ಜೂನಿಯರ್ ಎನ್‌ಟಿಆರ್ ಮಾತಿಗೆ ಅಂದು ಮಹೇಶ್ ಬಾಬು ಅವರು ಅಷ್ಟೇನೂ ತಲೆ ಕೆಡಿಸಿಕೊಂಡಿರಲಿಕ್ಕಿಲ್ಲ. ಕಾರಣ, ಯಾರಿಗೇ ಆದರೂ ಯಾರೇನೇ ಹೇಳಿದರೂ ಅದು ಸ್ವಂತ ಅನುಭವ ಆದಾಗಲೇ ನಿಜವಾಗಿ ಅವರೇನು ಅಥವಾ ಅದೇನು ಅಂತ ಅರ್ಥ ಆಗೋದು.. ರಾಜಮೌಳಿಯವರ ಜೊತೆ 'ವಾರಣಾಸಿ' ಸಿನಿಮಾ ಮಾಡಿದ ಮೇಲೆ ಮಹೇಶ್ ಬಾಬುಗೆ ಈಗ ಅರ್ಥ ಆಗಿದೆ
ಜೂನಿಯರ್ ಎನ್‌ಟಿಆರ್-ಮಹೇಶ್ ಬಾಬು ಸ್ಟೋರಿ
ಟಾಲಿವುಡ್ ಸ್ಟಾರ್ ನಟರುಗಳಾದ ಜೂನಿಯರ್ ಎನ್‌ಟಿಆರ್ (Junior NTR) ಹಾಗೂ ಮಹೇಶ್ ಬಾಬು (Mahesh Babu) ಅವರಿಬ್ಬರು ಭೇಟಿಯಾದಾಗ ನಡೆದ ಘಟನೆ ಇದು. ಜೂ. ಎನ್‌ಟಿಆರ್ ಅವರು ವೇದಿಕೆಯೊಂದರಲ್ಲಿ ಮಹೇಶ್ ಬಾಬು ಸಿಕ್ಕಾಗ ಒಂದು ಮಾತು ಹೇಳಿದ್ದರಂತೆ.. 'ನೀನು ರಾಜಮೌಳಿಯ (SS Rajamouli) ಸಿನಿಮಾದಲ್ಲಿ ನಟಿಸ್ತಾ ಇದೀಯ, ಅವ್ರು ಸಖತ್ ಪರ್ಫೆಕ್ಷನಿಸ್ಟ್.. ಸೋ, ಮುಂದೆ ನಿಂಗಿದೆ ಮಾರಿಹಬ್ಬ' ಎಂದಿದ್ದರಂತೆ.
ಜೂನಿಯರ್ ಎನ್‌ಟಿಆರ್ ಅವರು ರಾಜಮೌಳಿ ನಿರ್ದೇಶನದಲ್ಲಿ ಅದಾಗಲೇ 2 ಸಿನಿಮಾ ಮಾಡಿದ್ದಾರೆ. ಒಂದು ಯಮದೊಂಗ, ಮತ್ತೊಂದು ಆರ್‌ಆರ್‌ಅರ್. ಹೀಗಾಗಿ ಖ್ಯಾತ ನಿರ್ದೇಶಕ ಎಸ್‌ಎಸ್ ರಾಜಮೌಳಿಯವರ ವರ್ಕಿಂಗ್ ಸ್ಟೈಲ್ ಹಾಗು ನಿಖರತೆ ಬಗ್ಗೆ ಜೂನಿಯರ್ ಎನ್‌ಟಿಆರ್‌ಗೆ ಅದಾಗಲೇ ಗೊತ್ತಿತ್ತು.
ಜೂನಿಯರ್ ಎನ್‌ಟಿಆರ್ ಮಾತಿಗೆ ಅಂದು ಮಹೇಶ್ ಬಾಬು ಅವರು ಅಷ್ಟೇನೂ ತಲೆ ಕೆಡಿಸಿಕೊಂಡಿರಲಿಕ್ಕಿಲ್ಲ. ಕಾರಣ, ಯಾರಿಗೇ ಆದರೂ ಯಾರೇನೇ ಹೇಳಿದರೂ ಅದು ಸ್ವಂತ ಅನುಭವ ಆದಾಗಲೇ ನಿಜವಾಗಿ ಅವರೇನು ಅಥವಾ ಅದೇನು ಅಂತ ಅರ್ಥ ಆಗೋದು.. ರಾಜಮೌಳಿಯವರ ಜೊತೆ 'ವಾರಣಾಸಿ' ಸಿನಿಮಾ ಮಾಡಿದ್ದೇ ಸರಿ, ಈಗ ಟಾಲಿವುಡ್ ಪ್ರಿನ್ಸ್ ಮಹೇಶ್ ಬಾಬು ಅವರಿಗೆ ರಾಜಮೌಳಿ ಎಂದರೆ ನಿಜವಾಗಿಯೂ ಏನು ಅಂತ ಅರ್ಥ ಆಗಿದೆ. ಅವರು ತಮಗೆ ಸರಿ ಅನ್ನಿಸಿದ ನಟನೆ ಸೀಗೋತನಕವೂ ಟೇಕ್ ಓಕೆ ಮಾಡಲ್ಲ ಅನ್ನೋ ಸಂಗತಿ ಈಗ ಮಹೇಶ್ ಬಾಬು ಅವರಿಗೆ ಅರ್ಥ ಆಗಿದೆಯಂತೆ.
'ವಾರಣಾಸಿ' ಟೈಟಲ್ ಲಾಂಚ್ ಈವೆಂಟ್
ಆವತ್ತು ರಾಮೋಜಿರಾವ್ ಫಿಲಂ ಸಿಟಿಯಲ್ಲಿ ನಡೆದ 'ವಾರಣಾಸಿ' ಟೈಟಲ್ ಲಾಂಚ್ ಈವೆಂಟ್‌ನಲ್ಲೂ ಅಷ್ಟೇ, ಮಹೇಶ್ ಬಾಬು ಅವರು ಎಂದಿನಂತೆ ಸಿಂಪಲ್ ಶರ್ಟ್-ಪ್ಯಾಂಟ್ ಹಾಕಿಕೊಂಡು ಬರ್ತೀನಿ ಅಂದಿದ್ರಂತೆ. ಆದರೆ, ರಾಜಮೌಳಿಯವರು ಅದೆಲ್ಲಾ ಆಗಲ್ಲ, ಶೂಟಿಂಗ್ ತರಹವೇ ಈವೆಂಟ್‌ಗಳಿಗೆ, ಪ್ರಮೋಶನ್‌ಗಳಿಗೆ ಕೂಡ ತಾವು ಹೇಳಿದಂತೆ ಸಿನಿಮಾಗೆ ಪೂರಕವಾಗಿಯೇ ಬರಬೇಕು ಎಂದು ಹೇಳಿ ಮಹೇಶ್ ಬಾಬು ಅವರು ಸಾಕ್ಷಾತ್ ರಾಜಕುಮಾರನಂತೆ (ಪ್ರಿನ್ಸ್) ರೆಡಿಯಾಗಿ ಬರುವಂತೆ ನೋಡಿಕೊಂಡಿದ್ದಾರೆ. ಅದಕ್ಕೇ ಅಂದು ಮಹೇಶ್ ಬಾಬು ವೇದಿಕೆಯಲ್ಲಿ ಸಖತ್ ಮಿಂಚಿರೋದು.
ಎಲ್ಲಾ ಸಿನಿಮಾಗಳೂ ಸೂಪರ್ ಹಿಟ್
ಹೌದು, ನಿರ್ದೇಶಕ ಎಸ್‌ಎಸ್ ರಾಜಮೌಳಿಯವರು ಇರುವದೇ ಹಾಗೆ. ಅವರಿಗೆ ಸಿನಿಮಾ ಹಾಗು ಮಾಡುವ ಎಲ್ಲಾ ಕೆಲಸಗಳಲ್ಲಿ ನಿಖರತೆ ಬೇಕೇಬೇಕು. ಈ ಕಾರಣಕ್ಕಾಗಿಯೇ ಅವರು ನಿರ್ದೇಶನ ಮಾಡಿರುವ ಎಲ್ಲಾ ಸಿನಿಮಾಗಳೂ ಸೂಪರ್ ಹಿಟ್ ಆಗಿರೋದು.. ಇದೀಗ ಮಹೇಶ್ ಬಾಬು-ಪ್ರಿಯಾಂಕಾ ಚೋಪ್ರಾ ಜೋಡಿಯ ನಟನೆಯಲ್ಲಿ ರಾಜಮೌಳಿಯವರ 'ವಾರಣಾಸಿ' ಸಿನಿಮಾ ಸಿದ್ಧವಾಗಿದೆ. ಈ ಸಿನಿಮಾ ಕೂಡ ಸೂಪರ್ ಹಿಟ್ ಆಗೋದ್ರಲ್ಲಿ ಯಾರಿಗೂ ಯಾವುದೇ ಸಂದೇಹವಿಲ್ಲ. ಆದರೆ, ಈ ಹಳೆಯ ರೆಕಾರ್ಡ್‌ಗಳನ್ನೆಲ್ಲಾ ಮುಂಬರುವ ವಾರಣಾಸಿ ಧೂಳಿಪಟ ಮಾಡುತ್ತಾ ಅಥವಾ ಜಸ್ಟ್ ಸೂಪರ್ ಹಿಟ್ ಲಿಸ್ಟ್‌ಗೆ ಸೇರುತ್ತಾ ಎಂಬುದನ್ನಷ್ಟೇ ಕಾದು ನೋಡಬೇಕಿದೆ.


