Asianet Suvarna News Asianet Suvarna News

ಬಾಲಿವುಡ್‌ ಕಲಾವಿದರಲ್ಲಿ ಇದುವರೆಗೂ ಟ್ಯಾಲೆಂಟ್ ಎಂಬುದು ಸಿಕ್ಕಿಲ್ಲ; ಕರಣ್ ಜೋಹರ್ ಶಾಕಿಂಗ್ ಹೇಳಿಕೆ

ರಣ್ ಜೋಹರ್ ಅವರು ನೀಡಿದ ಹೇಳಿಕೆ ಬಾಲಿವುಡ್ ಮಂದಿಗೆ ಶಾಕ್ ನೀಡಿದೆ.‘ಬಾಲಿವುಡ್​ ಕಲಾವಿದರಲ್ಲಿ ಟ್ಯಾಲೆಂಟ್ ಸಿಕ್ಕಿಲ್ಲ’ ಎಂದು ಕರಣ್ ನೇರವಾಗಿ ಹೇಳಿದ್ದಾರೆ. ಕರಣ್ ಜೋಹರ್ ಬಾಯಲ್ಲಿ ಇಂಥ ಮಾತಾ ಎಂದು ಅನೇಕರು ಅಚ್ಚರಿ ಪಟ್ಟಿದ್ದಾರೆ. 

Karan Johar reveals sometimes he does not find talent in actors while casting in bollywood sgk
Author
First Published Sep 10, 2022, 12:19 PM IST

ಬಾಲಿವುಡ್ ಸ್ಟಾರ್ ನಿರ್ದೇದಶಕ, ನಿರ್ಮಾಪಕ ಕರಣ್ ಜೋಹರ್ ಒಂದಲ್ಲೊಂದು ವಿಚಾರಕ್ಕೆ ಸುದ್ದಿಯಲ್ಲಿರುತ್ತಾರೆ. ಸದ್ಯ ಕಾಫಿ ಮಿತ್ ಕರಣ್ ರಿಯಾಲಿಟಿ ಶೋ ಮೂಲಕ ಸದ್ದು ಮಾಡುತ್ತಿರುವ ಕರಣ್ ಇದೀಗ ಬಾಲಿವುಡ್ ಸ್ಟಾರ್ ಗಳ ಬಗ್ಗೆ ಹೇಳಿದ್ದ ಮಾತು ಚರ್ಚೆಗೆ ಗ್ರಾಸವಾಗಿದೆ. ಸ್ಟಾರ್ ಕಿಡ್ ಗಳ ಜೊತೆ ಸಿನಿಮಾ ಮಾಡುವುದು, ಸ್ಟಾರ್ ಮಕ್ಕಳನ್ನು ಮಾತ್ರ ಚಿತ್ರರಂಗಕ್ಕೆ ಪರಿಚಯಿಸುವುದು ಎನ್ನುವ ಅಪವಾದ ಹೊತ್ತಿರುವ ಕರಣ್ ಜೋಹರ್ ವಿರುದ್ಧ ನೋಪೋಟಿಸಂ ಆರೋವಿದೆ. ಹಾಗಾಗಿ ಕರಣ್ ಅವರನ್ನು ಅನೇಕರು ಟೀಕೆ ಮಾಡುತ್ತಾರೆ. ಈ ಮಧ್ಯೆ ಕರಣ್ ಜೋಹರ್ ಅವರು ನೀಡಿದ ಹೇಳಿಕೆ ಬಾಲಿವುಡ್ ಮಂದಿಗೆ ಶಾಕ್ ನೀಡಿದೆ.‘ಬಾಲಿವುಡ್​ ಕಲಾವಿದರಲ್ಲಿ ಟ್ಯಾಲೆಂಟ್ ಸಿಕ್ಕಿಲ್ಲ’ ಎಂದು ಕರಣ್ ನೇರವಾಗಿ ಹೇಳಿದ್ದಾರೆ. ಕರಣ್ ಜೋಹರ್ ಬಾಯಲ್ಲಿ ಇಂಥ ಮಾತಾ ಎಂದು ಅನೇಕರು ಅಚ್ಚರಿ ಪಟ್ಟಿದ್ದಾರೆ. 

ಕರಣ್ ಜೋಹರ್ ಸದ್ಯ ಕಾಫಿ ವಿತ್ ಕರಣ್ ಶೋ ನಡೆಸಿಕೊಡುತ್ತಾರೆ. ಇದಕ್ಕೆ ಸ್ಟಾರ್ ನಟರು ಮತ್ತು ಅವರ ಮಕ್ಕಳನ್ನು ಕರೆತರುತ್ತಾರೆ ಎಂಬ ಆರೋಪವೂ ಇದೆ. ಇನ್ನು, ತಮ್ಮ ಒಡೆತನದ ಧರ್ಮ ಪ್ರೊಡಕ್ಷನ್​ನಲ್ಲಿ ಅವರು ದೊಡ್ಡ ದೊಡ್ಡ ಸೆಲೆಬ್ರಿಟಿ ಮಕ್ಕಳಿಗೆ ಅವಕಾಶ ನೀಡುತ್ತಾರೆ ಎಂಬ ದೂರು ಕೂಡ ಇದೆ. ಈ ಆರೋಪಗಳ ಈಗ ಬಾಲಿವುಡ್ ಮಂದಿಗೆ ಟ್ಯಾಲೆಂಟ್ ಇಲ್ಲ ಎಂದಿರುವುದು ಸಾಕಷ್ಟು ಅಚ್ಚರಿ ಮೂಡಿಸಿದೆ.  ಅಂದಹಾಗೆ ಕರಣ್ ಹೀಗೆ ಹೇಳಿದ್ದು ಅಮೇಜಾನ್ ಮಿನಿ ಟಿವಿಯಲ್ಲಿ ಬರುವ ‘ಕೇಸ್ ತೋ ಬಂತಾ ಹೈ’ ಶೋನಲ್ಲಿ. ಈ ಶೋಗೆ ಕರಣ್ ಅತಿಥಿಯಾಗಿ ಭಾಗಿ ಆಗಿದ್ದರು. ಈ ಕಾರ್ಯಕ್ರಮದಲ್ಲಿ ನಟ ರಿತೇಶ್ ದೇಶ್​ಮುಖ್ ಅವರು ಕೇಳಿದ ಪ್ರಶ್ನೆಗೆ ಕರಣ್ ನೇರವಾಗಿ ಉತ್ತರಿಸಿದ್ದಾರೆ.

ಈ ಶೋನಲ್ಲಿ ರಿತೇಶ್ ಅವರು ಕರಣ್‌ಗೆ, ‘ನೀವು ಕಲಾವಿದರನ್ನು ಆಯ್ಕೆ ಮಾಡುವಾಗ ಲುಕ್​ಗೆ ಮಾತ್ರ ಆದ್ಯತೆ ನೀಡುತ್ತೀರಾ’ ಎಂದು ಪ್ರಶ್ನೆ ಮಾಡಿದರು. ಇದಕ್ಕೆ ಉತ್ತರಿಸಿದ ಕರಣ್, ‘ನಾನು ಕೇವಲ ಎಂಟರ್​ಟೇನ್​ಮೆಂಟ್, ಎಂಟರ್ ಟೇನ್ ಮೆಂಟ್, ಎಂಟರ್ ಟೇನ್ ಮೆಂಟ್ ವಿಚಾರವನ್ನು ಗಮನದಲ್ಲಿ ಇಟ್ಟುಕೊಳ್ಳುತ್ತೇನೆ. ಕೆಲವೊಮ್ಮೆ ಟ್ಯಾಲೆಂಟ್​ಗಾಗಿ ಹುಡುಕಾಟ ನಡೆಸುತ್ತೇನೆ. ಆದರೆ, ಅದು ಈವರೆಗೆ ಸಿಕ್ಕಿಲ್ಲ’ ಎಂದಿದ್ದಾರೆ. ಈ ಮೂಲಕ ಬಾಲಿವುಡ್​ ಕಲಾವಿದರಲ್ಲಿ ಟ್ಯಾಲೆಂಟ್ ಕಂಡಿಲ್ಲ ಎಂಬುದನ್ನು ಬಹಿರಂಗ ಪಡಿಸಿದ್ದಾರೆ. 

Karan Johar: ''ಭಾರತೀಯ ಚಿತ್ರರಂಗದಲ್ಲಿ ಇನ್ನು ಬಾಲಿವುಡ್, ಕಾಲಿವುಡ್‌ ಎಂಬುದಿಲ್ಲ''

‘ಕೇಸ್ ತೋ ಬಂತಾ ಹೈ’ ರಿಯಾಲಿಟಿ ಕಾಮಿಡಿ ಶೋ. ಕೋರ್ಟ್​ ಮಾದರಿಯಲ್ಲೇ ಈ ಶೋ ನಡೆಯುತ್ತದೆ. ರಿತೇಶ್ ಅವರು ಡಿಫೆನ್ಸ್ ಲಾಯರ್ ರೀತಿಯಲ್ಲಿ ಕಾಣಿಸಿಕೊಂಡರೆ, ವರುಣ್ ಶರ್ಮಾ ಅವರು ಪಬ್ಲಿಕ್ ಪ್ರಾಸಿಕ್ಯೂಟರ್ ಸ್ಥಾನದಲ್ಲಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಖ್ಯಾತಿ ಪಡೆದ ಕುಶಾ ಕಪಿಲ್ ಜಡ್ಜ್​ ಸ್ಥಾನದಲ್ಲಿದ್ದಾರೆ. 

ಆಲಿಯಾ, ನಾನು ಕುಡಿದು ವಿಕ್ಕಿ ಕೌಶಲ್‌ಗೆ ಫೋನ್ ಮಾಡಿದ್ವಿ; ಇಂಟ್ರಸ್ಟಿಂಗ್ ಸ್ಟೋರಿ ರಿವೀಲ್ ಮಾಡಿದ ಕರಣ್ ಜೋಹರ್

ಇನ್ನು ಕರಣ್ ಜೋಹರ್ ಅವರ ಸಿನಿಮಾ ವಿಚಾರಕ್ಕೆ ಬರುವುದಾದರೇ ಇತ್ತೀಚಿಗಷ್ಟೆ ಕರಣ್ ನಿರ್ಮಾಣದ ಬ್ರಹ್ಮಾಸ್ತ್ರ ಸಿನಿಮಾ ರಿಲೀಸ್ ಆಗಿದೆ. ಮೊದಲ ದಿನ ಉತ್ತಮ ಕಲೆಕ್ಷನ್ ಮಾಡಿದೆ. ಈ ಸಿನಿಮಾದಲ್ಲಿ ರಭೀರ್ ಕಪೂರ್, ಆಲಿಯಾ ಭಟ್, ಅಮಿತಾಭ್ ಬಚ್ಚನ್ ಸೇರಿದಂತೆ ದೊಡ್ಡ ತಾರಾಬಳಗವೆ ಸಿನಿಮಾದಲ್ಲಿದೆ. ಇನ್ನು ವಿಜಯ್ ದೇವರಕೊಂಡ ಅವರ ಲೈಗರ್ ಸಿನಿಮಾವನ್ನು ಕರಣ್ ನಿರ್ಮಾಣ ಮಾಡಿದ್ದರು. ಆದರೆ ಆ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಹೀನಾಯ ಸೋಲು ಕಂಡಿದೆ.  ಅನೇಕ ವರ್ಷಗಳ ಬಳಿಕ ಕರಣ್ ಮತ್ತೆ ನಿರ್ದೇಶನಕ್ಕೆ ಮರಳಿದ್ದಾರೆ. ರಣ್ವೀರ್ ಮತ್ತು ಆಲಿಯಾ ನಟನೆಯ ರಾಕಿ  ಔರ್ ರಾಣಿ ಕೀ ಪ್ರೇಮ್ ಕಹಾನಿ ಸಿನಿಮಾ ಮಾಡುತ್ತಿದ್ದಾರೆ. ಸಿನಿಮಾ ಜೊತೆಗೆ ಕಾಫಿ ವಿತ್ ಕರಣ್ ಸೀಸನ್ 7 ಅನ್ನು ಹೋಸ್ಟ್ ಮಾಡುತ್ತಿದ್ದಾರೆ. ಒಟಿಟಿಯಲ್ಲಿ ಪ್ರಸಾರವಾಗುತ್ತಿದೆ.

Follow Us:
Download App:
  • android
  • ios