ಹಿಂದಿ ಮಂದಿಗೆ ಭಯ ಹುಟ್ಟಿಸಿದ ರಿಷಬ್; ಚಿರು-ಸಲ್ಮಾನ್ 'ಗಾಡ್‌ಫಾದರ್'ಗಿಂತ ಹೆಚ್ಚಿದ 'ಕಾಂತಾರ' ಗಳಿಕೆ

ಕಾಂತಾರ ಹಿಂದಿಯಲ್ಲಿ ರಿಲೀಸ್ ಆಗುತ್ತಿದ್ದಂತೆ ಬಾಲಿವುಡ್ ಮಂದಿಗೆ ಭಯ ಶುರುವಾಗಿದೆ. ಕಾಂತಾರ ಹಿಂದಿಯಲ್ಲಿ ಮೊದಲ ದಿನ ಉತ್ತಮ ಕಲೆಕ್ಷನ್ ಮಾಡಿದೆ. ಚಿರಂಜೀವಿ ಮತ್ತು ಸಲ್ಮಾನ್ ಖಾನ್ ನಟನೆಯ ಗಾಡ್ ಫಾದರ್ ಸಿನಿಮಾಗಿಂತ ಹೆಚ್ಚು ಕಲೆಕ್ಷನ್ ಮಾಡಿದೆ. 

Kantara Hindi box office collection Rishab Shetty film better opening than GodFather sgk

ಸ್ಯಾಂಡಲ್‌ವುಡ್‌ ಮಾತ್ರವಲ್ಲದೇ ಭಾರತದಾದ್ಯಂತ ಕಾಂತಾರ ಸಿನಿಮಾದೇ ಹವಾ. ಬೇರೆ ಬೇರೆ ಪರಭಾಷೆಯಿಂದ ಕಾಂತಾರ ಸಿನಿಮಾಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಪ್ರೇಕ್ಷಕರ ಜೊತೆಗೆ ಸಿನಿ ಸೆಲೆಬ್ರಿಟಿಗಳು ಸಹ ರಿಷಬ್ ಶೆಟ್ಟಿ ಕಾಂತಾರಗೆ ಫಿದಾ ಆಗಿದ್ದಾರೆ. ಈಗಾಗಲೇ ಅನೇಕ ಸ್ಟಾರ್ಸ್ ಕಾಂತಾರ ಸಿನಿಮಾ ನೋಡಿ ಮೆಚ್ಚಿಕೊಂಡಿದ್ದಾರೆ. ಬಾಕ್ಸ್ ಆಫೀಸ್ ನಲ್ಲೂ ಕಾಂತಾರ ಭರ್ಜರಿ ಕಲೆಕ್ಷನ್ ಮಾಡಿದೆ. ಸೆಪ್ಟಂಬರ್ 30ರಂದು ತೆರೆಗೆ ಬಂದ ಬಂದ ಸಿನಿಮಾ ಇಂದಿಗೂ ಬಹುತೇಕ ಕಡೆ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ. ಕನ್ನಡದಲ್ಲಿ ಮಾತ್ರ ರಿಲೀಸ್ ಆಗಿದ್ದ ಕಾಂತಾರಗೆ ಅದ್ಭುತ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದಂತೆ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಕಾಂತಾರ ರಿಲೀಸ್ ಮಾಡಲಾಯಿತು. 

ಕಾಂತಾರ ಹಿಂದಿಯಲ್ಲಿ ರಿಲೀಸ್ ಆಗುತ್ತಿದ್ದಂತೆ ಬಾಲಿವುಡ್ ಮಂದಿಗೆ ಭಯ ಶುರುವಾಗಿದೆ. ಈಗಾಗಲೇ ದಕ್ಷಿಣ ಭಾರತೀಯ ಸಿನಿಮಾಗಳ ಅಬ್ಬರಕ್ಕೆ ಬಾಲಿವುಡ್ ತತ್ತರಿಸಿದೆ. ಇದೀಗ ಕಾಂತಾರ ಹವಾ ಕೂಡ ನಡುಕ ಹುಟ್ಟಿಸಿದೆ. ಕಾಂತಾರ ಹಿಂದಿಯಲ್ಲಿ ಮೊದಲ ದಿನ ಉತ್ತಮ ಕಲೆಕ್ಷನ್ ಮಾಡಿದೆ. ಚಿರಂಜೀವಿ ಮತ್ತು ಸಲ್ಮಾನ್ ಖಾನ್ ನಟನೆಯ ಗಾಡ್ ಫಾದರ್ ಸಿನಿಮಾಗಿಂತ ಹೆಚ್ಚು ಕಲೆಕ್ಷನ್ ಮಾಡಿದೆ. ಕಾಂತಾರ ಹಿಂದಿಯಲ್ಲಿ ಮೊದಲ ದಿನ 1.25 ಕೋಟಿ ರೂಪಾಯಿ ರಿಂದ 1.50 ಕೋಟಿ ರೂಪಾಯಿ ವರೆಗೂ ಗಳಿಕೆ ಮಾಡಿದೆ ಎನ್ನಲಾಗಿದೆ. 

ಅಂದಹಾಗೆ ಗಾಡ್‌ಫಾದರ್ ಸಿನಿಮಾ 1 ಕೋಟಿ ರೂಪಾಯಿ ಕಲೆಕ್ಷನ್ ಮಾಡಿತ್ತು. ಇನ್ನು ಕಾಂತಾರ ರಿಲೀಸ್ ದಿನವೆ ಆಯುಷ್ಮಾನ್ ಖುರಾನ ನಟನೆಯ ಡಾಕ್ಟರ್ ಜಿ ಸಿನಿಮಾ ರಿಲೀಸ್ ಆಗಿತ್ತು. ಡಾಕ್ಟರ್  ಜಿ ಸಿನಿಮಾ ಕೂಡ ಭಾರಿ ನಿರೀಕ್ಷೆ ಮೂಡಿಸಿತ್ತು. ಡಾಕ್ಟರ್ ಜಿ ಸಿನಿಮಾ ಮೊದಲ ದಿನ 3.5 ಕೋಟಿ ಬಾಚಿಕೊಂಡಿದೆ. ಕಾಂತಾರ ಮೊದಲ ದಿನವೇ ಹಿಂದಿಯಲ್ಲಿ ಕೋಟಿ ದಾಟಿರುವುದು ಬಾಲಿವುಡ್‌ಗೆ ಮತ್ತೆ ಭಯ ಶುರುವಾಗಿದೆ. ಮುಂದಿನ ದಿನಗಳಲ್ಲಿ ಕಾಂತಾರ ಮತ್ತಷ್ಟು ಕಲೆಕ್ಷನ್ ಮಾಡುವ ಸಾಧ್ಯತೆ ಇದೆ. 

Kantara; ಸಿನಿಮಾ ನೋಡಿ ರಿಷಬ್ ಶೆಟ್ಟಿಯನ್ನು ತಬ್ಬಿಕೊಂಡ ತಮಿಳು ಸ್ಟಾರ್ ಕಾರ್ತಿ, ವಿಡಿಯೋ ವೈರಲ್

ಅತೀ ಹೆಚ್ಚು ರೇಟಿಂಗ್ ಪಡೆದ ಭಾರತೀಯ ಸಿನಿಮಾ 

ರಿಷಬ್ ಶೆಟ್ಟಿ ಕಾಂತಾರ ಮತ್ತೊಂದು ದಾಖಲೆ ಮಾಡಿದೆ. ರೇಟಿಂಗ್ ವಿಚಾರದಲ್ಲಿ ರಾಕಿಂಗ್ ಸ್ಟಾರ್ ಯಶ್ ನಟನೆಯ ಕೆಜಿಎಫ್-2 ಸಿನಿಮಾವನ್ನು ಹಿಂದಿಕ್ಕಿದೆ. ಹೌದು, ಭಾರತದಲ್ಲಿ ಅತೀ ಹೆಚ್ಚು ರೇಟಿಂಗ್ ಪಡೆದ ಸಿನಿಮಾವಾಗಿ ಹೊರಹೊಮ್ಮಿದೆ ಕಾಂತಾರ.  IMDb ನಲ್ಲಿ ಅತಿ ಹೆಚ್ಚು ರೇಟಿಂಗ್ ಪಡೆದ ಭಾರತೀಯ ಸಿನಿಮಾವಾಗಿದೆ ಕಾಂತಾರ.  IMDbಯಲ್ಲಿ ಕಾಂತಾರ ಸಿನಿಮಾಗೆ 9.6 ರೇಟಿಂಗ್ ನೀಡಲಾಗಿದೆ. ಅತೀ ಹೆಚ್ಚು ರೇಟಿಂಗ್ ಪಡೆದ ಸಿನಿಮಾ ಇದಾಗಿದೆ. ಅಂದಹಾಗೆ ಕೆಜಿಎಫ್-2 ಸಿನಿಮಾಗೆ 10ಕ್ಕೆ 8.4 ನೀಡಲಾಗಿತ್ತು. ಇನ್ನು ಆರ್ ಆರ್ ಆರ್ ಸಿನಿಮಾಗೆ 10ಕ್ಕೆ 8 ರೇಟಿಂಗ್ ನೀಡಲಾಗಿತ್ತು. ಇದೀಗ ಕಾಂತಾರ ಅತೀ ಹೆಚ್ಚು ರೇಟಿಂಗ್ ಪಡೆಯುವ ಮೂಲಕ ದಾಖಲೆ ನಿರ್ಮಿಸಿದೆ.

2ನೇ ಬಾರಿ ಕಾಂತಾರ ವೀಕ್ಷಿಸಿ ಪ್ರಭಾಸ್; ಎಲ್ಲರೂ ನೋಡಲೇ ಬೇಕಾದ ಸಿನಿಮಾ ಎಂದ 'ಸಲಾರ್' ಸ್ಟಾರ್

ಕಾಂತಾರ ಬಗ್ಗೆ

ಚಿತ್ರದಲ್ಲಿ ರಿಷಬ್ ಶೆಟ್ಟಿ ಜೊತೆ ಕಿಶೋರ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ನಾಯಕಿಯಾಗಿ ಸಪ್ತಮಿ ಗೌಡ ಕಾಣಿಸಿಕೊಂಡಿದ್ದಾರೆ. ಅಚ್ಯುತ್ ಕುಮಾರ್ ಗಮನಾರ್ಹವಾಗಿದೆ. ಸ್ಯಾಂಡಲ್ ವುಡ್‌ನ ಪ್ರತಿಷ್ಠಿತ ಸಿನಿಮಾ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲ್ಮ್ಸ್ ಬ್ಯಾನರ್ ನಲ್ಲಿ ಕಾಂತಾರ ಮೂಡಿಬಂದಿದೆ. 

Latest Videos
Follow Us:
Download App:
  • android
  • ios