ಜಹೀರ್ ಇಕ್ಬಾಲ್ ಜೊತೆ ಮದುವೆಯಾದ 6 ತಿಂಗಳಿಗೇ 2 ನೇ ಮಗುವಿಗೆ ಜನ್ಮ ನೀಡಿದ ಸೋನಾಕ್ಷಿ ಸಿನ್ಹಾ!
ಸೋನಾಕ್ಷಿ ಸಿನ್ಹಾ ತಮ್ಮ ಎರಡನೇ ಮಗುವಿಗೆ ಜನ್ಮ ನೀಡಿದ್ದಾಗಿ ಇನ್ಸ್ಟಾಗ್ರಾಮ್ ಪೋಸ್ಟ್‌ನಲ್ಲಿ ಹೇಳಿಕೊಂಡಿದ್ದಾರೆ. ಆದರೆ ಇದು ಪ್ರಚಾರದ ತಂತ್ರವಾಗಿದ್ದು, ಪ್ರಸವ ನಂತರದ ಆರೈಕೆ ಬ್ರಾಂಡ್‌ನ ಉತ್ಪನ್ನ ಪ್ರಚಾರ ಮಾಡುತ್ತಿದ್ದಾರೆ.
ಮದುವೆಯಾಗಿ 6 ತಿಂಗಳಾಗಿದೆ.'ನಾನೀಗ ನನ್ನ ಎರಡನೇ ಮಗುವಿಗೆ ಜನ್ಮ ನೀಡಿದ್ದೇನೆ' ಅಂತಾ ಹೇಳಿಕೆ ನೀಡಿ ಬಾಲಿವುಡ್ ನಟಿ ಸೋನಾಕ್ಷಿ ಸಿನ್ಹಾ ಪೋಸ್ಟ್‌ನಲ್ಲಿ ಈ ವಿಚಾರ ಹಂಚಿಕೊಂಡು ಅಚ್ಚರಿ ಮೂಡಿಸಿದ್ದಾರೆ.
ಹೌದು, ಕಳೆದ ಆರು ತಿಂಗಳ ಹಿಂದೆಯಷ್ಟೇ ಮುಸ್ಲಿಂ ನಟ ಜಹೀರ್ ಇಕ್ಬಾಲ್ ಅವರನ್ನು ವಿವಾಹವಾಗಿದ್ದು ದೊಡ್ಡ ಸುದ್ದಿಯೇ ಆಗೋಯ್ತು. ಸೋನಾಕ್ಷಿ ಸಿನ್ಹಾ ಕುಟುಂಬ ಈ ಮದುವೆ ಒಪ್ಪಿರಲಿಲ್ಲವಾದರೂ ಮನೆಯವರ ವಿರೋಧ ನಡುವೆ ಪ್ರೀತಿಸಿದ ನಟನೊಂದಿಗೆ ಮದುವೆಯಾದರು. ಮದುವೆ ಬಳಿಕ ಸೋನಾಕ್ಷಿ-ಜಹೀರ್ ವೈವಾಹಿಕ ಜೀವನ ಸುಖವಾಗಿ ಕಳೆಯುತ್ತಿದ್ದಾರೆ. ಮದುವೆಯದಾಗಿನಿಂದಲೂ ಸೋನಾಕ್ಷಿ ಗರ್ಭಿಣಿಯಾಗಿರುವ ಬಗ್ಗೆ ಗುಸುಗುಸು ಎದ್ದಿತ್ತು. ಆ ಬಗ್ಗೆ ಹಲವು ವರದಿಗಳು ಬಂದಿದ್ದವು. ಆದರೆ ಸೋನಾಕ್ಷಿ ಸಿನ್ಹಾ ಗರ್ಭಿಣಿಯಾಗಿರುವ ಸುದ್ದಿ ಸಾರಾಸಗಟಾಗಿ ತಿರಸ್ಕರಿಸಿದ್ದರು.
ಇದನ್ನೂ ಓದಿ: ಅಳಿಯನ ಮುಂದೆ ಇದೆಂಥ ಮಾತನಾಡಿದ್ರು ಸೋನಾಕ್ಷಿ ತಾಯಿ? ಪೂನಂ ಸಿನ್ಹಾ ವಿಡಿಯೋ ವೈರಲ್
ಇದೀಗ ಸೋನಾಕ್ಷಿ ಸಿನ್ಹಾ ಇನ್ಸ್‌ಟಾಗ್ರಾಮ್‌ನಲ್ಲಿ ಹಂಚಿಕೊಂಡಿರುವ ಫೋಸ್ಟ್ ವೈರಲ್ ಆಗಿದೆ. ಈ ಪೋಸ್ಟ್‌ನಲ್ಲಿ ಅವರು ಮಗುವಿಗೆ ಸಂಬಂಧಿಸಿದಂತೆ, 'ನಾನು ನನ್ನ ಎರಡನೇ ಮಗುವನ್ನು ಹೆರಿಗೆ ಮಾಡಿದ್ದೇನೆ' ಎಂದು ಬರೆದುಕೊಂಡಿದ್ದಾರೆ. ಇದೇನಪ್ಪ ಮದುವೆಯಾಗಿ ಆರು ತಿಂಗಳಿಗೆ ಎರಡನೇ ಮಗು ಪಡೆಯುವುದೆಂದರೇನು ಅಂತ ಅಚ್ಚರಿ ಪಡುತ್ತಿರುವಾಗಲೇ ಮುಂದಿನದನ್ನು ದಯವಿಟ್ಟು ಗಮನಿಸಿ ಓದಿ, ಇದು ನನ್ನ ಪ್ರಚಾರದ ಪೋಸ್ಟ್ ಎಂದು ಬರೆದುಕೊಂಡಿದ್ದಾರೆ.
ಇದನ್ನೂ ಓದಿ: ಮದ್ದೂರಿನ ಸೊಸೆ ಪ್ರಿಯಾ ಗೋಸ್ವಾಮಿಗೆ ಮಿಸೆಸ್ ಇಂಡಿಯಾ ಕಿರೀಟ!
ವಿಷಯ ಏನಪ್ಪಂದ್ರೆ ಇದರಲ್ಲಿ ಸೋನಾಕ್ಷಿ ಸಿನ್ಹಾ ಪ್ರಸವ ನಂತರದ ಆರೈಕೆ ಬ್ರಾಂಡ್‌ನ ಉತ್ಪನ್ನ ಪ್ರಚಾರ ಮಾಡುತ್ತಿರುವ ಬಗ್ಗೆ ಹೀಗೆ ಬರೆದುಕೊಂಡಿದ್ದಾರೆ. ಈ ವೇಳೆ ತಾಯ್ತನದ ಬಗ್ಗೆ ಮಾತನಾಡಿದ್ದಾರೆ. ವಿಡಿಯೋ ಲಿಂಕ್ ಇಲ್ಲಿ ಕೊಡಲಾಗಿದೆ.