Asianet Suvarna News Asianet Suvarna News

ಒಳ್ಳೆಯ ನಿರ್ಧಾರ; 'ದಿ ಕೇರಳ ಸ್ಟೋರಿ' ಸಿನಿಮಾ ನಿಲ್ಲಿಸಲು ಸುಪ್ರೀಂ ಕೋರ್ಟ್ ನಕಾರಕ್ಕೆ ಚೇತನ್ ಅಹಿಂಸಾ ಸಂತಸ

ಒಳ್ಳೆಯ ನಿರ್ಧಾರ; 'ದಿ ಕೇರಳ ಸ್ಟೋರಿ' ಸಿನಿಮಾ ನಿಲ್ಲಿಸಲು ಸುಪ್ರೀಂ ಕೋರ್ಟ್ ನಕಾರಕ್ಕೆ ಚೇತನ್ ಅಹಿಂಸಾ ಸಂತಸ ವ್ಯಕ್ತಪಡಿಸಿದ್ದಾರೆ. 

kannada Actor Chetan Ahimsa reacts on Supreme Court Refuses To Stop Movie The Kerala Story sgk
Author
First Published May 2, 2023, 5:34 PM IST | Last Updated May 2, 2023, 5:34 PM IST

ಬಿಡುಗಡೆಗೆ ಸಿದ್ಧವಾಗಿರುವ 'ದಿ ಕೇರಳ ಸ್ಟೋರಿ' ಸಿನಿಮಾ ಈಗ ಬಿರುಗಾಳಿ ಎಬ್ಬಿಸಿದೆ. ಮೇ 5 ರಂದು ತೆರೆಗೆ ಬರಲು ಸಿದ್ಧವಾಗಿದೆ  'ದಿ ಕೇರಳ ಸ್ಟೋರಿ'. ಆದರೆ ಕೇರಳದಲ್ಲಿ ಈ ಸಿನಿಮಾ ರಿಲೀಸ್‌ಗೆ ಭಾರಿ ವಿರೋಧ ವ್ಯಕ್ತವಾಗಿದೆ. ಸಿನಿಮಾಗೆ ತಡೆ ನೀಡುವಂತೆ ಕೋರಿ ಸುಪ್ರೀಂಕೋರ್ಟ್​ನಲ್ಲಿ ಅರ್ಜಿ ಸಲ್ಲಿಕೆ ಮಾಡಲಾಗಿತ್ತು. ಅರ್ಜಿ ವಿಚಾರಣೆ ಮಾಡಲು ಕೋರ್ಟ್ ನಿರಾಕರಿಸಿದೆ. ‘ದಿ ಕೇರಳ ಸ್ಟೋರಿ’ ಸಿನಿಮಾ ವಿರೋಧ ಮಾಡುವವರಿಗೆ ಇದರಿಂದ ಹಿನ್ನಡೆ ಉಂಟಾಗಿದೆ.

ನ್ಯಾಯಮೂರ್ತಿಗಳಾದ ಕೆಎಂ ಜೋಸೆಫ್ ಮತ್ತು ಬಿವಿ ನಾಗರತ್ನ ಅವರನ್ನೊಳಗೊಂಡ ಪೀಠ ಅರ್ಜಿ ವಿಚಾರಣೆಯನ್ನು ನಿರಾಕರಿಸಿದೆ. ವಕೀಲರಾದ ಕಪಿಲ್ ಸಿಬಲ್ ಹಾಗೂ ನಿಜಾಮ್ ಪಾಷಾಗೆ ಈ ಕುರಿತು ಹೈಕೋರ್ಟ್​ನಲ್ಲಿ ಅರ್ಜಿ ಸಲ್ಲಿಕೆ ಮಾಡಲು ಪೀಠ ಸೂಚನೆ ನೀಡಿದೆ. ‘ದಿ ಕೇರಳ ಸ್ಟೋರಿ ಸಿನಿಮಾ ದ್ವೇಷ ಪೂರಿತ ಸಂಭಾಷಣೆಗಳನ್ನು ಒಳಗೊಂಡಿದೆ. ಇದೊಂದು ಪ್ರಾಪಗಾಂಡ ಸಿನಿಮಾ’ ಎಂದು ವಕೀಲ ನಿಜಾಮ್ ಪಾಷಾ ವಾದಿಸಿದ್ದಾರೆ. 

'ದ್ವೇಷದ ಭಾಷಣಗಳಲ್ಲಿ ವೈವಿಧ್ಯತೆ ಇದೆ. ಈ ಚಿತ್ರವನ್ನು ಸೆನ್ಸಾರ್ ಮಂಡಳಿಯಿಂದ ಪ್ರಮಾಣಪತ್ರ ಸಿಕ್ಕಿದೆ. ನೀವು ಸಿನಿಮಾ ರಿಲೀಸ್​ನ ಚಾಲೆಂಜ್ ಮಾಡಬೇಕು ಎಂದರೆ ಸೆನ್ಸಾರ್  ಪ್ರಕ್ರಿಯೆಯನ್ನು ಪ್ರಶ್ನೆ ಮಾಡಬೇಕು' ಎಂದು ಕೋರ್ಟ್ ಹೇಳಿದೆ.

The Kerala story ಚಿತ್ರದ ಅಸಲಿಯತ್ತು ಬಿಚ್ಚಿಟ್ಟ ನಟಿ ಅದಾ ಶರ್ಮಾ

ಚೇತನ್ ಅಹಿಂಸಾ ಪ್ರತಿಕ್ರಿಯೆ 

‘ಪ್ರಾಪಗಾಂಡ’ ಆದಾರದ ಮೇಲೆ ‘ದಿ ಕೇರಳ ಸ್ಟೋರಿ’ ಸಿನಿಮಾವನ್ನು ನಿಲ್ಲಿಸಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ. ಇದು ಒಳ್ಳೆಯ ನಿರ್ಧಾರ. ರಾಜಕೀಯ ವಿಷಯವಿರುವ ಯಾವುದೇ ಚಲನಚಿತ್ರವನ್ನು 'ಪ್ರಾಪಗಾಂಡ' ಎಂದು ಪರಿಗಣಿಸಬಹುದು' ಎಂದು ಹೇಳಿದ್ದಾರೆ. 

'ಸಿನಿಮಾ ಬಿಡುಗಡೆ ತಡೆಯಲು ಯತ್ನಿಸುತ್ತಿರುವ ಕಾಂಗ್ರೆಸ್ ಮತ್ತು ಇತರರು ಆತ್ಮಾವಲೋಕನ ಮಾಡಿಕೊಳ್ಳಬೇಕು. ರಿಚರ್ಡ್ ಅಟೆನ್‌ಬರೋ ಅವರ ಚಿತ್ರ 'ಗಾಂಧಿ' (1982) ಗೆ INC ಮತ್ತು ಇಂದಿರಾ ಗಾಂಧಿಯವರು ಹಣ ನೀಡಿದ್ದಾರೆ. ಆ ಚಲನಚಿತ್ರ ಪ್ರಾಪಗಾಂಡದ ಸಂಕೇತವಲ್ಲವೆ?' ಎಂದು ಪ್ರಶ್ನಿಸಿದ್ದಾರೆ. 

The Kerala Story ಸಂಘ ಪರಿವಾರದ ಸುಳ್ಳಿನ ಫ್ಯಾಕ್ಟರಿಯ ಉತ್ಪನ್ನ: ಕೇರಳ ಸಿಎಂ!

ಈ ಸಿನಿಮಾದಲ್ಲಿ ಅದಾ ಶರ್ಮಾ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಮುಸ್ಲಿಂ ಯುವತಿ ಪಾತ್ರಕ್ಕೆ ಅದಾ ಬಣ್ಣ ಹಚ್ಚಿದ್ದಾರೆ. ಈ ಸಿನಿಮಾದಲ್ಲಿ ಕೆಲಸ ಹುಡುಕಿ ಬೇರೆ ದೇಶಗಳಿಗೆ ಹೋಗುವ ಕೇರಳದ ಅನೇಕ ಯುವತಿಯರನ್ನು ಭಯೋತ್ಪಾದಕ ಸಂಘಟನೆಗಳಿಗೆ ಸೇರುವಂತೆ ಬ್ರೈನ್ ವಾಶ್ ಮಾಡಲಾಗುತ್ತದೆ ಎಂದು ತೋರಿಸಲಾಗಿದೆ. ಆದರೆ ಈ ಸಿನಿಮಾ ವಿರುದ್ಧ ಅನೇಕ ಮಂದಿ ಕಿಡಿ ಕಾರುತ್ತಿದ್ದು ಇದು ಸುಳ್ಳು, ಆಧಾರ ರಹಿತವಾಗಿ ಸಿನಿಮಾ ಮಾಡಲಾಗಿದೆ ಆಕ್ರೋಶ ಹೊರಹಾಕುತ್ತಿದ್ದಾರೆ. ಈಗಾಗಲೇ ರಿಲೀಸ್ ಆಗಿರುವ ಟ್ರೈಲರ್ ನಲ್ಲಿ, ನಾಯಕಿ 'ಈಗ ನಾನು ಫಾತಿಮಾ ಬಾ, ಅಫ್ಘಾನಿಸ್ತಾನದ ಜೈಲಿನಲ್ಲಿರುವ ಐಸಿಸ್ ಭಯೋತ್ಪಾದಕಿ' ಎಂದು ಹೇಳುತ್ತಾರೆ. '32,000 ಹುಡುಗಿಯರು ಸಹ ತನ್ನಂತೆ ಐಸಿಸ್‌ಗೆ ನೇಮಕಗೊಂಡು ಮತಾಂತರಗೊಂಡಿದ್ದಾರೆ' ಎನ್ನುವ ಡೈಲಾಗ್ ಇದೆ. ಸಿನಿಮಾ ರಿಲೀಸ್ ಆದಮೇಲೆ ಇನ್ನೂ ಏನೆಲ್ಲ ವಿವಾದ ಸೃಷ್ಟಿ ಮಾಡುತ್ತೆ ಎಂದು ಕಾದುನೋಡ ಬೇಕಿದೆ.


 

Latest Videos
Follow Us:
Download App:
  • android
  • ios