ಬಾಲಿವುಡ್ ಕ್ವೀನ್ ಕಂಗನಾ ತಮ್ಮ ತಂದೆಯ ಬಗ್ಗೆ ಮಾತನಾಡಿದ್ದಾರೆ. ತಂದೆಯ ಜೊತೆಗೆ ತಮ್ಮ ಸಂಬಂಧ ಹೇಗಿತ್ತು ಎನ್ನುವುದನ್ನೂ ರಿವೀಲ್ ಮಾಡಿದ್ದಾರೆ. ಲೇಟೆಸ್ಟ್ ಪೋಸ್ಟ್ ಹಾಕಿದ ನಟಿ ಈ ವಿಚಾರ ತಿಳಿಸಿದ್ದಾರೆ.

ನನ್ನ ತಂದೆಯಲ್ಲಿ ಲೈಸೆನ್ಸ್ಡ್ ಗನ್ ಮತ್ತು ರೈಫಲ್ಗಳು ಇದ್ದವು. ಅವರ ಜೊತೆ ಗೂಂಡಾಗಳೂ ಇದ್ದರು. ನಾನು ಬೈಗಳು ತಿನ್ನುವುದಲ್ಲ, ಕಿರುಚಾಟ ಕೇಳಿ ಬೆಳೆದೆ ಎಂದಿದ್ದಾರೆ.

ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಪಡೆವಾಗ ಹಸಿರು ಸೀರೆಯಲ್ಲಿ ನೋರಾ

ಅವರ ಕಾಲೇಜು ದಿನಗಳಲ್ಲಿ ಗ್ಯಾಂಗ್ ವಾರ್ ಮಾಡುತ್ತಿದ್ದರು. ಇದರಿಂದಾಗಿ ಅವರಿಗೆ ಒಂದು ಗೂಂಡಾ ಎಂಬ ಸ್ಥಾನ ಸಿಕ್ಕಿತ್ತು ಎಂದು ಕಂಗನಾ ಹೇಳಿದ್ದಾರೆ.

ಕಂಗನಾ ರಣಾವತ್ ತಲೈವಿ ಸಿನಿಮಾ ಶೂಟಿಂಗ್ ಮುಗಿಸಿದ್ದು ಧಾಕಡ್ ಸಿನಿಮಾ ಶೂಟ್‌ನಲ್ಲಿ ಬ್ಯುಸಿ ಇದ್ದಾರೆ. ದೇಶದಲ್ಲಿ ನಡೆಯುವ ಬೆಳವಣಿಗೆಗಳ ಬಗ್ಗೆ ಪ್ರತಿಕ್ರಿಯಿಸಿಯೇ ಸುದ್ದಿಯಲ್ಲಿರುತ್ತಾರೆ ಕಂಗನಾ.