ರಶ್ಮಿಕಾ ಮಂದಣ್ಣ 'ಮಿಷನ್ ಮಜ್ನು' ಚಿತ್ರದ ಮೂಲಕ ಬಾಲಿವುಡ್ ನಟಿ ಅಂತ ಕರೆಸಿಕೊಳ್ತಾ ಇದ್ದಾರೆ. ಈ ಕೊಡಗಿನ ಚೆಲುವೆ ತನಗಿಂತ ಚಿಕ್ಕೋರ ಜೊತೆಗೆ ಡೇಟಿಂಗ್ ಮಾಡ್ತಾರಾ? ಕಿರಿಕ್ ಹುಡುಗಿಯ ಹೊಸ ವರಸೆ ಕೇಳಿದ್ರೆ ಆಶ್ಚರ್ಯ ಆಗುತ್ತೆ.
ರಶ್ಮಿಕಾ ಮಂದಣ್ಣ (Rashmika Mandanna) ಕೊಡಗಿನ (Coorg) ಬೆಡಗಿ. 'ಕಿರಿಕ್ ಪಾರ್ಟಿ' ಸಿನಿಮಾದ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟ ರಶ್ಮಿಕಾ ಸದ್ಯ ಬಾಲಿವುಡ್ (Bollywood) ನಟಿಯಾಗಿ ಗುರುತಿಸಿಕೊಳ್ಳುತ್ತಿದ್ದಾರೆ. ಸಿದ್ಧಾರ್ಥ ಮಲ್ಹೋತ್ರಾ (Siddhartha Malhotra) ಜೊತೆಗೆ 'ಮಿಷನ್ ಮಜ್ನು' ಚಿತ್ರದಲ್ಲಿ ನಟಿಸಿದ್ದು, ಮುಂದಿನ ವರ್ಷ ಮೇ ೧೩ರಂದು ತೆರೆಗೆ ಬರಲಿದೆ. ಇದರ ಜೊತೆಗೆ ಅಮಿತಾಬ್ ಬಚ್ಚನ್ (Amitabh bachchan) ಜೊತೆಗೆ ನಟಿಸಿರುವ 'ಗುಡ್ ಬೈ' ಚಿತ್ರವೂ ಸದ್ಯದಲ್ಲೇ ತೆರೆ ಕಾಣುವ ನಿರೀಕ್ಷೆ ಇದೆ. ಸಿನಿಮಾ ಮಾತ್ರವಲ್ಲ, ತನ್ನ ಕ್ಯೂಟ್ ಲುಕ್‌ನ ಮೂಲಕವೂ ಗಮನ ಸೆಳೆದವರು ರಶ್ಮಿಕಾ. ಅವರ ಅಂದಚೆಂದಕ್ಕೆ ಮರುಳಾದವರು ಈಕೆಯನ್ನು 'ನ್ಯಾಶನಲ್ ಕ್ರಶ್' ಅಂತ ಕರೆದಿದ್ದಾರೆ. ಈಗ ದೇಶಮಟ್ಟದಲ್ಲಿ ರಶ್ಮಿಕಾ ಅಂದಕೂಡಲೇ ಪಡ್ಡೆಗಳ ಎದೆಬಡಿತ ಹೆಚ್ಚಾಗುತ್ತೆ ಅಂದರೆ ಅದಕ್ಕೆ ಈ ನಟಿಯ ಅಪೀಯರೆನ್ಸೇ ಕಾರಣ.
Mallika Sherawat: ಬೇಕಾದಷ್ಟು ಹಣ ಮಾಡಿದೆ, ಈಗ ಕಮ್ಮಿ ಕೆಲಸ ಮಾಡ್ತೀನಿ ಎಂದ ಹಾಟ್ ನಟಿ
ರಶ್ಮಿಕಾ ಸಿನಿಮಾದ ಜೊತೆಗೆ ವಿವಾದಗಳ ಮೂಲಕವೂ ಸುದ್ದಿ ಮಾಡೋದುಂಟು. ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ (Rakshit shetty) ಜೊತೆಗೆ ಬ್ರೇಕ್‌ಅಪ್ ಮಾಡಿಕೊಂಡಿದ್ದು ನ್ಯಾಶನಲ್ ಲೆವೆಲ್‌ನಲ್ಲಿ ಸುದ್ದಿ ಮಾಡಿತ್ತು. ಆಮೇಲೆ ಈ ಬಗ್ಗೆ ಸ್ವತಃ ರಕ್ಷಿತ್ ಅವರೇ ಸ್ಪಷ್ಟನೆ ಕೊಟ್ಟರೂ ಈಗಲೂ ಇವರಿಬ್ಬರ ಬಗ್ಗೆ ಮಾತನಾಡುವವರಿದ್ದಾರೆ. ಇದರಿಂದ ಚೇತರಿಸಿಕೊಳ್ಳೋಕೆ ರಶ್ಮಿಕಾಗೆ ಬಹಳ ದಿನ ಬೇಕಾಯ್ತಂತೆ. ಪ್ರತೀದಿನವೂ ತನ್ನ ಬಗೆಗೆ ಹರಿದುಬರುವ ಟೀಕೆಗಳನ್ನು ನೋಡಿ ಅಳುವ ದಿನಗಳಿದ್ದವಂತೆ. ಒಂದು ವರ್ಷಕ್ಕೂ ಹೆಚ್ಚು ಕಾಲ ತನಗಾದ ಅವಮಾನದ ನೋವಲ್ಲಿದ್ದರಂತೆ ರಶ್ಮಿಕಾ. ಆದರೆ ಇದರಿಂದ ಹೊರಬಂದು ಯಾವ ಲೆವೆಲ್‌ಗೆ ಕಾನ್ಫಿಡೆನ್ಸ್ ಬೆಳೆಸಿಕೊಂಡರು ಅಂದರೆ ವಿವಾದಗಳಿಲ್ಲದೇ ಹೋದರೇ ಬೋರ್ ಆಗುವಷ್ಟು. 'ಈಗೀಗ ಜನ ಸೋಷಿಯಲ್ ಮೀಡಿಯಾದಲ್ಲಿ (Social media) ನನ್ನ ಬಗ್ಗೆ ಏನಾದರೂ ಮಾತಾಡುತ್ತಿಲ್ಲ ಅಂದರೇ ಭಯ ಶುರುವಾಗುತ್ತೆ, ಮತ್ತೆ ಸುದ್ದಿಯಲ್ಲಿರಬೇಕು ಅನಿಸುತ್ತೆ' ಅಂತ ರಶ್ಮಿಕಾ ತಮಾಷೆಯಾಗಿ ಸ್ಟೇಟ್ ಮೆಂಟ್ ಕೊಟ್ಟಿದ್ದರು.
Katrina Kaif: ಮದುವೆ ನಂತ್ರ ವಿರುಷ್ಕಾ ನೆರೆಮನೆಯವರಾಗ್ತಾರೆ ಕತ್ರೀನಾ & ವಿಕ್ಕಿ
ಆ ಬಳಿಕ ತಾನು ಸ್ಕೂಲ್ ಕಾಲೇಜ್‌ನಲ್ಲಿದ್ದಾಗ ನಡೆದ ಘಟನೆಯನ್ನೂ ವಿವರಿಸಿದರು. 'ಸ್ಕೂಲ್, ಕಾಲೇಜ್‌ನಲ್ಲಿದ್ದಾಗ ಯಾರೋ ಹುಡುಗನ ಜೊತೆ ಫ್ರೆಂಡ್‌ಶಿಪ್ ಮಾಡ್ಕೊಳ್ತೀವಿ. ಆದರೆ ಉಳಿದ ಫ್ರೆಂಡ್ಸ್ ಅವನ ಹಾಗೂ ನನ್ನನ್ನು ಜೊತೆ ಸೇರಿಸಿ ಟೀಸ್ ಮಾಡ್ತಾರೆ. ನಮ್ಮಿಬ್ಬರ ಹೆಸರನ್ನೂ ಒಟ್ಟೊಟ್ಟಿಗೆ ಹೇಳೋಕೆ ಶುರು ಮಾಡ್ತಾರೆ. ನಮಗೇ ಗೊತ್ತಿರಲ್ಲ, ನಾವ್ಯಾವಾಗ ಡೇಟಿಂಗ್ ಮಾಡೋಕೆ ಶುರು ಮಾಡಿದ್ವಿ ಅಂತ. ಇಂಥ ಪ್ರಶ್ನೆಗಳಿಗೆ ಯಾವತ್ತೂ ಉತ್ತರ ಸಿಗಲ್ಲ. ಈ ವಿಚಾರದಲ್ಲಿ ನಾನು ಹಳೇ ಕಾಲದವರಂತೆ ಯೋಚಿಸೋದು, ನನ್ನ ದೇಹವನ್ನು ಒಬ್ಬ ಇಷ್ಟಪಟ್ಟ ಮಾತ್ರಕ್ಕೆ ಅವನು ನನ್ನನ್ನು ಇಷ್ಟಪಟ್ಟ ಹಾಗೆ ಹೇಗಾಗುತ್ತೆ, ಅಂಥವನನ್ನು ನಾನು ಹೇಗೆ ಇಷ್ಟಪಡಲಿ?' ಅಂತ ಮಾರ್ಮಿಕವಾಗಿ ಉತ್ತರಿಸಿದ್ದಾರೆ ಕಿರಿಕ್ ಬೆಡಗಿ.
ಅಲ್ಲಿಗೆ ಕಿರಿಕ್ ಹುಡುಗಿ ಈಗ ಮೆಚ್ಯೂರ್ ಆಗಿದ್ದಾಳೆ, ಹೆಚ್ಚೆಚ್ಚು ಜಾಣೆ ಆಗ್ತಿದ್ದಾಳೆ ಅಂತೆಲ್ಲ ಸೋಷಿಯಲ್ ಮೀಡಿಯಾದಲ್ಲಿ ಜನ ಮಾತಾಡ್ಕೊಳ್ಳೋ ಹಾಗಾಗಿದೆ.
