Asianet Suvarna News Asianet Suvarna News

ಜೂನಿಯರ್ ಎನ್‌ಟಿಆರ್ ಎದೆಗೊರಗಿದ ಜಾನ್ವಿ ಕಪೂರ್: 'ದೇವರ' ಸಿನಿಮಾದ ಪೋಸ್ಟರ್ ಸಖತ್ ವೈರಲ್

ಬಾಲಿವುಡ್ ನಟಿ ಜಾನ್ವಿ ಕಪೂರ್ ಜೂನಿಯರ್ ಎನ್‌ಟಿಆರ್‌ ಜೊತೆ ತೆಲುಗಿನ 'ದೇವರ' ಸಿನಿಮಾದಲ್ಲಿ ನಟಿಸುತ್ತಿದ್ದು, ಇದರ ಪೋಸ್ಟರ್ ಈಗ ಇಂಟರ್‌ನೆಟ್‌ನಲ್ಲಿ ಸಖತ್ ವೈರಲ್ ಆಗ್ತಿದೆ.

Junior NTR and Janhvi Kapoors 'Devara' movie poster goes viral before releasing second song Daavudi akb
Author
First Published Sep 4, 2024, 4:29 PM IST | Last Updated Sep 4, 2024, 4:29 PM IST

ಬಾಲಿವುಡ್ ನಟಿ ಜಾನ್ವಿ ಕಪೂರ್ ಜೂನಿಯರ್ ಎನ್‌ಟಿಆರ್‌ ಜೊತೆ ತೆಲುಗಿನ 'ದೇವರ' ಸಿನಿಮಾದಲ್ಲಿ ನಟಿಸುತ್ತಿದ್ದು, ಇದರ ಪೋಸ್ಟರ್ ಈಗ ಇಂಟರ್‌ನೆಟ್‌ನಲ್ಲಿ ಸಖತ್ ವೈರಲ್ ಆಗ್ತಿದೆ. ಕೊರಟಾಲಾ ಶಿವ ನಿರ್ದೇಶನದ ಈ ಸಿನಿಮಾ ದೇವರ ಪಾರ್ಟ್ 1ನ 'ದಾವುಡಿ' ಹಾಡಿನ ಪೋಸ್ಟರ್‌ನಲ್ಲಿ ಜೂನಿಯರ್ ಎನ್‌ಟಿಆರ್ ಎದೆಗೊರಗಿ ಜಾನ್ವಿ ಕಪೂರ್ ಪೋಸ್‌ ಕೊಟ್ಟಿದ್ದಾರೆ. ಜೂನಿಯರ್ ಎನ್‌ಟಿಆರ್‌ ಜೊತೆ ಹಾಗೂ ತೆಲುಗಿನಲ್ಲಿ ಇದು ಜಾನ್ವಿ ಕಪೂರ್ ಅವರ ಮೊದಲ ಸಿನಿಮಾವಾಗಲಿದೆ. ಹಾಡನ್ನು ಬಿಡುಗಡೆ ಮಾಡುವ ಮೊದಲೇ ದಾವುಡಿ ಹಾಡಿನ ಪೋಸ್ಟರ್ ಬಿಡುಗಡೆ ಮಾಡುವ ಮೂಲಕ ಅಭಿಮಾನಿಗಳಲ್ಲಿ ನಿರ್ಮಾಪಕರು ಹೊಸ ಕುತೂಹಲ ಹುಟ್ಟು ಹಾಕಿದ್ದಾರೆ. ಜೂನಿಯರ್ ಎನ್‌ಟಿಆರ್ ಹಾಗೂ ಜಾನ್ವಿ ಇರುವ ಈ ಪೋಸ್ಟರ್ ಎಲ್ಲರನ್ನು ಸೆಳೆಯುತ್ತಿದ್ದು, ದಾವುಡಿ ಹಾಡು ಇಂದು ಸಂಜೆ 5 ಗಂಟೆಗೆ ಬಿಡುಗಡೆಯಾಗಲಿದೆ.  ಹಾಡನ್ನು ಅನಿರುದ್ಧ್ ರವಿಚಂದರ್ ಕಂಪೋಸ್ ಮಾಡಿದ್ದಾರೆ.

ಸೆಪ್ಟೆಂಬರ್ 2ರಂದು, 'ದೇವರ' ಸಿನಿಮಾದ ನಿರ್ಮಾಪಕರು ಈ ದಾವುಡಿ ಹಾಡಿನ ಮೊದಲ ಪೋಸ್ಟರ್‌ನ್ನು ರಿಲೀಸ್ ಮಾಡಿದ್ದರು. ಇದು ಕೂಡ ಇಂಟರ್‌ನೆಟ್‌ನಲ್ಲಿ ಸಾಕಷ್ಟು ವೈರಲ್ ಆಗಿತ್ತು. ಇದರಲ್ಲೂ ಜೂನಿಯರ್ ಎನ್‌ಟಿಆರ್‌ ಹಾಗೂ ಜಾನ್ವಿ ಪರಸ್ಪರ ನೃತ್ಯದ ಭಂಗಿಯಲ್ಲಿದ್ದಾರೆ. ಪೋಸ್ಟರ್ ನೋಡಿದ ಮೇಲೆ ಇವರಿಬ್ಬರ ಮೋಹಕ ಕೆಮಿಸ್ಟ್ರಿಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಇದಕ್ಕೂ ಮೊದಲು ಬಿಡುಗಡೆಯಾದ ಚುಟುಮಲೆ ಹಾಡು ಕೂಡ ವೀಕ್ಷಕರನ್ನು ಬಹುವಾಗಿ ಸೆಳೆದಿದೆ. ಈ ಹಾಡಲ್ಲೂ ಜಾನ್ವಿ ಹಾಗೂ ಜೂನಿಯರ್ ಎನ್‌ಟಿಆರ್ ಇದ್ದಾರೆ. ಈ ಹಾಡನ್ನು ಶಿಲ್ಪಾ ರಾವ್ ಹಾಡಿದ್ದು, ಈಗ ಜನರ ಬಾಯಲ್ಲಿ ಈ ಹಾಡು ಗುನುಗುತ್ತಿದೆ. 

ಗುಟ್ಟಾಗಿ ನಡೆಯಿತು ಜಾಹ್ನವಿ ಕಪೂರ್​ ಎಂಗೇಜ್​ಮೆಂಟ್​? ಮಾಜಿ ಸಿಎಂ ಮನೆ ಸೊಸೆಯಾಗೋಕೆ ರೆಡಿ!

ದೇವರ: ಭಾಗ 1 ತೆಲುಗಿನ ಪ್ಯಾನ್ ಇಂಡಿಯನ್ ಸಿನಿಮಾಗಾಲಿದ್ದು, ಬಾಕ್ಸಾಫಿಸ್‌ನಲ್ಲಿ ಒಳ್ಳೆಯ ಪ್ರದರ್ಶನ ಕಾಣುವ ನಿರೀಕ್ಷೆ ಇದೆ.  ಕೊರಟಾಲ ಶಿವ ನಿರ್ದೇಶನದ ಈ ಚಿತ್ರದಲ್ಲಿ ಬಾಲಿವುಡ್ ನಟ ಸಯಫ್ ಅಲಿಖಾನ್ ಕೂಡ ನಟಿಸಿದ್ದಾರೆ, ಸೈಫ್ ಅಲಿಖಾನ್ ಅವರಿಗೂ ಇದು ತೆಲುಗಿನ ಮೊದಲ ಸಿನಿಮಾ. ಅಂದಹಾಗೆ ಈ ಸಿನಿಮಾವೂ 2024ರ ಸೆಪ್ಟೆಂಬರ್‌ನಲ್ಲಿ ಥಿಯೇಟರ್‌ಗಳಲ್ಲಿ ಬಿಡುಗಡೆಯಾಗಲಿದೆ. ಈ ಮೂಲಕ ನಟಿ ಜಾನ್ವಿ ಕಪೂರ್ ಅವರ ಬಹು ದಿನಗಳ ಕನಸು ನನಸಾಗಲಿದೆ. ಅಮ್ಮ ಶ್ರೀದೇವಿಯ ಸಾವಿನ ನಂತರ ಜಾನ್ವಿ ಕಪೂರ್ ದಕ್ಷಿಣದ ಸಿನಿಮಾಗಳಲ್ಲಿ ನಟಿಸಬೇಕು ಎಂದು ಆಸೆ ಪಟ್ಟಿದ್ದರು. ಜಾನ್ವಿ ಕಪೂರ್ ತಾಯಿ ಶ್ರೀದೇವಿ ಕೂಡ ಮೂಲತ ದಕ್ಷಿಣ ಭಾರತೀಯರು ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ.

ಶ್ರೀದೇವಿ ಜನ್ಮದಿನ, ಕಾಲ್ನಡಿಗೆಯಲ್ಲಿ ತಿರುಪತಿ ಬೆಟ್ಟ ಹತ್ತಿ ತಿಮ್ಮಪ್ಪನ ದರ್ಶನ ಪಡೆದ ಪುತ್ರಿ ಜಾಹ್ನವಿ ಕಪೂರ್

ಜೂ.ಎನ್​ಟಿಆರ್, ನೀಲ್​ಗೆ ಹುಟ್ಟೂರು ಪರಿಚಯಿಸಿದ ರಿಷಬ್: ಕುಂದಾಪುರದ ಕೆರಾಡಿಯ ಕುವರ ಶೆಟ್ಟಿ ಅಂತ ನಿಮ್ಗೆಲ್ಲಾ ಗೊತ್ತೇ!

 

 

Latest Videos
Follow Us:
Download App:
  • android
  • ios