Asianet Suvarna News Asianet Suvarna News

ಸಂದೇಶ ಕೊಡೋಕೆ ನಾನು ಪೋಸ್ಟ್‌ಮ್ಯಾನ್‌ ಅಲ್ಲ, ಫಿಲಂ ಮೇಕರ್‌: ಕಮಲ್ ಹಾಸನ್‌

‘ಸಿನಿಮಾ ನೋಡಿದಾಗ ಜನರಲ್ಲೊಂದು ಬದಲಾವಣೆ ಆದರೆ ಸಂತೋಷ. ಆದರೆ ಸಿನಿಮಾ ಮೂಲಕ ಸಂದೇಶ ಕೊಡೋಕೆ ನಾನು ಪೋಸ್ಟ್‌ ಮ್ಯಾನ್‌ ಅಲ್ಲ, ಫಿಲಂ ಮೇಕರ್‌’ ಎಂದು ಕಮಲ ಹಾಸನ್‌ ಹೇಳಿದ್ದಾರೆ.

kamal haasan talks about vikram film in bengaluru gvd
Author
Bangalore, First Published Jun 3, 2022, 3:00 AM IST

‘ಸಿನಿಮಾ ನೋಡಿದಾಗ ಜನರಲ್ಲೊಂದು ಬದಲಾವಣೆ ಆದರೆ ಸಂತೋಷ. ಆದರೆ ಸಿನಿಮಾ ಮೂಲಕ ಸಂದೇಶ ಕೊಡೋಕೆ ನಾನು ಪೋಸ್ಟ್‌ ಮ್ಯಾನ್‌ ಅಲ್ಲ, ಫಿಲಂ ಮೇಕರ್‌’ ಎಂದು ಕಮಲ ಹಾಸನ್‌ ಹೇಳಿದ್ದಾರೆ. ಕಮಲ್‌ ನಿರ್ಮಾಣ ಹಾಗೂ ನಟನೆಯ ‘ವಿಕ್ರಮ್‌’ ಚಿತ್ರದ ಪ್ರಚಾರಕ್ಕಾಗಿ ಬೆಂಗಳೂರಿಗೆ ಆಗಮಿಸಿದ ಅವರು, ಅಭಿಮಾನಿಗಳ ಕರತಾಡನದ ಮಧ್ಯೆಯೇ ಡಾ ರಾಜ್‌, ಪುನೀತ್‌, ಗಿರೀಶ್‌ ಕಾರ್ನಾಡ್‌, ಬಿ ವಿ ಕಾರಂತ ಮೊದಲಾದವರನ್ನು ಸ್ಮರಿಸಿಕೊಂಡರು. ‘ಇತರರಿಗೆ ಹೇಗೆ ಗೌರವ ಕೊಡಬೇಕು, ಇನ್ನೊಬ್ಬರ ಜೊತೆಗೆ ನಮ್ಮ ವರ್ತನೆ ಹೇಗಿರಬೇಕು ಅನ್ನೋದನ್ನು ನನಗೆ ಕಲಿಸಿದ್ದು ಡಾ. ರಾಜ್‌ ಕುಮಾರ್‌. ಅವರು ಅವರ ಮಕ್ಕಳಿಗೂ ಅದೇ ವರ್ತನೆಯನ್ನು ಧಾರೆ ಎರೆದರು. ಪುನೀತ್‌ ನಾನು ಎತ್ತಿಕೊಂಡ ಮಗು. 

ಆತನ ಜೊತೆಗೊಂದು ಸಿನಿಮಾ ಮಾಡ್ಬೇಕು ಅಂದುಕೊಂಡಿದ್ದೆ. ಆದರೆ ಪ್ರಕೃತಿ ನಾವಂದುಕೊಂಡದ್ದನ್ನೂ ಮೀರಿ ಏನೇನೋ ಮಾಡಿ ಬಿಡುತ್ತೆ. ಇನ್ನೊಂದು ನೆನಪು, ಆಗ ನನ್ನ ಕನ್ನಡ ಸಿನಿಮಾ ‘ಕೋಕಿಲ’ ರಿಲೀಸ್‌ ಆಗಿತ್ತು. ಮೊದಲ ದಿನ ಮೊದಲ ಶೋ ನೋಡಿದ ಅಣ್ಣಾವ್ರು, ‘ಬಹಳ ಚೆನ್ನಾಗಿ ಆ್ಯಕ್ಟ್ ಮಾಡ್ತೀರಿ’ ಅಂದು ಬೆನ್ನು ತಟ್ಟಿದ್ದರು. ಅವರ ದನಿ ಇನ್ನೂ ಕಿವಿಯಲ್ಲಿದೆ. ಗಿರೀಶ್‌ ಕಾರ್ನಾಡ್‌, ಬಿ ವಿ ಕಾರಂತ ಮೊದಲಾದವರನ್ನು ಆಗಾಗ ಸುಚಿತ್ರಾ ಫಿಲಂ ಸಿಟಿಯಲ್ಲಿ ಭೇಟಿಯಾಗುತ್ತಿದ್ದೆ. ಕನ್ನಡದ ಅನೇಕ ಲೇಖಕರ ಜೊತೆಗೆ ನನಗೆ ಒಡನಾಟವಿತ್ತು’ ಎಂದೂ ಹೇಳಿದರು.‘ಥಿಯೇಟರ್‌ನಲ್ಲಿ ಪಕ್ಕ ಕೂತವನ ಜಾತಿ, ಪಂಥ ಯಾವುದೂ ನಮಗೆ ಗೊತ್ತಿರಲ್ಲ.

ವೈವಿದ್ಯತೆಯಲ್ಲಿ ಏಕತೆ ಸಾರುವ ದೇಶ ಭಾರತ: ಕಮಲ್ ಹಾಸನ್

ಅಲ್ಲಿ ನಾವೆಲ್ಲರೂ ಪ್ರೇಕ್ಷಕರು. ಹಾಗಿರುವ ಜನ ಇವತ್ತು ನನ್ನನ್ನು ಎತ್ತರಕ್ಕೇರಿಸಿದ್ದಾರೆ. ವಿಕ್ರಮ್‌ ಸಿನಿಮಾ ಬ್ಲಾಕ್‌ ಬಸ್ಟರ್‌ ಚಿತ್ರ ಹೌದಾ ಅಲ್ವಾ ಅನ್ನೋದನ್ನು ನೀವೇ ನಿರ್ಧರಿಸಬೇಕು’ ಎಂದರು. ಈ ವೇಳೆ ಹೂವು ಕೊಡಲು ಬಂದ ಪುಟ್ಟ ಹುಡುಗಿಯನ್ನು ಹತ್ತಿರ ಕರೆದು ಅವಳ ಜಡೆಗೆ ಹೂವು ಮುಡಿಸಿದ ಕಮಲ್‌, ‘ಜಾಣೆಯಾಗ್ಬೇಕು’ ಅಂದು ಕಳಿಸಿದ್ದು ಆಪ್ತವಾಗಿತ್ತು. ಲೋಕೇಶ್ ಕನಗರಾಜ್ ವಿಕ್ರಮ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಸಿನಿಮಾದಲ್ಲಿ ಕಮಾಲ್ ಹಾಸನ್ ಜೊತೆಗೆ ವಿಜಯ್ ಸೇತುಪತಿ, ಸೂರ್ಯ ಹಾಗೂ ಫಹಾದ್ ಫಾಜಿಲ್ ನಟಿಸಿದ್ದಾರೆ.  ಸಾಮಾನ್ಯವಾಗಿ ಹೆಸರಿನ‌ ಜೊತೆ ಊರಿನ ಹೆಸರು ಸೇರಿಸಿಕೊಳ್ತಾರೆ ಆದ್ರೆ ವಿಜಯ್ ಸೇತುಪತಿ ನಿಮ್ಮ ಹೆಸರನ್ನ ಅವರ ಹೆಸರಿನ ಜೊತೆ ಸೇರಿಕೊಂಡಿದ್ದಾರೆ. ಅದೇ ಅವರ ಎನರ್ಜಿ ಸೂರ್ಯ ತಂದೆ ನನ್ನ ಸ್ನೇಹಿತ ಅಂತ ಹೇಳೋದಿಲ್ಲ. 

Vikram Movie: ಪುನೀತ್ ಇದ್ದಿದ್ದರೆ ಅವರ ಜೊತೆ ಸಿನಿಮಾ ಮಾಡುತ್ತಿದ್ದೆ: ಕಮಲ್ ಹಾಸನ್

ಯಾಕಂದ್ರೆ ಅವರು ನನ್ನ ಸಹೋದರ. ಸೂರ್ಯನಿಗೆ ನಾನು ಚಿಕ್ಕಪ್ಪ. ನೀವು ಸೂರ್ಯ ಅಂತಾ ಕರೆದಾಗ ಎಷ್ಟು ಖುಷಿ ಆಗುತ್ತೋ ಅಷ್ಟೇ ಖುಷಿ ನನಗೂ ಆಗತ್ತೆ, ನನ್ನ ಫಿಟ್ನೆಸ್ ಸೀಕ್ರೆಟ್ ನಾನು ಹೆಚ್ಚು ದಿನ‌ ಬದುಕಬೇಕು ನಿಮ್ಮನ್ನ ಎಂಟರ್ಟೈನ್ ಮಾಡಬೇಕು.  ನಾನು ಸಿನಿಮಾ ಬ್ಲಾಕ್ ಬಾಸ್ಟರ್ ಅಂತ ಹೇಳಿದ್ರೆ ತಪ್ಪಾಗುತ್ತೆ. ನೀವು ಅಭಿಮಾನಿಗಳು ಬ್ಲಾಕ್ ಬಾಸ್ಟರ್ ಅಂತ ಹೇಳಬೇಕು ಎಂದು ಕಮಲ್ ತಿಳಿಸಿದರು.  ಇನ್ನು  ಸಂಗೀತ ನಿರ್ದೇಶಕ ಅನಿರುದ್ದ್  ಬಗ್ಗೆ ಮಾತನಾಡಿದ ಕಮಲ್ ಹಾಸನ್ ಅನಿರುದ್ಧ್ ಈ ರೀತಿ ಮ್ಯೂಸಿಕ್ ಮಾಡುತ್ತಾನೆ ಅನ್ನೋದೇ ಆಶ್ಚರ್ಯ. ಅವನ ತಾತನ ಕಾಲದಿಂದ ಅವ್ರ ಕುಟುಂಬದವರು ಮ್ಯೂಸಿಕ್ ಕಂಪೋಸ್ ಮಾಡಿಕೊಂಡು ಬರ್ತಿದ್ದಾರೆ. ಅನಿರುದ್ಧ್ ನಾಲ್ಕನೇ ಜನರೇಷನ್ ಎಂದು ಕಮಲ್ ಹೇಳಿದರು. 

Latest Videos
Follow Us:
Download App:
  • android
  • ios