ಬಹುತೇಕ ಎಲ್ಲಾ ವಿಷಯಗಳ ಬಗ್ಗೆಯೂ ಬೋಲ್ಡ್ ಆಗಿ ಕಮೆಂಟ್ಸ್ ಮಾಡೋ ಕಂಗನಾ ರಣಾವತ್ ಇದೀಗ ಹೊಸ ಪ್ಲಾನ್ ಹೇಳಿದ್ದಾರೆ. ಇತ್ತೀಚೆಗೆ ನಟಿ ಟ್ವಿಟರ್‌ನಲ್ಲಿ ಹೊಸದೊಂದು ವಿಚಾರ ತಿಳಿಸಿದ್ದಾರೆ. ತಮ್ಮ ಊರಿನಲ್ಲಿ ದುರ್ಗೆಯ ದೇಗುಲ ನಿರ್ಮಿಸೋಕೆ ನಿರ್ಧರಿಸಿದ್ದಾರೆ ನಟಿ.

ಹಳೆಯ ದೇವಾಲಯದ ಮುಂದೆ ನಿಂತಿರುವ ಫೋಟೋ ಶೇರ್ ಮಾಡಿದ ನಟಿ, ದೇವಾಲಯದವನ್ನು ನಿರ್ಮಿಸುವ ಇರಾದೆಯನ್ನು ವ್ಯಕ್ತಪಡಿಸಿದ್ದಾರೆ. ಅಮ್ಮ ದುರ್ಗೆ ಆಕೆಯ ದೇವಾಲಯ ನಿರ್ಮಿಸುವುದಕ್ಕೆ ನನ್ನನ್ನು ಆರಿಸಿದ್ದಾಳೆ. 

ನಿಹಾರಿಕಾ- ಚೈತನ್ಯ ಮದುವೆ ಫೋಟೋ; ಹೇಗಿತ್ತು 'ಮೆಗಾ' ಸಂಭ್ರಮ?

ನಮ್ಮ ಪೂರ್ವಜರು ನಮಗಾಗಿ ನಿರ್ಮಿಸಿದ್ದು ಈಗ ಹಳೆಯದಾಗಿದೆ. ನಾನು ದುರ್ಗೆಯ ಮಹಿಮೆ ಮತ್ತು ನಮ್ಮ ಮಹಾನ್ ನಾಗರಿಕತೆಗೆ ಹೊಂದಿಕೆಯಾಗುವಂತೆ ದೇವಾಲಯವನ್ನು ನಿರ್ಮಿಸಲು ಬಯಸುತ್ತೇನೆ. ಜೈ ಮಾತಾ ದೀ ಎಂದು ಟ್ವೀಟ್ ಮಾಡಿದ್ದಾರೆ ಕಂಗನಾ.

ಇತ್ತೀಚೆಗಷ್ಟೇ ಬಾಲಿವುಡ್ ನಟಿ ರೈತ ಪ್ರತಿಭಟನೆ ಬಗ್ಗೆ ನೀಡಿದ ಹೇಳಿಕೆ ವೈರಲ್ ಆಗಿತ್ತು. ಈ ವಿಚಾರವಾಗಿ ಸಾಕಷ್ಟು ಟೀಕೆ ಎದುರಿಸಿದ್ದರು ನಟಿ. ಪ್ರಮುಖ ಸೆಲೆಬ್ರಿಟಿಗಳು ನಟಿಯ ಟ್ವೀಟ್‌ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದರು.