ಬೆಂಗಳೂರು (ಮಾ. 23): ಪ್ರಚಾರ ಕಾರ್ಯದಲ್ಲಿ ತೊಡಗಿಕೊಂಡಿದ್ದ ಪ್ರಿಯಾಂಕ ಗಾಂಧಿ ತಮ್ಮ ಕೊರಳಿನಲ್ಲಿದ್ದ ಹೂವಿನ ಹಾರವನ್ನು ತೆಗೆದು ಮಾಜಿ ದಿವಂಗತ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಪ್ರತಿಮೆಗೆ ಹಾಕಿದ್ದು ಭಾರೀ ಆಕ್ರೋಶಕ್ಕೆ ಕಾರಣವಾಗಿದೆ. 

ಕೇಂದ್ರ ಸಚಿವೆ ಸ್ಮೃತಿ ಇರಾನಿ ಪ್ರಿಯಾಂಕ ಗಾಂಧಿಯನ್ನು ತರಾಟೆಗೆ ತೆಗೆದುಕೊಂಡಿದ್ದು ಮಾಜಿ ಪ್ರಧಾನಿಗೆ ಮಾಡಿದ ಅವಮಾನ ಎಂದು ಹೇಳಿದ್ದಾರೆ.

 

ಸ್ಮೃತಿ ಇರಾನಿ ಹೇಳಿಕೆಗೆ ರಮ್ಯಾ ಪ್ರತಿಕ್ರಿಯಿಸಿದ್ದಾರೆ. 


ಸ್ಮೃತಿ ಇರಾನಿ ಮಹಿಳೆಯರು ಮಾಡುವ ಕೆಲಸದಲ್ಲಿ ಕೆಟ್ಟದ್ದನ್ನೇ ಹುಡುಕುತ್ತಾರೆ. ಮಹಿಳೆ ಮುಟ್ಟಿದ ಹಾರವನ್ನು  ಪ್ರತಿಮೆಗೆ ಹಾಕಿದಾಕ್ಷಣ ಅದು ಮೈಲಿಗೆಯಾಗುವುದಿಲ್ಲ.  ನಮ್ಮ ದೇಹವೇ ದೇಗುಲ ಎಂದು ಹಿಂದೂ ಧರ್ಮ ಹೇಳುತ್ತದೆ. ದೇವರು ಎಲ್ಲಾ ಕಡೆ ಇದ್ದಾನೆ. ಪ್ರಿಯಾಂಕ ಮಾಡಿದ್ರಲ್ಲಿ ಅವಮಾನ ಮಾಡುವಂತದ್ದು ಏನಿದೆ? ನೀವೂ ಕೂಡಾ ಮಹಿಳೆ‘ ಎಂದು ರಮ್ಯಾ ಹೇಳಿದ್ದಾರೆ.