ಬಾಲಿವುಡ್ ಖ್ಯಾತ ನಿರ್ದೇಶಕ ಮತ್ತು ನಿರ್ಮಾಪಕ ಕರಣ್ ಜೋಹರ್‌ಗೆ ನೆಟ್ಟಿಗನೊಬ್ಬ ನೀವು ಸಲಿಂಗ ಕಾಮಿ ಅಲ್ವಾ? ಎಂದು ನೇರ ಪ್ರಶ್ನೆ ಕೇಳಿದ್ದಾರೆ. ನೆಟ್ಟಿಗನ ಪ್ರಶ್ನೆಗೆ ಕರಣ್ ಕೊಟ್ಟ ಉತ್ತರ ವೈರಲ್ ಆಗಿದೆ.
ಬಾಲಿವುಡ್‌ನ ಖ್ಯಾತ ನಿರ್ದೇಶಕ ಹಾಗೂ ನಿರ್ಮಾಪಕ ಕರಣ್ ಜೋಹರ್ ಒಂದಲ್ಲೊಂದು ವಿಚಾರಕ್ಕೆ ಸುದ್ದಿಯಾಗುತ್ತಲೇ ಇರುತ್ತಾರೆ. ನಿರ್ಮಾಪಕನಾಗಿ, ನಿರೂಪಕನಾಗಿ, ನಿರ್ದೇಶಕನಾಗಿ ಅವರು ಹಿಂದಿ ಚಿತ್ರರಂಗದಲ್ಲಿ ದೊಡ್ಡ ಹೆಸರು ಮಾಡಿದ್ದಾರೆ. 51 ವರ್ಷದ ಕರಣ್ ಜೋಹರ್ ಇನ್ನೂ ಮದುವೆಯಾಗಿಲ್ಲ. ಬಾಡಿಗೆ ತಾಯಿ ಮೂಲಕ ಅವರು ಅವಳಿ ಮಕ್ಕಳನ್ನು ಪಡೆದು ಸಾಕುತ್ತಿದ್ದಾರೆ. ಕರಣ್ ಜೋಹರ್ ಅವರ ಲೈಂಗಿಕ ಆಸಕ್ತಿ ಬಗ್ಗೆ ಪದೇ ಪದೇ ಪ್ರಶ್ನೆ ಎದುರಾಗುತ್ತಲೇ ಇರುತ್ತದೆ. ಅವರು ಸಲಿಂಗ ಕಾಮಿ ಎನ್ನುವ ಮಾತು ಯಾವಾಗಲೂ ಕೇಳಿಬರುತ್ತಲೇ ಇರುತ್ತೆ. ಇದೀಗ ನೆಟ್ಟಿಗರೊಬ್ಬರು ಕರಣ್ ಜೋಹರ್ ಅವರಿಗೆ ನೇರವಾಗಿ ಪ್ರಶ್ನೆ ಕೇಳಿದ್ದಾರೆ. ಅದಕ್ಕೆ ಕರಣ್ ಜೋಹರ್ ಕೂಡ ಪ್ರತಿಕ್ರಿಯೆ ನೀಡಿದ್ದಾರೆ.
ಸಿನಿಮಾ ಸೆಲೆಬ್ರಿಟಿಗಳು ಆಗಾಗ ಅಭಿಮಾನಿಗಳ ಜೊತೆ ಸಂವಾದ ನಡೆಸುತ್ತಿರುತ್ತಾರೆ. ಸಾಮಾಜಿಕ ಜಾಲತಾಣದಲ್ಲಿ ಪ್ರಶ್ನೆ ಕೇಳಿ ಎಂದು ಸೆಲೆಬ್ರಿಟಿಗಳು ಅಭಿಮಾನಿಗಳಿಗೆ ಕೇಳುತ್ತಾರೆ. ಈಗ ಸೋಶಿಯಲ್ ಮೀಡಿಯಾ ಜಗತ್ತಿಗೆ ಥ್ರೆಡ್ಸ್ ಎಂಟ್ರಿ ನೀಡಿದೆ. ಕರಣ್ ಜೋಹರ್ ಕೂಡ ಇದರಲ್ಲಿ ಖಾತೆ ತೆರೆದಿದ್ದಾರೆ. ಹಾಗಾಗಿ ಅವರು ಶನಿವಾರ (ಜುಲೈ 8) ಹತ್ತು ನಿಮಿಷಗಳ ಕಾಲ ಅಭಿಮಾನಿಗಳ ಪ್ರಶ್ನೆಗೆ ಉತ್ತರ ನೀಡಿದರು. ಆಗ ಅವರಿಗೆ ಸಲಿಂಗ ಕಾಮಿನಾ ಎನ್ನುವ ಪ್ರಶ್ನೆ ಎದುರಾಗಿದೆ.
ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ ಚಿತ್ರಕ್ಕೆ ಆಲಿಯಾ ಮತ್ತು ರಣವೀರ್ ಪಡೆದ ಹಣ ಎಷ್ಟು ಗೊತ್ತಾ?
‘ನೀವು ಸಲಿಂಗ ಕಾಮಿ ಹೌದಲ್ಲವೇ’ ಎಂದು ನೆಟ್ಟಿಗರೊಬ್ಬರು ಯಾವುದೇ ಮುಲಾಜಿಲ್ಲದೇ ಪ್ರಶ್ನೆ ಕೇಳಿದ್ದಾರೆ. ಅದಕ್ಕೆ ಕರಣ್ ಜೋಹರ್ ಕೊಟ್ಟ ಉತ್ತರ ಕೂಡ ವೈರಲ್ ಆಗಿದೆ. ನೆಟ್ಟಿಗನಿಗೆ ಕರಣ್ಗಿ ‘ನಿಮಗೆ ಆಸಕ್ತಿ ಇದೆಯೇ’ ಎಂದು ಮರುಪ್ರಶ್ನೆ ಹಾಕಿದ್ದಾರೆ. ಅಲ್ಲಿಗೆ, ಬಹುತೇಕ ಅವರು ಒಪ್ಪಿಕೊಂಡಂತೆಯೇ ಆಗಿದೆ ಎಂದು ಅನೇಕರು ಅಭಿಪ್ರಾಯಪಟ್ಟಿದ್ದಾರೆ. ಇದಲ್ಲದೇ ಇನ್ನೂ ಹಲವು ಪ್ರಶ್ನೆಗಳಿಗೆ ಅವರು ಉತ್ತರಿಸಿದ್ದಾರೆ.
ಆಲಿಯಾಳನ್ನು ರಣಬೀರ್ ಸಿಂಗ್ ತಬ್ಬಿಕೊಂಡ್ರೆ ಫ್ಯಾನ್ಸ್ ಹೀಗ್ ಹೇಳೋದಾ?
ಕರಣ್ ಜೋಹರ್ ನಿರ್ದೇಶನದ ‘ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ’ ಸಿನಿಮಾದ ಬಿಡುಗಡೆಗೆ ಸಿದ್ಧವಾಗಿದೆ. ಅನೇಕ ವರ್ಷಗಳ ಬಳಿಕ ಕರಣ್ ಜೋಹರ್ ನಿರ್ದೇಶನ ಮಾಡಿದ್ದಾರೆ. ಕರಣ್ ನಿರ್ದೇಶನದಲ್ಲಿ ಮೂಡಿಬಂದ ಸಿನಿಮಾದಲ್ಲಿ ರಣವೀರ್ ಸಿಂಗ್ ಮತ್ತು ಆಲಿಯಾ ಭಟ್ ನಟಿಸಿದ್ದಾರೆ. ಈಗಾಗಲೇ ಟ್ರೈಲರ್ ರಿಲೀಸ್ ಆಗಿದ್ದು ಅಭಿಮಾನಿಗಳ ನಿರೀಕ್ಷೆ ಹೆಚ್ಚಿಸಿದೆ. ಬಹುನಿರೀಕ್ಷೆಯ ಸಿನಿಮಾ ಜುಲೈ 28ರಂದು ಬಿಡುಗಡೆ ಆಗಲಿದೆ.
