ಕರೀನಾ ಮಗನ ಹೆಸರು ಜೆಹ್ ಎಂದಷ್ಟೇ ಅಲ್ಲ ಮಗನಿಗೆ ಮೊಘಲ್ ಆಡಳಿತಗಾರನ ಹೆಸರಿಟ್ಟ ಬಾಲಿವುಡ್ ಜೋಡಿ
ಮೊಲದ ಮಗನಿಗೆ ಭಾರತದ ಮೇಲೆ ಆಕ್ರಮಣ ನಡೆಸಿದ ಆಕ್ರಮಣ ಕಾರ ತೈಮೂರ್ ಹೆಸರನ್ನಿಟ್ಟು ವಿವಾದ ಸೃಷ್ಟಿಸಿದ್ದ ಬಾಲಿವುಡ್ ದಂಪತಿ ಸೈಫ್ ಅಲಿ ಖಾನ್ ಹಾಗೂ ಕರೀನಾ ಕಪೂರ್ ಈಗ ಎರಡನೇ ಮಗುವಿಗೂ ಮೊಘಲ್ ಆಡಳಿತಗಾರನ ಹೆಸರನ್ನು ನಾಮಕರಣ ಮಾಡಿದ್ದಾರೆ. ಈ ಹಿಂದೆ ಮಗನ ಹೆಸರು ಜೆಹ್ ಎಂದಷ್ಟೇ ಹೇಳಲಾಗಿತ್ತು. ಆದರೆ ಈಗ ಕರೀನಾ ಮಗುವಿನ ಹೆಸರು ಜೆಹಾಂಗೀರ್ ಎಂಬುದು ಬಹಿರಂಗವಾಗಿದೆ.
ಮೊದಲ ಮಗ ತೈಮೂರ್ ಹೆಸರು ತಿಳಿಸಿದಾಗ ಟ್ರೆಂಡ್ ಆದಂತೆಯೇ ಈಗ ಮತ್ತೆ ನಟಿ ಕರೀನಾ ಕಪೂರ್ ತಮ್ಮ ಎರಡನೆ ಮಗುವಿನ ಹೆಸರಿನಿಂದ ಸುದ್ದಿಯಾಗಿದ್ದಾರೆ. ಕರೀನಾ ಹಾಗೂ ಬೇಬಿ ಜೆಹ್ ಟ್ರೆಂಡ್ ಆಗುತ್ತಿದ್ದು, ಜೆಹ್ ಎನ್ನುವುದು ಜೆಹಾಂಗೀರ್‌ನ ಶಾರ್ಟ್ ಫಾರ್ಮ್ ಎಂದು ತಿಳಿಯುತ್ತಿದ್ದಂತೆ ಜನರು ವಿಭಿನ್ನವಾಗಿ ಪ್ರತಿಕ್ರಿಯಿಸಿದ್ದಾರೆ.
ಸೈಫ್ ಕರೀನಾ ಮೊದಲ ಮಗ ತೈಮೂರ್ ಹೆಸರಿಗೆ ವ್ಯಕ್ತವಾಗಿತ್ತು ವಿರೋಧ!
ಕರೀನಾ ಕಪೂರ್ ತನ್ನ ಹೊಸ ಪುಸ್ತಕ ಪ್ರೆಗ್ನೆನ್ಸಿ ಬೈಬಲ್‌ನಲ್ಲಿ ಈ ವಿಚಾರ ತಿಳಿಸಿದ್ದಾರೆ. ಪುಸ್ತಕ ಬಿಡುಗಡೆ ಸಂದರ್ಭದಲ್ಲಿಯೂ ಮಗನ ಹೆಸರನ್ನು ಕರೀನಾ ಅಡಗಿಸಿಟ್ಟಿದ್ದರು. ಎಲ್ಲಿಯೂ ಜೆಹಾಂಗೀರ್ ಎಂದು ಎನೌನ್ಸ್ ಮಾಡಿರಲಿಲ್ಲ. ಆದರೆ ಪುಸ್ತಕದಲ್ಲಿ ಮಾತ್ರ ನಮೂದಿಸಿದ್ದಾರೆ. ಕರಣ್ ಜೊತೆ ಚಾಟ್ ಶೋನಲ್ಲಿಯೂ ಕರೀನಾ ಮಗನ ಹೆಸರು ಜೆಹ್ ಅಲಿ ಖಾನ್ ಎಂದೇ ಹೇಳಿದ್ದರು.
ತಾನೇ ರಾಮ ಅನ್ಕೋತಾನೆ ಸೈಫ್ ಅಲಿ ಖಾನ್ ಪುತ್ರ: ತೈಮೂರ್‌ಗೆ ರಾಮಾಯಣ ಫೇವರೇಟ್
ಕರೀನಾ ಕಪೂರ್ ಅವರ ಹೊಸ ಪುಸ್ತಕದ ಕೊನೆಯ ಕೆಲವು ಪುಟಗಳಲ್ಲಿ ತನ್ನ ಮಗುವಿನ ಮಗನ ಚಿತ್ರಗಳ ಶೀರ್ಷಿಕೆಯಲ್ಲಿ ಬಹಿರಂಗವಾಗಿ ಇದು ಜಹಾಂಗೀರ್ ಅಲಿ ಖಾನ್ ಎಂದು ಬರೆಯಲಾಗಿದೆ. ಕರೀನಾ ತನ್ನ ಹೊಸ ಪುಸ್ತಕದ ಉದ್ದಕ್ಕೂ ತನ್ನ ಮಗನನ್ನು ಜೆಹ್ ಎಂದು ಸಂಬೋಧಿಸುತ್ತಾಳೆ, ಆದರೆ ಕೊನೆಯಲ್ಲಿ, ಕೆಲವು ಫೋಟೋ ಶೀರ್ಷಿಕೆಗಳಲ್ಲಿ ಅವನನ್ನು ಜಹಾಂಗೀರ್ ಎಂದು ಕರೆಯುತ್ತಾಳೆ. ಜೆಹ್ ಅವರ ಮುಖವನ್ನು ಸಾರ್ವಜನಿಕವಾಗಿ ಬಹಿರಂಗಪಡಿಸದ ನಟಿ, ತನ್ನ ಮಗುವಿನ ಮಗನ ಸಂಪೂರ್ಣ ಚಿತ್ರವನ್ನು ಸಹ ತನ್ನ ಪುಸ್ತಕದಲ್ಲಿ ಹಂಚಿಕೊಂಡಿದ್ದಾರೆ.
ಜೆಹ್ ಅಲಿ ಖಾನ್ ಅಥವಾ ಜಹಾಂಗೀರ್ ಈ ತಿಂಗಳ ಫೆಬ್ರವರಿಯಲ್ಲಿ ಜನಿಸಿದ್ದು ಅಣ್ಣ ತೈಮೂರ್‌ಗೆ ನಾಲ್ಕು ವರ್ಷವಾಗಿದೆ. ತೈಮೂರ್ ಅವರ ಹೆಸರು ಟ್ವಿಟರ್ ಟ್ರೆಂಡ್ ಆದಂತೆಯೇ, ಜೆಹ್ ಜಹಾಂಗೀರ್ ಆಗಿರಬಹುದು ಎಂದು ಸುದ್ದಿಯಾಗಿದೆ. 2016 ರಲ್ಲಿ ಹದಿನಾಲ್ಕನೆಯ ಶತಮಾನದ ಮಧ್ಯ ಏಷ್ಯಾದ ಆಕ್ರಮಣಕಾರರ ಜೊತೆಗೆ ಸಂಬಂಧಿಸುವ ತೈಮೂರ್ ಹೆಸರನ್ನು ಬಹಿರಂಗಪಡಿಸಿದಾಗ ನೆಟ್ಟಿಗರು ಸಿಟ್ಟಾಗಿದ್ದರು. ಮೊಘಲ್ ಚಕ್ರವರ್ತಿ ಜಹಾಂಗೀರ್ ನಿಂದಾಗಿ ಅದು ಈಗ ಮತ್ತೊಮ್ಮೆ ಆವರ್ತಿಸಿದೆ.
