Happy Birthday Jr. NTR; ಸಹೋದರ, ಸ್ನೇಹಿತ, ಸಹನಟ ಏನೆಂದು ಕರೆಯಲಿ, ರಾಮ್ ಚರಣ್ ಪ್ರೀತಿಯ ವಿಶ್
ತೆಲುಗಿನ ಖ್ಯಾತ ನಟ, ಕನ್ನಡ ಮಾತನಾಡುವ ಮಾತನಾಡುವ ಕನ್ನಡಿಗರ ಹೃದಯ ಗೆದ್ದಿರುವ ಪ್ರೀತಿಯ ನಟ ಜೂ.ಎನ್ ಟಿ ಆರ್ ಅವರಿಗೆ ಇಂದು (ಮೇ 20) ಹುಟ್ಟುಹಬ್ಬದ ಸಂಭ್ರಮ. ಹೌದು, ಮೇ 20 ಜೂ ಎನ್ ಟಿ ಆರ್ 39ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ.
ತೆಲುಗಿನ ಖ್ಯಾತ ನಟ, ಕನ್ನಡ ಮಾತನಾಡುವ ಮಾತನಾಡುವ ಕನ್ನಡಿಗರ ಹೃದಯ ಗೆದ್ದಿರುವ ಪ್ರೀತಿಯ ನಟ ಜೂ.ಎನ್ ಟಿ ಆರ್ ಅವರಿಗೆ ಇಂದು (ಮೇ 20) ಹುಟ್ಟುಹಬ್ಬದ ಸಂಭ್ರಮ. ಹೌದು, ಮೇ 20 ಜೂ ಎನ್ ಟಿ ಆರ್ 39ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಜೂ.ಎನ್ ಟಿ ಆರ್ ಅವರಿಗೆ ಅಭಿಮಾನಿಗಳು, ಸ್ನೇಹಿತರು ಮತ್ತು ಚಿತ್ರರಂಗದ ಗಣ್ಯರಿಂದ ಶುಭಾಶಯಗಳ ಹಾಪೂರವೇ ಹರಿದುಬರುತ್ತಿದೆ. ಅಭಿಮಾನಿಗಳಂತು ಸಾಮಾಜಿಕ ಜಾಲತಾಣಗಳಲ್ಲಿ ನೆಚ್ಚಿನ ನಟನ ಫೋಟೋ, ವಿಡಿಯೋ ಶೇರ್ ಮಾಡುವ ಪ್ರೀತಿಯ ಶುಭಾಶಯ ತಿಳಿಸುತ್ತಿದ್ದಾರೆ.
ಕೊರೊನಾ ಕಾರಣದಿಂದ ಕಳೆದ ಎರಡು ವರ್ಷಗಳಿಂದ ಜೂ ಎನ್ ಟಿ ಆರ್ ಹುಟ್ಟುಹಬ್ಬವನ್ನು ಅದ್ದೂರಿಯಾಗಿ ಆಚರಣೆ ಮಾಡಿರಲಿಲ್ಲ. ಆದರೆ ಈ ಬಾರಿ ಅಭಿಮಾನಿಗಳು ನೆಚ್ಚಿನ ನಟನ ಜನ್ಮದಿನವನ್ನು ಅದ್ದೂರಿಯಾಗಿ ಆಚರಣೆ ಮಾಡುತ್ತಿದ್ದಾರೆ. ಅನೇಕ ಕಡೆಯಲ್ಲಿ ಅಭಿಮಾನಿಗಳು ಸಾಮಾಜಿಕ ಕಾರ್ಯಗಳನ್ನು ಮಾಡುವ ಮೂಲಕ ಅರ್ಥಪೂರ್ಣವಾಗಿ ಜೂ.ಎನ್ ಟಿ ಆರ್ ಹುಟ್ಟುಹಬ್ಬ ಆಚರಿಸುತ್ತಿದ್ದಾರೆ. ಅಂದಹಾಗೆ ಜೂ ಎನ್ ಟಿ ಆರ್ ಹುಟ್ಟುಹಬ್ಬಕ್ಕೆ ಆರ್ ಆರ್ ಆರ್ ಸಿನಿಮಾತಂಡ ಪ್ರೀತಿಯ ಶುಭಾಶಯ ತಿಳಿಸಿದ್ದಾರೆ.
ರಾಮ್ ಚರಣ್ ವಿಶ್
ಸಾಮಾಜಿಕ ಜಾಲತಾಣದಲ್ಲಿ ನಟ ರಾಮ್ ಚರಣ್, ನಿರ್ದೇಶಕ ರಾಜಮೌಳಿ, ಅಜಯ್ ದೇವಗನ್ ಸೇರಿದಂತೆ ಅನೇಕರು ವಿಶ್ ಮಾಡಿದ್ದಾರೆ. ನಟ ರಾಮ್ ಚರಣ್ ಟ್ವೀಟ್ ಮಾಡಿ, 'ಸಹೋದರ, ಸಹನಟ, ಸ್ನೇಹಿತ ನೀವು ನನಗೆ ಯಾರು ಅಂತ ವ್ಯಾಖ್ಯಾನಿಸಲು ಪದಗಳೇ ಇಲ್ಲ. ಹುಟ್ಟುಹಬ್ಬದ ಶುಭಾಶಯಗಳು' ಎಂದು ಹೇಳಿದ್ದಾರೆ.
ಅಜಯ್ ದೇಗನ್
ಬಾಲಿವುಡ್ ನ ಖ್ಯಾತ ನಟ, ಆರ್ ಆರ್ ಆರ್ ಸಿನಿಮಾದಲ್ಲಿ ನಟಿಸಿದ್ದ ಅಜಯ್ ದೇವಗನ್ ಸಹ ಪ್ರೀತಿಯ ಶುಭಾಶಯ ತಿಳಿಸಿದ್ದಾರೆ. ನಿಮ್ಮ ಜೊತೆ ಆರ್ ಆರ್ ಆರ್ ಸಿನಿಮಾದಲ್ಲಿ ನಟಿಸಿದ ಸಂತೋಷವಿದೆ. ನಾನು ನಿಮಗೆ ಆರೋಗ್ಯ, ಸಂತೋಷ, ಶಾಂತಿ ಸಿಗಲೆಂದು ಆ ದೇವರಲ್ಲಿ ಕೇಳಿಕೊಳ್ಳುತ್ತೇನೆ. ನೀವು ಹಾಗೆ ಎಲ್ಲರ ಹೃದಯ ಗೆಲ್ಲುತ್ತೀರಿ ಎಂದು ಹೇಳಿದರು.
ಹೊಸ ಸಿನಿಮಾ ಘೋಷಣೆ
ಇನ್ನು ಅನೇಕ ಸ್ಟಾರ್ಸ್ ಜಿ ಎನ್ ಟಿ ಆರ್ ಅವರಿಗೆ ಶುಭಾಶಯ ತಿಳಿಸಿದ್ದಾರೆ. ಅಂದಹಾಗೆ ಆರ್ ಆರ್ ಆರ್ ಸಿನಿಮಾ ಬಳಿಕ ಜೂ.ಎನ್ ಟಿ ಆರ್ ಹೊಸ ಸಿನಿಮಾ ಘೋಷಣೆ ಮಾಡಿದ್ದಾರೆ. ನಿರ್ದೇಶಕ ಕೊರಟಾಲ ಶಿವ ಜೊತೆಗೆ ಜೂ ಎನ್ ಟಿ ಆರ್ ಹೊಸ ಸಿನಿಮಾ ಮಾಡುತ್ತಿದ್ದಾರೆ. ಈ ಬಗ್ಗೆ ಜೂ ಎನ್ ಟಿ ಆರ್ ಬಹಿರಂಗ ಪಡಿಸಿದ್ದಾರೆ ಹುಟ್ಟುಹಬ್ಬದ ಸಮಯದಲ್ಲಿ ಈ ವಿಷಯ ರಿವೀಲ್ ಮಾಡುವ ಮೂಲಕ ಅಭಿಮಾನಿಗಳಿಗೆ ಸಂತೋಷ ಸುದ್ದಿ ತಿಳಿಸಿದ್ದಾರೆ. ನೆಚ್ಚಿನ ನಟನ ಹೊಸ ಸಿನಿಮಾ ಹೇಗಿರಲಿದೆ, ಯಾವ ಪಾತ್ರದ ಮೂಲಕ ಅಭಿಮಾನಿಗಳ ಮುಂದೆ ಬರಲಿದ್ದಾರೆ ಎಂದು ಕಾದುನೋಡಬೇಕು.