65 ಕೋಟಿ ಮನೆ ಖರೀದಿಸಿದ ಜಾನ್ವಿ ಕಪೂರ್: ಅಪ್ಪನ ದುಡ್ಡ ಖರ್ಚು ಮಾಡೋಕೆ ನೀನೇ ಬೇಕಾ ಎಂದ ನೆಟ್ಟಿಗರು
ಐಷಾರಾಮಿ ಮನೆ ಖರೀದಿಸಿ ಟ್ರೋಲ್‌ಗೆ ಸಿಲುಕಿಕೊಂಡ ಜಾನ್ವಿ ಕಪೂರ್. ಕೈಯಲ್ಲಿ ಎಷ್ಟು ಸಿನಿಮಾವಿದೆ ಎಂದು ಪ್ರಶ್ನಿಸಿದ ನೆಟ್ಟಿಗರು...
ಹಿಂದಿ ಚಿತ್ರರಂಗದಲ್ಲಿ ಅತಿ ಹೆಚ್ಚು ಪ್ಯಾಂಪರ್ ಪಡೆದಿರುವ ನಟಿ ಜಾನ್ವಿ ಕಪೂರ್. ಬೋನಿ ಕಪೂರ್ ಮತ್ತು ದಿವಂಗತ ನಟಿ ಎವರ್‌ಗ್ರೀನ್ ಶ್ರೀದೇವಿ ಹಿರಿಯ ಪುತ್ರಿ ಜಾನ್ವಿ ಇದೀಗ ಮುಂಬೈನಲ್ಲಿ 65 ಕೋಟಿ ರೂಪಾಯಿ ಕೊಟ್ಟು ಐಷಾರಾಮಿ ಅಪಾರ್ಟ್‌ಮೆಂಟ್ ಖರೀದಿಸಿದ್ದಾರೆ. ರಿಚ್ ಕಿಡ್ ಜಾನ್ವಿ ವರ್ಷಕ್ಕೊಂದು ಸಿನಿಮಾ ಮಾಡ್ಕೊಂಡು ಇಷ್ಟೊಂದು ಸಂಪಾದನೆ ಮಾಡಿದ್ದು ಹೇಗೆ? ಎಂದು ಪ್ರಶ್ನೆ ಕೇಳುವ ಅಭಿಮಾನಿಗಳು ಒಂದು ಕಡೆ ಆದರೆ ಮತ್ತೊಂದು ಕಡೆ ಅಪ್ಪನ ಹಣ ಖರ್ಚು ಮಾಡ್ಕೊಂಡು ಮಜಾ ಮಾಡುತ್ತಿದ್ದಾರೆ ಎಂದು ಟ್ರೋಲ್ ಆಗುತ್ತಿದ್ದಾರೆ.
'ರಿಯಲ್ ಎಸ್ಟೇಟ್ ಪೋರ್ಟಲ್ Indextap.com ಹಂಚಿಕೊಂಡಿರುವ ಮಾಹಿತಿ ಪ್ರಕಾರ ಜಾನ್ವಿ ಕಪೂರ್ ಕೊಟ್ಟಿರುವ ದಾಖಲೆಗಳ ಪ್ರಕಾರ, ಡ್ಯೂಪ್ಲೆಕ್ಸ್ 8,669 ಚದರದಲ್ಲಿ ಹರಡಿಕೊಂಡಿದೆ, 6421 ಚದರ ಅಡಿ ಕಾರ್ಪೆಟ್ ಪ್ರದೇಶವನ್ನು ಹೊಂದಿದೆ. ಆಸ್ತಿ ನೋಂದಣಿಯನ್ನು ಅಕ್ಟೋಬರ್ 12 ರಂದು ಮಾಡಲಾಗಿದ್ದು ಅದಕ್ಕೆ ಜಾನ್ವಿ ಮುದ್ರಾಂಕ ಶುಲ್ಕ ಮತ್ತು ನೋಂದಣಿ ಶುಲ್ಕವಾಗಿ 3.90 ಕೋಟಿ ರೂ ಕಟ್ಟಿದ್ದಾರೆ' ಎನ್ನಲಾಗಿದೆ.
ಬೋನಿ ಕಪೂರ್ ಮನೆ ಐಷಾರಾಮಿ ಆಗಿದೆ ಈ ಅಪಾರ್ಟ್‌ಮೆಂಟ್ ಯಾಕೆ ಬೇಕು ಎಂದು ನೆಟ್ಟಿಗರು ಕಾಲೆಳೆದಿದ್ದಾರೆ. ಮನೆಯಲ್ಲಿರುವುದು ಮೂವರಿಗೆ ಮೂವತ್ತೆ ಮನೆ ಮಾಡುವುದರಲ್ಲಿ ಅರ್ಥವಿಲ್ಲ ಎಂದಿದ್ದಾರೆ. 'ಫ್ಲಾಪ್ ಸಿನಿಮಾ ಮಾಡಿ ಐಷಾರಾಮಿ ಮನೆ ಖರೀದಿಸಿರುವ ನಟಿ' ಎನ್ನುವ ಟ್ಯಾಗ್‌ನ ಜಾನ್ವಿಗೆ ನೀಡಿದ್ದಾರೆ. ಮನೆ ಮತ್ತು ಆಸ್ತಿ ವಿಚಾರವಾಗಿ ಜಾನ್ವಿ ಪಬ್ಲಿಕ್‌ನಲ್ಲಿ ಮಾತನಾಡಿಲ್ಲ ಆದರೂ ನೆಟ್ಟಿಗರು ಹುಡುಕಿ ಹುಡುಕಿ ದಾಖಲೆ ಕೊಡುತ್ತಿದ್ದಾರೆ.
ಏನೇ ಸಾಧನೆ ಮಾಡಿದ್ದರೂ ಅವಮಾನ ತಪ್ಪಿದಲ್ಲ: ಜಾನ್ವಿ
ಇದೊಂದು ಟ್ರಿಕಿ ಪ್ರಶ್ನೆ ಉತ್ತರ ಕೊಡಲು ಕಷ್ಟವಾಗುತ್ತದೆ. ನನ್ನ ಜೊತೆ ಕೆಲಸ ಮಾಡಲು ಮನಸ್ಸಿನಿಂದ ಒಪ್ಪಿಕೊಂಡು ಖುಷಿಯಾಗಿ ನಟರು ಕೆಲಸ ಮಾಡಿದ್ದಾರೆ ಅಂದುಕೊಂಡಿರುವೆ. ಆರಂಭದಲ್ಲಿ ಎಲ್ಲವೂ ಸುಲಭವಾಗಿತ್ತು. ಮೊದಲ ಅವಕಾಶ ಸುಲಭವಾಗಿ ನಮ್ಮ ಮನೆ ಬಾಗಿಲಿಗೆ ಬಂತು ಬೇರೆ ಅವರಿಗೆ ಮೊದಲ ಅವಕಾಶ ಸಿಗುವುದು ತುಂಬಾನೇ ಕಷ್ಟ. ನಾನು ಶ್ರೀದೇವಿ ಮತ್ತು ಬೋನಿ ಕಪೂರ್ ಮಗಳು ಎಂದು ಜನ ಕರೆಯಲೇ ಬೇಕು ಏಕೆಂದರೆ ನಾನು ಅವರಿಗೆ ಹುಟ್ಟಿರುವವಳು. ಅವರ ಮಗಳು ಎನ್ನದೆ ಇನ್ಯಾರ ಮಗಳು ಎಂದು ಹೇಳಿಕೊಳ್ಳುತ್ತಾರೆ? ಪ್ರತಿ ದಿನ ಜನರು ನನ್ನನ್ನು ಜಡ್ಜ್ ಮಾಡುತ್ತಾರೆ ಇದು ನನ್ನ ಜೀವನ ನಾನು ಬದಲಾಯಿಸಲು ಆಗುವುದಿಲ್ಲ. ಒಳ್ಳೆ ಮನತನದಿಂದ ಬಂದಿರುವೆ ಎಂದು ನನ್ನ ಗುರುತನ್ನು ಕಳೆದುಕೊಳ್ಳುವುದಕ್ಕೆ ಇಷ್ಟವಿಲ್ಲ ನೆಗೆಟಿವ್ ಆಗಿ ಯೋಚನೆ ಮಾಡುವ ಬದಲು ಪಾಸಿಟಿವ್ ಆಗಿ ಸ್ವೀಕರಿಸುವೆ. ನನಗೆ ಇರುವುದು ಒಂದೇ ಥ್ರಿಲ್ ಜೀವನದಲ್ಲಿ ಇರುವುದು ಒಂದೇ ಗುರಿ ನನ್ನ ಹೆಮ್ಮೆ ಇರುವುದು. ಸಿನಿಮಾ ಮಾಡುವುದು ಅಂದ್ರೆ ನನಗೆ ತುಂಬಾನೇ ಇಷ್ಟ ಪ್ರತಿ ದಿನ ಸಿನಿಮಾ ಹೊರತು ಪಡಿಸಿ ಏನೂ ಯೋಚನೆ ಮಾಡಲು ಆಗುವುದಿಲ್ಲ. ನೋಡುವವರು ನನ್ನನ್ನು ಏನ್ ಬೇಕಿದ್ದರೂ ಕರೆಯಬಹುದು ಆದರೆ ನನ್ನ ಜೊತೆ ಕೆಲಸ ಮಾಡುವವರು ನೆಗೆಟಿವ್ ಆಗಿ ಒಂದು ಮಾತು ಹೇಳಲಿ ಆಗ ನಾನು ನಿಜಕ್ಕೂ ಬದಲಾಗುವೆ' ಎಂದು ಜಾನ್ವಿ ಉತ್ತರಿಸಿದ್ದಾರೆ.
ದಕ್ಷಿಣ ಭಾರತದ ಸಂಸ್ಕೃತಿಗೆ ಕಾಂಜೀವರಂ ಸೀರೆಯೊಂದಿಗೆ ಗೌರವ ಸಲ್ಲಿಸಿದ ಜಾನ್ವಿ ಕಪೂರ್
ಶ್ರೀದೇವಿ ಮತ್ತು ಜಾನ್ವಿ ನಡುವೆ ಹೋಲಿಕೆ ಮಾಡಬೇಡಿ :
ಬೋನಿ ಕಪೂರ್ ಅವರ ಮಿಲಿ ಸಿನಿಮಾದ ಟ್ರೇಲರ್ ಅನ್ನು ಬಿಡುಗಡೆ ಮಾಡಲಾಗಿದೆ. ಈ ಸಮಯದಲ್ಲಿನೋಟ ಮತ್ತು ಭರವಸೆ ಎರಡರಲ್ಲೂ ಜಾನ್ವಿ ತನಗೆ ಶ್ರೀದೇವಿಯನ್ನು ನೆನಪಿಸುತ್ತಾರೆ ಎಂದು ವರದಿಗಾರರೊಬ್ಬರು ಹೇಳಿದ ನಂತರ ನಿರ್ದೇಶಕರು ಹೋಲಿಕೆಗಳನ್ನು ಚರ್ಚಿಸಿದರು. ನಾನು 'ಆಕ್ಟ್' ಗೆ ವಿರುದ್ಧವಾಗಿ 'ಪಾರ್ಟ್' ಆಗು ಎಂದು ಹೇಳುತ್ತೇನೆ. ಅದು ಶ್ರೀಯವರ ಪ್ರಮುಖ ಗುಣಗಳಲ್ಲಿ ಒಂದಾಗಿತ್ತು ಮತ್ತು ಪ್ರಾಯಶಃ ಜಾನ್ವಿ ಅದೇ ಆನುವಂಶಿಕ ರಚನೆಯನ್ನು ಹೊಂದಿದ್ದಾಳೆ. ಅವಳು ಪಾತ್ರವನ್ನು ಅಳವಡಿಸಿಕೊಳ್ಳುತ್ತಾಳೆ ಅಥವಾ ಇನ್ನೊಂದು ರೀತಿಯಲ್ಲಿ ಹೇಳುವುದಾದರೆ, ಕೇವಲ ಪಾತ್ರವನ್ನು ನಿರ್ವಹಿಸುವ ಬದಲು ಪಾತ್ರದಲ್ಲಿ ಒಳಗೊಳ್ಳುತ್ತಾಳೆ. ಅದಕ್ಕಾಗಿಯೇ ನೀವು ಇದುವರೆಗಿನ ಚಲನಚಿತ್ರಗಳಲ್ಲಿ ಆಕೆಯ ಬೆಳವಣಿಗೆಯನ್ನು ವೀಕ್ಷಿಸಿದ್ದೀರಿ' ಎಂದು ಬೋನಿ ಕಪೂರ್ ಹೇಳಿದ್ದಾರೆ.