಗೆ ಮುನ್ನವೇ ಇದ್ದ ಸಂಬಂಧದ ಬಗ್ಗೆ ಕರೀನಾ ಓಪನ್ ಮಾತು! ಆಗ್ಲೇ ನಡೆದ ಹನಿಮೂನ್ ವಿಷ್ಯ ರಿವೀಲ್
ಅಷ್ಟಕ್ಕೂ ಇದು ’ಜಬ್ ವಿ ಮೆಟ್’ ಸಿನಿಮಾದ ಪ್ರಚಾರದ ವೇಳೆ ನೀಡಿದ್ದ ಸಂದರ್ಶನದಲ್ಲಿ ನೀಡಿದ್ದ ಹೇಳಿಕೆ. ಈ ಚಿತ್ರವು 2007ರಲ್ಲಿ ಬಿಡುಗಡೆಯಾಗಿತ್ತು. ಆ ಸಂದರ್ಭದಲ್ಲಿ ನಟಿ ಗ್ರೇವಾಲ್ ಅವರ ಟಾಕ್ಶೋನಲ್ಲಿ ಭಾಗಿ ಆಗಿದ್ದ ಕರೀನಾ, ರಾಹುಲ್ ಗಾಂಧಿ ಜೊತೆಗೆ ಡೇಟಿಂಗ್ ಆಸೆ ವ್ಯಕ್ತಪಡಿಸಿದ್ದರು, ಸಿನಿ ಅವರು, ‘ವಿಶ್ವದಲ್ಲಿರುವ ಯಾರ ಜೊತೆ ಡೇಟ್ ಮಾಡುತ್ತೀರಿ’ ಎಂದು ಪ್ರಶ್ನಿಸಿದಾಗ, ಕರೀನಾ ರಾಹುಲ್ ಹೆಸರನ್ನು ಹೇಳಿದ್ದರು. ‘ನಾನು ಈ ವ್ಯಕ್ತಿಯ ಹೆಸರನ್ನು ತೆಗೆದುಕೊಂಡರೆ ಕಾಂಟ್ರವರ್ಸಿ ಆಗುತ್ತೋ ಏನೋ ಎನ್ನುತ್ತಲೇ ಥಟ್ ಅಂತ ರಾಹುಲ್ ಹೆಸರು ಹೇಳಿದ್ದರು.
ಇದನ್ನು ಕೇಳಿ ಸಿನಿ ಹುಬ್ಬು ಏರಿಸಿದ್ದರು. ಕೊನೆಗೆ ತಮ್ಮ ಮಾತಿಗೆ ಸಮರ್ಥನೆ ಕೊಟ್ಟಿದ್ದ ಕರೀನಾ, ತಾವು ರಾಹುಲ್ ಅವರ ಫೋಟೋ ಹಾಗೂ ಅವರ ವ್ಯಕ್ತಿತ್ವದಿಂದ ಹೇಗೆ ಇಂಪ್ರೆಸ್ ಆಗಿದ್ದೆ ಎಂದು ಹೇಳಿದ್ದರು. ಆದರೆ ಇದುವರೆಗೂ ನಟಿಯ ಈ ಆಸೆ ಈಡೇರಲಿಲ್ಲ. ಇದೀಗ ಪುನಃ ವಿಡಿಯೋ ವೈರಲ್ ಆಗುತ್ತಿದೆ. ಆಗ ಸೋಷಿಯಲ್ ಮೀಡಿಯಾ ಇಷ್ಟು ಬಲವಾಗಿ ಇರಲಿಲ್ಲ. ಆದರೆ ಇಂದು ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ಕಮೆಂಟ್‌ಗಳ ಸುರಿಮಳೆಯಾಗಿದೆ. ಸಾಕಷ್ಟು ಮಂದಿ ಬೇರೆ ಬೇರೆ ರೀತಿಯಲ್ಲಿ ನಟಿಯ ಕಾಲೆಳೆಯುತ್ತಿದ್ದಾರೆ. ಇನ್ನೂ ಕಾಲ ಮಿಂಚಿಲ್ಲ ಎಂದು ಕೆಲವರು ಹೇಳಿದರೆ, ಅವರಿಗಿನ್ನೂ ಮದುವೆಯಾಗಿಲ್ಲ, ಟ್ರೈ ಮಾಡಬಹುದು ಎನ್ನುತ್ತಿದ್ದಾರೆ.
ಕರೀನಾ ಜೊತೆನೂ ಸೈಫ್‌ಗೆ ಬೋರ್ ಆಗೋಕೆ ಶುರುವಾಯ್ತಾ? ಸಂದರ್ಶನದಲ್ಲಿ ಗಂಡನ ಮಾತಿಗೆ ಕಸಿವಿಸಿಗೊಂಡ ನಟಿ
