Asianet Suvarna News Asianet Suvarna News

ಮೊಬೈಲ್‌ ನೋಡ್ತಾ ನೋಡ್ತಾ ಬಿದ್ದು ಗಾಯಗೊಂಡ ಕಾಜೋಲ್‌: ಬೇಕಿತ್ತಾ ಇದೆಲ್ಲಾ ಎಂದ ನೆಟ್ಟಿಗರು

ನಟಿ ಕಾಜೋಲ್‌ ಮಾ ದುರ್ಗೆಯ ದರ್ಶನಕ್ಕೆ ಬಂದಾಗ ಮೊಬೈಲ್‌ ಫೋನ್‌ನಲ್ಲಿ ಮುಳುಗಿದ್ದ ಕಾರಣ, ಮೆಟ್ಟಿಲು ಇರುವುದನ್ನು ಗಮನಿಸದೇ ಎಡವಿ ಬಿದ್ದು ಪೆಟ್ಟು ಮಾಡಿಕೊಂಡಿದ್ದಾರೆ.
 

Kajol falls at Durga puja pandal; son Yug comes to her rescue suc
Author
First Published Oct 21, 2023, 4:55 PM IST

 ನವರಾತ್ರಿ ಹಬ್ಬವನ್ನು ಎಲ್ಲೆಡೆ ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ. ಸಾಮಾನ್ಯ ಜನರಿಂದ ಹಿಡಿದು ದೊಡ್ಡ ಸೆಲೆಬ್ರಿಟಿಗಳವರೆಗೆ ಮಾತೆ ದುರ್ಗೆಯ ಭಕ್ತಿಯಲ್ಲಿ ಮುಳುಗಿರುವುದು ಕಂಡುಬರುತ್ತದೆ. ಇದರೊಂದಿಗೆ, ಅನೇಕ  ಬಾಲಿವುಡ್ ಸೆಲೆಬ್ರಿಟಿಗಳು ಸಾಮಾನ್ಯ ಜನರಂತೆ ದುರ್ಗಾಪೂಜೆಯಲ್ಲಿ ಪಾಲ್ಗೊಂಡು ದೇವಿಯ ಆಶೀರ್ವಾದವನ್ನು ತೆಗೆದುಕೊಳ್ಳುವುದನ್ನು ಕಾಣಬಹುದು. ಅದರಲ್ಲಿಯೂ ನವರಾತ್ರಿಯನ್ನು ಮುಂಬೈನಲ್ಲಿ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ನವರಾತ್ರಿ ಮತ್ತು ಗಣೇಶನ ಹಬ್ಬದಲ್ಲಿ ಬಹುತೇಕ ಎಲ್ಲಾ ತಾರೆಯರು ಭಾಗವಹಿಸುವುದು ಮಾಮೂಲು. ಅದೇ ರೀತಿ ನವರಾತ್ರಿಯ ಹಬ್ಬದಲ್ಲಿ ಪಾಲ್ಗೊಳ್ಳಲು ಹೋದ ಬಾಲಿವುಡ್‌ ನಟಿ ಕಾಜೋಲ್‌ ಈಗ ಸಕತ್‌ ಸುದ್ದಿಯಾಗಿದ್ದಾರೆ. 

ಮೊನ್ನೆಯಷ್ಟೇ 'ಕುಚ್ ಕುಚ್ ಹೋತಾ ಹೈ' ಚಿತ್ರದ 25ನೇ ವರ್ಷಾಚರಣೆಯನ್ನು ಉತ್ಸಾಹದಿಂದ ಆಚರಿಸಿಕೊಂಡಿರುವ ನಟಿ ಕಾಜೋಲ್ ಅವರು  ಪ್ರತಿ ವರ್ಷ ನವರಾತ್ರಿಯ ಸಮಯದಲ್ಲಿ ತಮ್ಮ ಕುಟುಂಬದೊಂದಿಗೆ ದುರ್ಗಾ ಪೂಜೆ ಸಮಾರಂಭದಲ್ಲಿ ಭಾಗವಹಿಸುತ್ತಾರೆ ಮತ್ತು ಮಾ ದುರ್ಗೆಯ ಆಶೀರ್ವಾದವನ್ನು ತೆಗೆದುಕೊಳ್ಳುತ್ತಾರೆ. ಈ ಬಾರಿಯೂ ನಟಿ ಪಂಗಡಕ್ಕೆ ಆಗಮಿಸಿ ತಾಯಿಯ ಆಶೀರ್ವಾದ ಪಡೆದಿದ್ದರು. ಅದರ  ವೀಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿವೆ.   ದುರ್ಗಾ ಪೂಜೆಯ ಮಂಟಪದಲ್ಲಿ ಮಾ ದುರ್ಗೆಯ ವಿಗ್ರಹದ ಮುಂದೆ ನಟಿ ಕುಳಿತು ಭಕ್ತಿಯಿಂದ ಭಜನೆ ಮಾಡಿದ್ದರ ವಿಡಿಯೋ ವೈರಲ್‌ ಆಗಿತ್ತು.

ಅಬ್ಬಾ! ನನ್ನ ಮಗು ಗಾಜಾದಲ್ಲಿ ಹುಟ್ಟಿದ್ರೆ ಏನಾಗ್ತಿತ್ತು? ಅಲ್ಲಿಯ ಮಕ್ಕಳಿಗಾಗಿ ಸ್ವರಾ ಭಾಸ್ಕರ್‌ ಕಣ್ಣೀರು- ಭಾವುಕ ಪೋಸ್ಟ್‌
 
ಆದರೆ ಇಂದು ಮಾತ್ರ ನಟಿ ಕಾಜೋಲ್‌ ಅವರಿಗೆ ಒಳ್ಳೆಯ ದಿನವಾಗಿರಲಿಲ್ಲ. ಇಂದು ಕೂಡ ಮಾ ದುರ್ಗೆಯ ಆಶೀರ್ವಾದ ಪಡೆಯಲು ನಟಿ ಆಗಮಿಸುತ್ತಿದ್ದಂತೆಯೇ ಎಡವಿ ಬಿದ್ದು ಗಾಯ ಮಾಡಿಕೊಂಡಿದ್ದಾರೆ. ಗುಲಾಬಿ ಸೀರೆಯುಟ್ಟು ಕಂಗೊಳಿಸುತ್ತಿದ್ದ ನಟಿ, ಮೊಬೈಲ್‌ ನೋಡುತ್ತಾ ಬಂದಿದ್ದೇ ಈ ದುರಂತಕ್ಕೆ ಕಾರಣವಾಗಿದೆ. ಮಾ ದುರ್ಗೆಯನ್ನು ಇಟ್ಟ ಪೆಂಡಾಲ್‌ ಬಳಿ ಮೆಟ್ಟಿಲು ಇತ್ತು. ಆದರೆ ನಟಿ ಅದನ್ನು ಗಮನಿಸಿಲ್ಲ. ಮೊಬೈಲ್‌ ನೋಡುವುದರಲ್ಲಿ ಬಿಜಿಯಾಗಿದ್ದರು. ಮೊಬೈಲ್‌ನಲ್ಲಿ ಏನೋ ಮಾಡುತ್ತಿದ್ದ ನಟಿ ಇಳಿ ಮೆಟ್ಟಿಲು ಇರುವುದನ್ನು ಗಮನಿಸದೇ ಕಾಲಿಟ್ಟುಬಿಟ್ಟಿದ್ದಾರೆ. ಹೈ ಹೀಲ್ಸ್‌ ಬೇರೆ, ಕೇಳಬೇಕೆ? ಎಡವಿ ಬಿದ್ದು ಗಾಯ ಮಾಡಿಕೊಂಡರು.

ಅಲ್ಲಿದ್ದವರು ನಟಿಯನ್ನು ಹಿಡಿದುಕೊಂಡರು. ಮಗ ಯುಗ್‌ ಅಮ್ಮನನ್ನು ಹಿಡಿದುಕೊಂಡ. ಆದರೂ ಗಾಯವಾಗಿದ್ದರಿಂದ ನೋವಿನಿಂದ ನಟಿ ಬಳಲಿದ್ದನ್ನು ವಿಡಿಯೋದಲ್ಲಿ ನೋಡಬಹುದು. ಹೀಗೆ ಆದುದಕ್ಕೆ ಸಾಂತ್ವನ ಹೇಳುವುದನ್ನು ಬಿಟ್ಟ ನೆಟ್ಟಿಗರು ಟ್ರೋಲ್‌ ಮಾಡುತ್ತಿದ್ದಾರೆ. ಇದಕ್ಕೆ ಕಾರಣ, ನಟಿ ಪದೇ ಪದೇ ಹೀಗೆ ಎಡವಿ ಬೀಳುವ ಕಾರಣ. ಅನೇಕ ಮಂದಿ ಯಾಕೆ ಮೇಡಂ. ಪದೇ ಪದೇ ಹೀಗೆ ಎಡವುತ್ತಲೇ  ಇರುತ್ತೀರಿ. ನೋಡಿ ನಡೆಯಬಾರದಾ ಎಂದು ಪ್ರಶ್ನಿಸಿದರೆ, ಇನ್ನು ಅನೇಕ ಮಂದಿ ಮೊಬೈಲ್‌ ನೋಡುತ್ತಾ ನಡೆಯುವುದು ಬೇಕಿತ್ತಾ ನಿಮಗೆ ಎಂದು ಪ್ರಶ್ನಿಸುತ್ತಿದ್ದಾರೆ.  

16ಕ್ಕೆ ಮದ್ವೆ, 17ಕ್ಕೆ ಇಬ್ಬರು ಮಕ್ಕಳು, 18ಕ್ಕೆ ಡಿವೋರ್ಸ್‌: ಕಿರುತೆರೆಗೆ ಮರಳಿದ ಈ ಬಿಗ್‌ಬಾಸ್‌ ವಿಜೇತೆ!

 

Follow Us:
Download App:
  • android
  • ios