ನವದೆಹಲಿ(ಏ.23): ಇತ್ತೀಚೆಗಷ್ಟೇ ದುರ್ಗಾಷ್ಟಮಿ ಪ್ರಯುಕ್ತ ಈರುಳ್ಳಿ ಪ್ರಸಾದವನ್ನು ಟ್ವೀಟಿಸಿ ವಿವಾದಕ್ಕೀಡಾಗಿದ್ದ ಬಾಲಿವುಡ್‌ ನಟಿ ಕಂಗನಾ ರಾಣಾವತ್‌ ಅವರು ಇದೀಗ ಕೊರೋನಾ ಲಸಿಕೆ ಕುರಿತಾದ ಹೇಳಿಕೆಯಿಂದ ಜನರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ಈ ಸಂಬಂಧ ಗುರುವಾರ ಟ್ವೀಟ್‌ ಮಾಡಿರುವ ನಟಿ ಕಂಗನಾ, ‘ಒಂದು ಹಂತದಲ್ಲಿ ಇದೇ ಲಸಿಕೆಗಳ ವಿರುದ್ಧ ಪ್ರಚಾರ ನಡೆಸಿ, ಈ ಲಸಿಕೆಗಳನ್ನು ಪಡೆಯುವುದಿಲ್ಲ ಎಂದಿದ್ದ ದೇಶದ್ರೋಹಿಗಳು ಇದೀಗ ತಮ್ಮ ಪ್ರಾಣ ರಕ್ಷಣೆಗೆ ಇದೇ ಲಸಿಕೆ ಪಡೆಯಲು ಕಾತರರಾಗಿದ್ದಾರೆ’ ಎಂದು ವ್ಯಂಗ್ಯವಾಡಿದ್ದಾರೆ.

ಆರ್ಥಿಕ ಬಿಕ್ಕಟ್ಟು: ತಂದೆಗೆ ನೆರವಾಗಲು ಕಾಲೇಜು ಬಿಟ್ಟ ಅಭಿಷೇಕ್ ಬಚ್ಚನ್!

ದೇಶಾದ್ಯಂತ ದೈನಂದಿನ ಸುಮಾರು 3 ಲಕ್ಷ ಕೇಸ್‌ಗಳು ದಾಖಲಾಗುತ್ತಿರುವ ಹೊತ್ತಿನಲ್ಲಿ ಕಂಗನಾ ಮಾಡಿರುವ ಈ ಅಸೂಕ್ಷ್ಮತೆಯ ಟ್ವೀಟ್‌ ಬಗ್ಗೆ ಭಾರೀ ಟ್ವೀಟಿಗರಿಂದ ಭಾರೀ ಟೀಕೆ ವ್ಯಕ್ತವಾಗಿದೆ.

ಇತ್ತೀಚೆಗೆ ಜನಸಂಖ್ಯೆಯಿಂದಾಗುವ ಸಮಸ್ಯೆ ಬಗ್ಗೆ ಮಾತನಾಡಿದ ಕಂಗನಾ ರಣಾವತ್ ಮೂರನೇ ಮಗುವಿಗೆ ದಂಡ ಹಾಕ್ಬೇಕು ಅಥವಾ ಜೈಲಿಗೆ ಕಳುಹಿಸಬೇಕು ಎಂದು ಹೇಳಿ ಸುದ್ದಿಯಾಗಿದ್ದರು. ನಿಮ್ಮ ತಮ್ಮನೂ ಮೂರನೇ ಮಗುವಲ್ವಾ..? ಜೈಲಿಗೆ ಹಾಕಿ ಎಂದಿದ್ದರು ನೆಟ್ಟಿಗರು.