ಫ್ರೀಯಾಗಿ ನಟಿಸಿರುವ ಸೂಪರ್​ಹಿಟ್​ ಬಾಲಿವುಡ್​ ನಟ-ನಟಿಯರಿವರು!

ಕೆಲವು ಬಾಲಿವುಡ್​ ತಾರೆಯರು ತಾವು ನಟಿಸಿದ್ದ ಕೆಲವು ಚಿತ್ರಗಳಿಗೆ ಸಂಭಾವನೆ ಪಡೆಯದೇ ಉಚಿತವಾಗಿ ಕೆಲಸ  ಮಾಡಿದ್ದಾರೆ. ಯಾರು ಆ ನಟ-ನಟಿಯರು?
 

From Deepika Padukone to Amitabh Bchchan celebs who worked free of cost

ಚಿತ್ರ ನಟ ನಟಿಯರು ಒಂದೊಂದು ಚಿತ್ರಕ್ಕೆ ಏನಿಲ್ಲವೆಂದರೂ ಕನಿಷ್ಠ 25 50 ಲಕ್ಷ ರೂಪಾಯಿಯಿಂದ ಶುರು ಮಾಡಿ 10 15 ಕೋಟಿಯವರೆಗೂ ಚಾರ್ಜ್​ ಮಾಡುವುದು ಇದೆ. ಅದು ಅವರವರ ಸ್ಟಾರ್​ (Star) ಪಟ್ಟದ ಮೇಲೆ ಸಾಗುತ್ತದೆ. ಕೋಟಿ ಕೋಟಿಗಟ್ಟಲೆ ಹಣವನ್ನೇ ಚಾರ್ಜ್​ ಮಾಡುವ ಸಾಕಷ್ಟು ತಾರೆಯರು ಇದ್ದಾರೆ. ಹಾಗೆಂದು ಪ್ರತಿಸಲವೂ ನಟರು ಹಣವನ್ನು ಪಡೆಯುತ್ತಾರೆ ಎಂದು ಹೇಳಲಾಗದು. ಅಪರೂಪದಲ್ಲಿ ಅಪರೂಪ ಎಂಬಂತೆ  ಕೆಲ ನಟ ನಟಿಯರು ಉಚಿತವಾಗಿ ಕೆಲಸ ಮಾಡಿದ್ದೂ ಇದೆ.  ಒಂದೇ ಒಂದು ಪೈಸೆಯನ್ನು ವಿಧಿಸದೆ ಅಥವಾ ಅತ್ಯಂತ ಕಡಿಮೆ ಹಣ ಪಡೆದ ನಟ ನಟಿಯರೂ ಇದ್ದಾರೆ.   ಸ್ನೇಹಕ್ಕಾಗಿಯೋ ಅಥವಾ ಇನ್ಯಾವುದೇ ಕಾರಣಕ್ಕಾಗಿ ಉಚಿತ ನಟನೆ ಮಾಡಿದ್ದಾರೆ. ಅ ಹೀಗೆ ಹೇಳಿದರೆ ಬಹುಶಃ ನಂಬುವುದು ಅಸಾಧ್ಯವೇ ಎನ್ನಿಸಬಹುದು. ಏಕೆಂದರೆ ಇಲ್ಲಿ ಹೇಳಹೊರಟಿರುವ ಸ್ಟಾರ್ಸ್​  ಮಾಮೂಲಿ ನಟರಲ್ಲ. ತಮ್ಮ ಸಿನಿಮಾಗಳಿಗೆ ಏನಿಲ್ಲವೆಂದರೂ 2 3 ಕೋಟಿ ರೂಪಾಯಿ ಚಾರ್ಜ್​ ಮಾಡುವವರು ಇವರು.
 
ಅಮಿತಾಭ್​ ಬಚ್ಚನ್​ (Amitabh Bacchan)
ಹೌದು. ನಟ ಶಾರುಖ್ ಖಾನ್​ ಅವರಿಂದ ಹಿಡಿದು ಅಮಿತಾಭ್ ಬಚ್ಚನ್​ ಸೇರಿದಂತೆ  ದೀಪಿಕಾ ಪಡುಕೋಣೆಯವರೆಗೆ ಕೆಲ ನಟ- ನಟಿಯರು ಫ್ರೀಯಾಗಿ ಕೆಲಸ ಮಾಡಿದ ತಾರೆಯರು ಇದ್ದಾರೆ.  ಮೊದಲಿಗೆ ಅಮಿತಾಭ್​ ಬಚ್ಚನ್​ ಅವರ ಕುರಿತು ಹೇಳೋಣ. ಇವರು  ಶತಮಾನದ ಸೂಪರ್ ಹೀರೋ ಎಂದೇ ಕರೆಸಿಕೊಳ್ಳುತ್ತಿರುವವರು. ಇವರು ಕೂಡ ಉಚಿತವಾಗಿ ಒಂದು ಚಿತ್ರದಲ್ಲಿ ಕೆಲಸ ಮಾಡಿದ್ದಾರೆ. ಹೌದು. ಆ ಚಿತ್ರ  'ಬ್ಲ್ಯಾಕ್'. ಸಂಜಯ್ ಲೀಲಾ ಬನ್ಸಾಲಿಯವರ ಈ ಚಿತ್ರಕ್ಕೆ ಬಿಗ್​ ಬಿ ಯಾವುದೇ ಶುಲ್ಕವನ್ನು ವಿಧಿಸಲಿಲ್ಲ. ಇದಕ್ಕೆ ಕಾರಣ, ಈ ಚಿತ್ರದ ಕಥೆಯಿಂದ ಅವರು ಅಷ್ಟು ಪ್ರೇರೇಪಿತರಾಗಿದ್ದರಂತೆ. "ನಾನು ಸಂಜಯ್ ಜೊತೆ ಕೆಲಸ ಮಾಡಲು ಬಯಸಿದ್ದೆ, ಅವರು ಮಾಡಿದ ಎಲ್ಲಾ ಕೆಲಸಗಳನ್ನು ನೋಡಿದ ನಂತರ ಈ ನಿರ್ಧಾರ ಮಾಡಿದ್ದೆ. ನನಗೆ ಅವಕಾಶ ಬ್ಲ್ಯಾಕ್​ ಮೂಲಕ ಒದಗಿ ಬಂದಿತ್ತು. ಚಿತ್ರಕಥೆ ಅಷ್ಟೊಂದು  ಅಗಾಧವಾಗಿತ್ತು. ನಾನು ಚಿತ್ರಕ್ಕಾಗಿ ಯಾವುದೇ ಸಂಭಾವನೆ ತೆಗೆದುಕೊಂಡಿಲ್ಲ ಎಂದು ಅಮಿತಾಭ್​ ಹೇಳಿಕೊಂಡಿದ್ದರು.

Courtney Tilia: ದೇವರು ಹೇಳಿದಂತೆ ಕೇಳಿ ಪೋರ್ನ್​ ಸ್ಟಾರ್​ ಆದೆ ಎಂದ ಶಿಕ್ಷಕಿ!

ಶಾರುಖ್​ ಖಾನ್​, ಸಲ್ಮಾನ್​ ಖಾನ್​ (Salman Khan)
ಗೆಳೆತನದ ಸಲುವಾಗಿಯೂ ಸಹ ಅನೇಕ ಕಲಾವಿದರು ಚಿತ್ರಕ್ಕೆ ಹಣ ತೆಗೆದುಕೊಂಡಿಲ್ಲ. ಇದಕ್ಕೆ ಸಾಕ್ಷಿಯಅದದ್ದು ಶಾರುಖ್​ ಖಾನ್​ (Shah Rukh Khan) ಅವರ ಅಭಿನಯದ ಕೆಲವು ಚಿತ್ರಗಳು. ತಾವು ನಟಿಸಿದ್ದ  'ಭೂತನಾಥ್', 'ಕ್ರೇಜಿ 4' ಮತ್ತು 'ದುಲ್ಹಾ ಮಿಲ್ ಗಯಾ' ಚಿತ್ರಗಳಿಗೆ ಶಾರುಖ್ ಹಣ ಪಡೆದಿಲ್ಲ ಎನ್ನಲಾಗಿದೆ.  ಇನ್ನು ಸಲ್ಮಾನ್​ ಖಾನ್​. 'ಅಜಬ್ ಪ್ರೇಮ್ ಕಿ ಗಜಬ್ ಕಹಾನಿ' ಚಿತ್ರದಲ್ಲಿ ಸಲ್ಮಾನ್ ಖಾನ್ ಅತಿಥಿ ಪಾತ್ರ ಮಾಡಿದ್ದರು. ಕತ್ರಿನಾ ಕೈಫ್ ಮತ್ತು ರಣಬೀರ್ ಕಪೂರ್ ಅಭಿನಯದ ಈ ಚಿತ್ರದಲ್ಲಿ ಸಲ್ಮಾನ್​ ಹಣ ಪಡೆದಿಲ್ಲ. 

ರಾಣಿ ಮುಖರ್ಜಿ, ದೀಪಿಕಾ ಪಡುಕೋಣೆ (Deepika Padukone)
ಕರಣ್ ಜೋಹರ್ ಅಭಿನಯದ 'ಕಭಿ ಖುಷಿ ಕಭಿ ಗಮ್' ಚಿತ್ರ ಭಾರೀ ಹಿಟ್ ಆಗಿತ್ತು. ಈ ಚಿತ್ರದಲ್ಲಿ ರಾಣಿ ಮುಖರ್ಜಿ ಕೂಡ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಇದಕ್ಕಾಗಿ ರಾಣಿ ಮುಖರ್ಜಿ ಕರಣ್‌ನಿಂದ ಯಾವುದೇ ಶುಲ್ಕವನ್ನು ಪಡೆದಿಲ್ಲ. ಫರಾ ಖಾನ್ ನಿರ್ದೇಶನದ ಸೂಪರ್ ಹಿಟ್ ಸಿನಿಮಾ ‘ಓಂ ಶಾಂತಿ ಓಂ’ ಚಿತ್ರಕ್ಕೆ ದೀಪಿಕಾ ಪಡುಕೋಣೆ ಪೇಮೆಂಟ್ ಕೇಳಲಿಲ್ಲ. ಶಾರುಖ್ ಖಾನ್ ಜೊತೆ ಸಿನಿಮಾ ಮಾಡಬೇಕೆಂದುಕೊಂಡಿದ್ದರು. ಇದು ಅವರ ವೃತ್ತಿಜೀವನಕ್ಕೆ ವಿಶೇಷವಾದ ಚಿತ್ರ ಎಂದು ಸಾಬೀತಾಯಿತು.

ಮದುವೆ ಕುರಿತು ಕಂಗನಾ ಹೇಳಿದ್ದೇನು? ಸಲ್ಮಾನ್‌ನನ್ನೂ ಬಿಡದ ಬಾಲಿವುಡ್ ಕ್ವೀನ್!

ಫರ್ಹಾನ್ ಅಖ್ತರ್, ಸೋನಮ್ ಕಪೂರ್, ಶಾಹಿದ್ ಕಪೂರ್, ಕತ್ರಿನಾ
ಇನ್ನು, ರಾಕೇಶ್ ಓಂಪ್ರಕಾಶ್ ಮೆಹ್ರಾ ಅಭಿನಯದ 'ಭಾಗ್ ಮಿಲ್ಕಾ ಭಾಗ್' ಚಿತ್ರ ಎಲ್ಲರಿಗೂ ಇಷ್ಟವಾಗಿತ್ತು. ಈ ಚಿತ್ರದಲ್ಲಿ ಕೆಲಸ ಮಾಡಲು ಫರ್ಹಾನ್ ಅಖ್ತರ್ ಅಥವಾ ಸೋನಮ್ ಕಪೂರ್ (Soman Kapoor) ಯಾವುದೇ ಶುಲ್ಕವನ್ನು ತೆಗೆದುಕೊಂಡಿಲ್ಲ. ಇಬ್ಬರೂ ಕಲಾವಿದರು ಆರಂಭಿಕ ಶುಭ ಎನ್ನುವ ಅರ್ಥದಲ್ಲಿ ತೆಗೆದುಕೊಂಡಿದ್ದು ಕೇವಲ 11 ರೂ. ‘ಕಬೀರ್ ಸಿಂಗ್’ ಸಿನಿಮಾದ ಮೂಲಕ ವಿಶಿಷ್ಟ ಗುರುತಾಗಿರುವ ಶಾಹಿದ್ ಕಪೂರ್, ವಿಶಾಲ್ ಭಾರದ್ವಾಜ್ ಅಭಿನಯದ ‘ಹೈದರ್’ ಚಿತ್ರಕ್ಕೆ ಯಾವುದೇ ಶುಲ್ಕ ಪಡೆದಿರಲಿಲ್ಲ. ಚಿತ್ರದ ಬಜೆಟ್ ಹೆಚ್ಚಿಸುವುದು ಅವರಿಗೆ ಇಷ್ಟವಿರಲಿಲ್ಲ. ಹೃತಿಕ್ ರೋಷನ್ ಮತ್ತು ಸಂಜಯ್ ದತ್ ಅಭಿನಯದ 'ಅಗ್ನಿಪಥ್' ಚಿತ್ರದ 'ಚಿಕ್ನಿ ಚಮೇಲಿ' ಹಾಡು ವಿಶೇಷ ಹಿಟ್ ಆಗಿತ್ತು. ಈ ಡಾನ್ಸ್​ಗೆ ಕತ್ರಿನಾ ಶುಲ್ಕ ವಿಧಿಸಿಲ್ಲ.
 

Latest Videos
Follow Us:
Download App:
  • android
  • ios