ಬಾಹುಬಲಿಯ ಭಾರೀ ದೊಡ್ಡ ಸಕ್ಸಸ್ ನಂತರ ನಿರ್ಮಾಪಕರೆಲ್ಲಾ ಸೌತ್ ಸ್ಟಾರ್ ಪ್ರಭಾಸ್ ಹಿಂದೆ ಬಿದ್ದಿದ್ದಾರೆ. ಬಾಲಿವುಡ್ ಖ್ಯಾತ ನಿರ್ಮಾಪಕ ಕರಣ್ ಜೋಹರ್ ಕೂಡಾ ಇದಕ್ಕೆ ಹೊರತಲ್ಲ.

ಬಾಹುಬಲಿ ಸಿನಿಮಾವನ್ನು ನಿರ್ಮಾಪಕ ಕರಣ್ ಜೋಹಾರ್ ಹಿಂದಿಯಲ್ಲಿ ಡಿಸ್ಟ್ರಿಬ್ಯೂಟ್ ಮಾಡಿದ ಮೇಲಂತೂ ಇಬ್ಬರ ನಡುವಿನ ಬಾಂಡ್ ಇನ್ನೂ ಗಟ್ಟಿಯಾಗಿತ್ತು. ಆದರೆ ಪ್ರಭಾಸ್ ಸಾಹೋ ಮಾಡಿದ ಮೇಲೆ ಇಬ್ಬರ ನಡುವಿನ ಸಂಬಂಧ ಅಷ್ಟು ಚೆನ್ನಾಗಿರುವಂತೆ ಕಾಣಿಸುತ್ತಿಲ್ಲ.

ಕರಣ್‌ನಿಂದ ಪದ್ಮಶ್ರೀ ಹಿಂಪಡೆಯಲು ಸರ್ಕಾರಕ್ಕೆ ಕಂಗನಾ ಮನವಿ

ಹಿಂದೆ ಕರಣ್ ತನ್ನ ಧರ್ಮ ಪ್ರೊಡಕ್ಷನ್ ಬ್ಯಾನರ್‌ನಡಿ ಸಿನಿಮಾ ಮಾಡಬೇಕೆಂದು ಪ್ರಭಾಸ್‌ನಲ್ಲಿ ಕೇಳಿಕೊಂಡಿದ್ದರು. ಆದರೆ ಪ್ರಭಾಸ್ ತಮ್ಮದೇ ಯುವಿ ಬ್ಯಾನರ್‌ನಲ್ಲಿ ಸಾಹೋ ಸಿನಿಮಾ ಮಾಡಿದ್ರು. ಸಿನಿಮಾ ಹಾಡುಗಳು ಹಿಟ್ ಆದ್ರೂ ಸಿನಿಮಾ ಅಷ್ಟಾಗಿ ಹಿಟ್ ಆಗಲಿಲ್ಲ.

ಹಿರೋ ಪ್ರಭಾಸ್ ಹಾಗೂ ಕರಣ್ ಮಧ್ಯೆ ಎಲ್ಲವೂ ಸರಿ ಇರುವಂತೆ ಕಾಣಿಸುತ್ತಿಲ್ಲ. ಇದೀಗ ಪ್ರಭಾಸ್ ಕರಣ್ ನಿರ್ಮಾಣದ, ಓಂ ರಾವತ್ ನಿರ್ದೇಶನದ ಆದಿಪುರುಷ್ ಸಿನಿಮಾ ಬಿಟ್ಟು ಟಿ ಸಿರೀಸ್ ಫೋಕ್ಸ್ ಜೊತೆ ಕೈ ಜೋಡಿಸಿದ್ದಾರೆ.

2 ತಿಂಗಳ ನಂತರ ಕಾಣಿಸಿಕೊಂಡ ಕರಣ್ ಜೋಹಾರ್ ಹಾಕಿದ ಪೋಸ್ಟಿದು!

ಪ್ರಭಾಸ್ ನಡೆಗೆ ಕರಣ್ ಫುಲ್ ಅಪ್ಸೆಟ್ ಎಂಬ ಸುದ್ದಿ ಕೇಳಿ ಬಂದಿದೆ. ಸುಶಾಂತ್ ಸಿಂಗ್ ರಜಪೂತ್ ಸಾವಿನ ನಂತರ ಬಾಲಿವುಡ್ ನೆಪೊಟಿಸಂನಲ್ಲಿ ಕೇಳಿ ಬಂದ ಹೆಸರುಗಳಲ್ಲಿ ಕರಣ್ ಹೆಸರೂ ಇರುವುದೇ ಪ್ರಭಾಸ್‌ನ ನಡೆಗೆ ಕಾರಣ ಎನ್ನಲಾಗುತ್ತಿದೆ. ಕರಣ್ ಭಾರೀ ವಿರೋಧ ಎದುರಿಸುತ್ತಿರುವ ಸಂದರ್ಭದಲ್ಲಿ ಪ್ರಭಾಸ್ ಆದಿಪುರುಷ್ ಬಿಟ್ಟಿರುವುದು ಸರಿಯಾದ ನಿರ್ಧಾರ ಎಂಬ ಮಾತೂ ಕೇಳಿ ಬಂದಿದೆ.