Asianet Suvarna News Asianet Suvarna News

ಒಂದು ಕಪ್ ಕಾಫಿಯಿಂದ ಕರೀನಾ ಹಿಗ್ಗಾಮುಗ್ಗ ಟ್ರೋಲ್

  • ಕಾಫಿ ಕುಡಿದ ಕರೀನಾಳನ್ನು ಬಿಡಲಿಲ್ಲ ನೆಟ್ಟಿಗರು
  • ಅಷ್ಟಕ್ಕೂ ಬೇಬೋ ಟ್ರೋಲ್ ಆಗಿದ್ಯಾಕ್ಕೆ ?
Kareena Kapoor Khan massively trolled for drinking coffee at her buildings parking space dpl
Author
Bangalore, First Published Oct 21, 2021, 9:46 AM IST
  • Facebook
  • Twitter
  • Whatsapp

ಬಾಲಿವುಡ್(Bollywood) ಸೆಲೆಬ್ರಿಟಿಗಳು ಟ್ರೋಲ್ ಆಗುತ್ತಲೇ ಇರುತ್ತಾರೆ. ಕಾರಣ ಏನೇ ಇರಲಿ ನೆಟ್ಟಿಗರಿಗೆ ಟ್ರೋಲ್ ಮಾಡಲು ಅಂತಹ ಪ್ರತ್ಯೇಕ ಕಾರಣವೇನಿಲ್ಲ. ಇತ್ತೀಚೆಗೆ ಟ್ರೋಲ್ ಆದ ನಟಿ ಕರೀನಾ ಕಪೂರ್ ಖಾನ್(Kareena Kapoor). ಅದು ಒಂದು ಕಾಫಿಯಿಂದ ಟ್ರೋಲ್ ಆಗಿದ್ದಾರೆ. ಈ ಬಾರಿ ನಟಿ ಟ್ರೋಲ್ ಆಗೋಕೆ ಕಾಫಿಯೇ(Coffee) ಕಾರಣ.

ವೀರೆ ದಿ ವೆಡ್ಡಿಂಗ್ ನಟಿ ತಮ್ಮ ಕಾಫಿ ಕಪ್ ಹಿಡಿದುಕೊಂಡು ಮನೆಯೊಳಗಿಂದ ಹೊರಬಂದು ಪಾರ್ಕಿಂಗ್ ಏರಿಯಾ ತಲುಪಿದ್ದಾರೆ. ಮನೆಯಿಂದ ಕಾರಿಗೆ ಕಾಫಿ ಕಪ್ ತೆಗೆದುಕೊಂಡು ಬಂದಿದ್ದಕ್ಕೆ ಕರೀನಾ ಟ್ರೋಲ್ ಆಗಿದ್ದಾರೆ.

Lakme Fashion Week 2021 : ನೆಟ್ಟಿಗರಿಂದ ಕರೀನಾ ಟ್ರೋಲ್!

ಸೆಲೆಬ್ರಿಟಿ ಫೋಟೋಗ್ರಾಫರ್ ವೈರಲ್ ಭಯಾನಿ ಹಂಚಿಕೊಂಡ ವೀಡಿಯೋದಲ್ಲಿ, ಕರೀನಾ ತನ್ನ ಕಟ್ಟಡದ ಹೊರಗೆ ತನ್ನ ಕೈಯಲ್ಲಿ ಕಾಫಿ ಮಗ್ ಅನ್ನು ಹಿಡಿದುಕೊಂಡಿದ್ದರು. ನಟಿ ಎಂದಿನಂತೆ ಆಫ್-ವೈಟ್ ಟಾಪ್ ಮತ್ತು ಡೆನಿಮ್ ನಲ್ಲಿ ಸುಂದರವಾಗಿ ಕಾಣುತ್ತಿದ್ದರು. ನಟಿ ತನ್ನ ಕಾರಿನಲ್ಲಿ ಹೊರಡುವ ಮೊದಲು ಕಾಫಿ ಮಗ್ ಹಿಡಿದು ಕ್ಯಾಮೆರಾಗೆ ಪೋಸ್ ನೀಡಿದ್ದಾರೆ.

ಆದರೂ ನೆಟ್ಟಿಗರು ನಟಿಯನ್ನು ಸೊಕ್ಕು ಉಳ್ಳವಳು ಹಾಗೂ ಬಾಡಿ ಶೇಪ್ ಸಂಬಂಧಿಸಿ ನಾಚಿಕೆಗೇಡು ಎಂದು ಕರೆದು ಟ್ರೋಲ್ ಮಾಡಿದ್ದಾರೆ. ಅವರಲ್ಲಿ ಕೆಲವರು ತೂಕ ಹೆಚ್ಚಿಸಿಕೊಂಡಿರುವುದಕ್ಕಾಗಿ ಟ್ರೋಲ್ ಮಾಡಿದ್ದಾರೆ. ಒಂದು ಕಪ್ ಕಾಫಿಯನ್ನೂ ಕಾರ್‌ನಲ್ಲೇ ಕುಡಿಯಬೇಕೆಂದಾದರೆ ಇಷ್ಟು ದೊಡ್ಡ ಮನೆ ಇದ್ದು ಏನು ಪ್ರಯೋಜನ ಎಂದು ಬಳಕೆದಾರರೊಬ್ಬರು ಕಾಮೆಂಟ್ ಮಾಡಿದ್ದಾರೆ. ಕರೀನಾ ಆಂಟಿ ಯಾಕೆ ಕಾಫಿ ಮನೆಯಲ್ಲಿ ಕುಡಿಯಲ್ಲ ಎಂದಿದ್ದಾರೆ ಮತ್ತೆ ಕೆಲವರು.

ಇಂತಹ ಮೂರ್ಖ ಹುಡುಗಿಯರಿಗೆ ದೇಶ ಸೀರೆ ಉಡಿಸಿತು. ಈಗ ಅವರೇ ದೊಡ್ಡ ಎಟಿಟ್ಯೂಡ್ ತೋರಿಸುತ್ತಿದ್ದಾರೆ ಎಂದಿದ್ದಾರೆ. ಅವಳು ಯಾವಾಗಲೂ ಮಾಸ್ಕ್ ಹಾಕದೆ ಇರುತ್ತಾಳೆ. ಯಾರೂ ಅವಳಿಗೆ ಏನನ್ನೂ ಹೇಳುವುದಿಲ್ಲ. ವೈರಸ್‌ನಿಂದ ಸೋಂಕಿಗೆ ಒಳಗಾಗದಂತೆ ವಿಭಿನ್ನ ಲಸಿಕೆಯನ್ನು ತೆಗೆದುಕೊಂಡಿದ್ದಾಳೆ.  ಎಟಿಡ್ಯೂಟ್ ತುಂಬಿ ಹೋಗಿದೆ ಎಂದಿದ್ದಾರೆ ಇನ್ನೊಬ್ಬರು.

ಕರೀನಾ ಅಮೃತ ಅರೋರಾ ಮತ್ತು ಶಕೀಲ್ ಲಡಾಕ್ ಅವರ ಪುತ್ರ ರಾಯನ್ ಹುಟ್ಟುಹಬ್ಬದ ಸಂಭ್ರಮದಲ್ಲಿ ಪಾಲ್ಗೊಳ್ಳಲು  ಅವರ ನಿವಾಸಕ್ಕೆ ಹೋಗುತ್ತಿದ್ದರು.

Follow Us:
Download App:
  • android
  • ios