ದೃಶ್ಯಂ 2 ಸಿನಿಮಾ ಭರ್ಜರಿ ರೆಸ್ಪಾನ್ಸ್ ಪಡೆಯುತ್ತಿರುವಾಗಲೇ ನಿರ್ದೇಶಕ ಜಿತು ಜೋಸೆಫ್ ಮೋಹನ್ ಲಾಲ್ ಜೊತೆ ದೃಶ್ಯಂ 3 ಸಿನಿಮಾವನ್ನು ಮಾಡುವ ಬಗ್ಗೆ ದೃಢಪಡಿಸಿದ್ದಾರೆ.

ಕೇರಳದಲ್ಲಿ ಮಾಧ್ಯಮದ ಜೊತೆ ಮಾತನಾಡಿದ ನಿರ್ದೇಶಕ ದೃಶ್ಯಂ 3 ಸಿನಿಮಾದ ಕ್ಲೈಮ್ಯಾಕ್ಸ್ ಬಗ್ಗೆ ಈಗಾಗಲೇ ಮೋಹನ್ಲಾಲ್ ಜೊತೆ ಚರ್ಚಿಸಿರುವುದಾಗಿ ಹೇಳಿದ್ದಾರೆ.

ಪುಟ್ಟ ತಮ್ಮನಿಗೆ ಗಿಫ್ಟ್ ತಂದ ಸಾರಾ ಅಲಿ ಖಾನ್..!

ಇದು ದೃಶ್ಯಂ ಸೀಕ್ವೆಲ್ ಕುರಿತ ದೊಡ್ಡ ಸುದ್ದಿ, ಆದರೆ ಸಿನಿಮಾ ಪೂರ್ತಿಯಾಗೋಕೆ ಇನ್ನೂ ಕೆಲವು ವರ್ಷ ಬೇಕಾಗಬಹುದು ಎನ್ನಲಾಗಿದೆ. ದೃಶ್ಯಂ 3 ಸಿನಿಮಾದ ಕ್ಲೈಮ್ಯಾಕ್ಸ್ ಸೂಪರ್ ಆಗಿರಲಿದೆ ಎನ್ನಲಾಗಿದೆ.

ಸದ್ಯ ಜಿತು ಅವರು ದೃಶ್ಯಂ 2 ತೆಲುಗು ರಿಮೇಕ್ನಲ್ಲಿ ಬ್ಯುಸಿ ಇರಲಿದ್ದಾರೆ. ಇದರಲ್ಲಿ ವೆಂಕಶೇಟ್ ಮತ್ತು ಮೀನಾ ನಟಿಸಲಿದ್ದಾರೆ. ಈ ಸಿನಿಮಾ ಬೇಗ ಮುಗಿಯಲಿದ್ದು ಈ ವರ್ಷ ಕೊನೆಗೆ ತೆರೆ ಕಾಣಲಿದೆ.