ದಕ್ಷಿಣ ಭಾರತೀಯ ಸಿನಿಮಾರಂಗದ ಖ್ಯಾತ ನಟಿ ಕಾಜಲ್ ಅಗರ್ವಾಲ್(Kajal aggarwal) ತಾಯಿಯಾಗಿದ್ದಾರೆ. ಕಾಜಲ್ ಇಂದು(ಏಪ್ರಿಲ್ 18) ಖಾಸಗಿ ಆಸ್ಪತ್ರೆಯಲ್ಲಿ ಗಂಡು ಮಗುವಿಗೆ ಜನ್ಮ(baby boy ) ನೀಡಿದ್ದಾರೆ ಎನ್ನುವ ಮಾಹಿತಿ ತಿಳಿದುಬಂದಿದೆ.

ದಕ್ಷಿಣ ಭಾರತೀಯ ಸಿನಿಮಾರಂಗದ ಖ್ಯಾತ ನಟಿ ಕಾಜಲ್ ಅಗರ್ವಾಲ್(Kajal aggarwal) ತಾಯಿಯಾದ ಸಂಭ್ರಮದಲ್ಲಿದ್ದಾರೆ. ಕಾಜಲ್ ಇಂದು(ಏಪ್ರಿಲ್ 18) ಖಾಸಗಿ ಆಸ್ಪತ್ರೆಯಲ್ಲಿ ಗಂಡು ಮಗುವಿಗೆ ಜನ್ಮ(baby boy ) ನೀಡಿದ್ದಾರೆ ಎನ್ನುವ ಮಾಹಿತಿ ತಿಳಿದುಬಂದಿದೆ. ತಾಯಿ ಮತ್ತು ಮಗು ಇಬ್ಬರೂ ಆರೋಗ್ಯವಾಗಿದ್ದಾರೆ ಎಂದು ಕುಟುಂಬ ಮೂಲಗಳು ಮಾಹಿತಿ ನೀಡಿದೆ ಎಂದು ಆಂಗ್ಲ ಮಾಧ್ಯಮ ವರದಿ ಮಾಡಿದೆ. ಮೊದಲ ಮಗುವನ್ನು ಸ್ವಾಗತಿಸಿದ ಕಾಜಲ್ ಮತ್ತು ಗೌತಮ್ ದಂಪತಿಗೆ ಅಭಿಮಾನಿಗಳು ಮತ್ತು ಆಪ್ತರು ಶುಭಹಾರೈಸುತ್ತಿದ್ದಾರೆ.

Add Asianetnews Kannada as a Preferred SourcegooglePreferred

ಕಾಜಲ್ ಮಗುವಿಗೆ ಜನ್ಮ ನೀಡಿದ ಬಗ್ಗೆ ನಟಿಯಾಗಲಿ ಅಥವಾ ಪತಿ ಗೌತಮ್ ಯಾವುದೇ ಮಾಹಿತಿ ಹಂಚಿಕೊಂಡಿಲ್ಲ. ಆದರೆ ಕಾಜಲ್ ಮಗುವನ್ನು ನೋಡಲು ಅಭಿಮಾನಿಗಳು ಕಾತರರಾಗಿದ್ದಾರೆ. ತುಂಬು ಗರ್ಭಿಣಿಯಾಗಿದ್ದ ಕಾಜಲ್ ಬೇಬಿ ಬಂಪ್ ಫೋಟೋಗಳು ಇತ್ತೀಚಿಗೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಸಾಮಾಜಿಕ ಜಾಲತಾಣದಲ್ಲಿ ಸಖತ್ ಆಕ್ಟೀವ್ ಆಗಿರುವ ಕಾಜಲ್ ಬೇಬಿ ಬಂಪ್ ಫೋಟೋಗಳನ್ನು ಶೇರ್ ಮಾಡುತ್ತಿದ್ದರು. ಇತ್ತೀಚಿಗಷ್ಟೆ ಸೀಮಂತ ಸಮಾರಂಭ ನೆರವೇರಿದ್ದು ಸೀಮಂತದ ಸುಂದರ ಫೋಟೋಗಳು ಸಹ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಸೀಮಂತ ಸಮಾರಂಭ ಸರಳವಾಗಿ ಅಷ್ಟೇ ಅಲ್ಲದೇ ಸಾಂಪ್ರದಾಯಿಕವಾಗಿ ನೆರವೇರಿತ್ತು. ಸೀಮಂತ ಸಮಾರಂಭದಲ್ಲಿ ಕುಟುಂಬಸ್ಥರು ಹಾಗೂ ಆತ್ಮೀಯರು ಮಾತ್ರ ಭಾಗವಹಿಸಿದ್ದರು. ಸೀಮಂತದ ಫೋಟೋವನ್ನು ಸೋಷಿಯಲ್ ಮೀಡಿಯಾದಲ್ಲಿ ಕಾಜಲ್ ಅವರೇ ಶೇರ್ ಮಾಡಿಕೊಂಡಿದ್ದರು. ಚೊಚ್ಚಲ ಮಗುವಿನ ನಿರೀಕ್ಷೆಯಲ್ಲಿರುವ ಕಾಜಲ್ ಅಗರ್ವಾಲ್ ಹಾಗೂ ಗೌತಮ್ ದಂಪತಿಗೆ ತಾರೆಯರು ಹಾಗೂ ಅಭಿಮಾನಿಗಳು ಶುಭ ಹಾರೈಸುತ್ತಿದ್ದರು.

ಮಗಧೀರ, ಆರ್ಯ 2 ಸೇರಿದಂತೆ ತೆಲುಗು ಹಾಗೂ ತಮಿಳಿನಲ್ಲಿ ಅನೇಕ ಸೂಪರ್ ಹಿಟ್ ಸಿನಿಮಾಗಳನ್ನು ನೀಡಿರುವ ನಟಿ ಕಾಜಲ್ ಅರ್ಗವಾಲ್. 2020ರಲ್ಲಿ ಬಹುಕಾಲದ ಗೆಳೆಯ ಗೌತಮ್ ಕೀಚಲು ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಹೈದರಾಬಾದ್ ಮತ್ತು ಮುಂಬೈನಲ್ಲಿ ನಡೆದ ಮದುವೆ ಸಮಾರಂಭದಲ್ಲಿ ಕುಟುಂಬದವರು ಮತ್ತು ಸ್ನೇಹಿತರು ಮಾತ್ರ ಭಾಗಿಯಾಗಿದ್ದರು. ಇದೀಗ ಕಾಜಲ್ ದಂಪತಿ ಮದುವೆಯಾಗಿ 2 ವರ್ಷಗಳಲ್ಲಿ ಮೊದಲ ಮಗುವನ್ನು ಸ್ವಾಗತಿಸಿದ್ದಾರೆ.

ಚಿರಂಜೀವಿ 'ಆಚಾರ್ಯ' ಸಿನಿಮಾದಿಂದ ಕಾಜಲ್ ಪಾತ್ರ ಕಿತ್ತೆಸೆದ ಚಿತ್ರತಂಡ; ಕಾರಣವೇನು?

ಕಾಜಲ್ ಸಿನಿಮಾ ಜರ್ನಿ ಬಗ್ಗೆ ಹೇಳುವುದಾದರೆ ಹಿಂದಿ ಸಿನಿಮಾರಂಗದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ಕಾಜಲ್ ದಕ್ಷಿಣ ಭಾರತೀಯ ಚಿತ್ರರಂಗದಲ್ಲಿ ಖ್ಯಾತಿಗಳಿಸಿದರು. 2009ರಲ್ಲಿ ಬಂದ ಮಗಧೀರ ಸಿನಿಮಾ ಕಾಜಲ್ ವೃತ್ತಿ ಜೀವನಕ್ಕೆ ದೊಡ್ಡ ಬ್ರೇಕ್ ನೀಡಿದ ಸಿನಿಮಾವಾಗಿದೆ. ಈ ಸಿನಿಮಾ ಬಳಿಕ ಆರ್ಯ-2, ಡಾರ್ಲಿಂಗ್, ಮಿಸ್ಟರ್ ಪರ್ಫೆಕ್ಟ್, ಸಿಂಗಂ, ಮೆರ್ಸೆಲ್, ಜನತಾ ಗ್ಯಾರೇಜ್ ಸೇರಿದಂತೆ ಅನೇಕ ಬ್ಲಾಕ್ ಬಸ್ಟರ್ ಸಿನಿಮಾಗಳಲ್ಲಿ ನಟಿಸಿದ್ದಾರೆ.

Kajal Aggarwal Pregnant: ಪ್ರೆಗ್ನೆನ್ಸಿ ವೇಳೆ ಕಾಜಲ್ ಫುಲ್ ವರ್ಕ್‌ಔಟ್!

ಸದ್ಯ ಕಾಜಲ್ ತೆಲುಗಿನಲ್ಲಿ ಮೆಗಾಸ್ಟಾರ್ ಚಿರಂಜೀವಿ ನಟನೆಯ ಆಚಾರ್ಯ ಸಿನಿಮಾದಲ್ಲಿ ಬಣ್ಣಹಚ್ಚಿದ್ದರು. ಆದರೆ ಸಿನಿಮಾತಂಡದ ಜೊತೆ ಕಾಜಲ್ ಮುನಿಸಿಕೊಂಡ ಕಾರಣ ಸಿನಿಮಾದಿಂದ ಕಾಜಲ್ ದೃಶ್ಯವನ್ನು ಕಿತ್ತೆಸೆಯಲಾಗಿದೆ ಎನ್ನಲಾಗಿದೆ. ಇನ್ನು ತಮಿಳಿನ ಮೂರ ಸಿನಿಮಾಗಳ ಚಿತ್ರೀಕರಣ ಮುಗಿಸಿದ್ದು ಬಿಡುಗಡೆಗೆ ಸಿದ್ಧವಾಗುತ್ತಿವೆ. ಸಿನಿಮಾ ಜೊತೆಗೆ ವೆಬ್ ಸೀರಿಸ್ ನಲ್ಲೂ ಕಾಜಲ್ ನಟಿಸಿದ್ದಾರೆ. ಗರ್ಭಿಣಿ ಎಂದು ಗೊತ್ತಾಗುತ್ತಿದ್ದಂತೆ ಕಾಜಲ್ ಯಾವುದೇ ಸಿನಿಮಾ ಪ್ರಾಜೆಕ್ಟ್ ಗೂ ಸಹಿ ಮಾಡಿರಲಿಲ್ಲ. ಸದ್ಯ ಮಗುವಿನ ತಾಯಿಯಾಗಿರುವ ಕಾಜಲ್ ಕೊಂಚ ವಿರಾಮದ ಬಳಿಕ ಮತ್ತೆ ಬಣ್ಣ ಹಚ್ಚುವ ಸಾಧ್ಯತೆ ಇದೆ.