Asianet Suvarna News Asianet Suvarna News

ಆಸ್ಪತ್ರೆಗೆ ದಾಖಲಾದ ಖ್ಯಾತ ಗಾಯಕ ಜುಬಿನ್‌; ಫೋಟೋ ಶೇರ್ ಮಾಡಿ ಹೇಳಿದ್ದೇನು?

ಭಾರತದ ಖ್ಯಾತ ಗಾಯಕ ಜುಬಿನ್ ನೌಟಿಯಾಲ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ತನ್ನ ಮನೆಯ ಮೆಟ್ಟಿಲುಗಳಿಂದ ಜಾರಿ ಬಿದ್ದು ಜುಬಿನ್ ತೀವ್ರವಾಗಿ ಗಾಯಗೊಂಡಿದ್ದರು. 

Jubin Nautiyal Is Hospitalised After An Accident sgk
Author
First Published Dec 3, 2022, 3:34 PM IST

ಭಾರತದ ಖ್ಯಾತ ಗಾಯಕ ಜುಬಿನ್ ನೌಟಿಯಾಲ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ತನ್ನ ಮನೆಯ ಮೆಟ್ಟಿಲುಗಳಿಂದ ಜಾರಿ ಬಿದ್ದು ಜುಬಿನ್ ತೀವ್ರವಾಗಿ ಗಾಯಗೊಂಡಿದ್ದರು. ತಕ್ಷಣ ಗಾಯಕ ಜುಬಿನ್ ಅವರನ್ನು ಮುಂಬೈನ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಸದ್ಯ ಆಸ್ಪತ್ರೆಯಲ್ಲೇ ಇರುವ ಜುಬಿನ್ ಅವರಿಗೆ ವೈದ್ಯರು ಚಿಕಿತ್ಸೆ ನೀಡುತ್ತಿದ್ದು ಕೊಂಚ ಚೇತರಿಸಿಕೊಳ್ಳುತ್ತಿದ್ದಾರೆ ಎನ್ನಲಾಗಿದೆ. ಇಂದು (ಡಿಸೆಂಬರ್ 3) ಆಸ್ಪತ್ರೆ ಬೆಡ್ ಮೇಲಿರುವ ಫೋಟೋವನ್ನು ಶೇರ್ ಮಾಡಿರುವ ಜುಬಿನ್ ದೇವರು ಕಾಪಾಡಿದ ಎಂದು ಹೇಳಿದ್ದಾರೆ.  ಜುಬಿನ್ ಅವರಿಗೆ ಕೈ ಮುರಿದಿದ್ದು ಬ್ಯಾಂಡೇಜ್ ಮಾಡಲಾಗಿದೆ.  ಇನ್ನೂ ಪಕ್ಕೆಲುಬಿಗೂ ಪೆಟ್ಟಾಗಿದೆ. ಮೆಟ್ಟಿಲಿಂದ ಬಿದ್ದಕಾರಮ ತಲೆಯ ಭಾಗಕ್ಕೂ ಏಟಾಗಿದೆ ಎನ್ನಲಾಗಿದೆ. 

ಜುಬಿನ್ ಇತ್ತೀಚಿಗೆ ಟ್ರೆಂಡಿಂಗ್ ನಲ್ಲಿರುವ ಹಾಡುಗಳಾದ ತು ಸಾಮ್ನೆ ಆಯೆ, ಮಾನಿಕೆ, ಬನಾ ಶರಾಬಿ ಹಾಡುಗಳಿಗೆ ಧ್ವನಿಯಾಗಿದ್ದರು. ಸದ್ಯ ಅವರ ಬಲಗೈಗೆ ಅಪರೇಷನ್ ಮಾಡಲಾಗಿದ್ದು ಸಂಪೂರ್ಣ ನಿಶ್ರಾಂತಿ ಪಡೆಯುವಂತೆ ವೈದ್ಯರು ಸೂಚಿಸಿದ್ದಾರೆ. 

ಗಾಯಕ ಜುಬಿನ್ ನೌಟಿಯಾಲ್ ಆಸ್ಪತ್ರೆಗೆ ದಾಖಲಾದ ಬಳಿಕ ತಮ್ಮ ಎಲ್ಲಾ ಅಭಿಮಾನಿಗಳೊಂದಿಗೆ ಆರೋಗ್ಯದ ಬಗ್ಗೆ ಮಾಹಿತಿ  ಹಂಚಿಕೊಂಡಿದ್ದಾರೆ. ತಮ್ಮ ಆಸ್ಪತ್ರೆ ಬೆಡ್ ಮೇಲಿರುವ ಫೋಟೋವನ್ನು ಹಂಚಿಕೊಂಡ ಗಾಯಕ, ಚಿಕ್ಕದಾಗಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದೇನೆ ಈಗ ಚೇತರಿಸಿಕೊಳ್ಳುತ್ತಿರುವುದಾಗಿ ಹೇಳಿದ್ದಾರೆ. ಮತ್ತು ಪ್ರೀತಿ, ಧೈರ್ಯ ತುಂಬಿದ ಎಲ್ಲಾ ಅಭಿಮಾನಿಗಳಿಗೆ ಧನ್ಯವಾದ ತಿಳಿಸಿದ್ದಾರೆ. 

ದ್ಯಪಾನ, ಡ್ರಗ್ಸ್, ಗನ್‌ಗಳನ್ನು ವೈಭವೀಕರಿಸುವ ಹಾಡು ಹಾಕಬೇಡಿ: ಎಫ್‌ಎಂ ಚಾನೆಲ್‌ಗಳಿಗೆ ಕೇಂದ್ರ ಸರ್ಕಾರ ನಿರ್ದೇಶನ

'ನಿಮ್ಮ ಆಶೀರ್ವಾದಕ್ಕಾಗಿ ಎಲ್ಲರಿಗೂ ಧನ್ಯವಾದಗಳು. ದೇವರು ನನ್ನನ್ನು ನೋಡುತ್ತಿದ್ದನು, ಅಷ್ಟು ದೊಡ್ಡ  ಮಾರಣಾಂತಿಕ ಅಪಘಾತದಿಂದ ನನ್ನನ್ನು ರಕ್ಷಿಸಿದ' ಎಂದು ಹೇಳಿದ್ದಾರೆ. ನಿಮ್ಮ ಪ್ರೀತಿ ಮತ್ತು ಪ್ರಾರ್ಥನೆಗಳಿಗೆ ಧನ್ಯವಾದಗಳು' ಎಂದು ಹೇಳಿದ್ದಾರೆ. ಅಭಿಮಾನಿಗಳು ಬೇಗ ಗುಣಮುಖರಾಗಿ ಎಂದು ಕಾಮೆಂಟ್ ಮಾಡುತ್ತಿದ್ದಾರೆ.

ಭಾರತ್ ಜೋಡೋ ಯಾತ್ರೆಗೆ KGF ಹಾಡು ಬಳಕೆ: ರಾಹುಲ್ ಗಾಂಧಿ ವಿರುದ್ದ ನ್ಯಾಯಾಂಗ ನಿಂದನೆ‌ ಅರ್ಜಿ

33 ವರ್ಷದ ಗಾಯಕ ಜುಬಿನ್  'ರಾತನ್ ಲಂಬಿಯಾನ್', 'ಲುಟ್ ಗಯೆ', 'ಹುಮ್ನಾವಾ ಮೇರೆ', 'ತುಜೆ ಕಿತ್ನೆ ಚಾಹ್ನೆ ಲಗೇ ಹಮ್, 'ತುಮ್ ಹಿ ಆನಾ' ಮತ್ತು 'ಬೇವಾಫಾ ತೇರಾ ಮಸೂನ್ ಚೆಹ್ರಾ'  ಸೇರಿದಂತೆ ಅನೇಕ ಹಾಡುಗಳನ್ನು ಹಾಡಿದ್ದಾರೆ. ಇತ್ತೀಚಿಗಷ್ಟೆ ಬನಾ ಶರಾಬಿ ಹಾಡು ರಿಲೀಸ್ ಆಗಿದೆ. ಗೋವಿಂದ ಮೇರಾ ನಾಮ್ ಸಿನಿಮಾದ ಹಾಡು ಇದಾಗಿದ್ದು ಈ ಸಿನಿಮಾಗಾಗಿ ಅಭಿಮಾನಿಗಳು ಕಾಯುತ್ತಿದ್ದಾರೆ. 


 

Follow Us:
Download App:
  • android
  • ios