NTR 30: ದೇವರು ಆಸೆ ಈಡೇರಿಸಿದ, ಕನಸೊಂದು ನನಸಾಯ್ತು ಎಂದ ನಟಿ ಜಾಹ್ನವಿ ಕಪೂರ್
ಶ್ರೀದೇವಿ ಪುತ್ರಿ ಜಾಹ್ನವಿ ಕಪೂರ್ ಎನ್‌ಟಿಆರ್ 30 ಚಿತ್ರದಲ್ಲಿ ಕಾಣಿಸಿಕೊಳ್ಳುವ ಮೂಲಕ ಕನಸು ನನಸಾಗಿದೆ ಎಂದಿದ್ದಾರೆ. ಏನದು ಕನಸು?
ಬಾಲಿವುಡ್‌ನ ಬ್ಯೂಟಿ ಕ್ವೀನ್ (Bollywood Queen) ಎಂದೇ ಹೆಸರು ಮಾಡಿ 80-90ರ ದಶಕದಲ್ಲಿ ಚಿತ್ರರಂಗವನ್ನು ಆಳಿದ್ದ ನಟಿ ಶ್ರೀದೇವಿ. ಅವರ ಮಗಳು ಜಾಹ್ನವಿ ಕಪೂರ್ (Jahnavi Kapoor) ಅಮ್ಮನ ಹಾದಿಯಲ್ಲಿಯೇ ಸಾಗುತ್ತಿದ್ದು, ಚಿತ್ರರಂಗದಲ್ಲಿ ಬೇಡಿಕೆ ಕುದುರಿಸಿಕೊಳ್ಳುತ್ತಿದ್ದಾರೆ. 2018 ರಲ್ಲಿ ಶಶಾಂಕ್ ಖೈತಾನ್ ಅವರ ಧಡಕ್ ಸಿನಿಮಾ ಮೂಲಕ ಬಾಲಿವುಡ್‌ಗೆ ಎಂಟ್ರಿ ಕೊಟ್ಟಿರೋ 25 ವರ್ಷದ ಜಾಹ್ನವಿ ಕಪೂರ್, ಮಿಲಿ ಚಿತ್ರದಲ್ಲಿಯೂ ಪ್ರಶಂಸೆ ಗಳಿಸಿದವರು. ಹೆಚ್ಚಾಗಿ ಬಿಕಿನಿ ತೊಟ್ಟು ಇಲ್ಲವೇ ಚಿಕ್ಕ ಉಡುಗೆ ಹಾಕಿಕೊಂಡು ಇವರು ಟ್ರೋಲ್ ಆಗುತ್ತಿಲಿರೋ ಜಾಹ್ನವಿಗೆ ನೆಟ್ಟಿಗರು ಪಾಠ ಮಾಡುತ್ತಲೇ ಇರುತ್ತಾರೆ. ಆದರೆ ಇದ್ಯಾವುದಕ್ಕೂ ಕೇರೇ ಅನ್ನದ ನಟಿ, ಸದಾ ಡೇಟಿಂಗ್, ಪಾರ್ಟಿ, ಟೂರ್ ಎನ್ನುತ್ತಲೇ ಇದ್ದಾರೆ. ಈಕೆ ಉದ್ಯಮಿ, ಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಸುಶೀಲ್ ಕುಮಾರ್ ಶಿಂಧೆ ಅವರ ಮೊಮ್ಮಗ ಶಿಖರ್ ಪಹರಿಯಾ (Shikhar Pahariya) ಜೊತೆ ಡೇಟಿಂಗ್ ಮಾಡುತ್ತಿದ್ದಾರೆ ಎನ್ನುವುದು ಬಹಳ ಸುದ್ದಿಯಾಗಿತ್ತು. ವಿದೇಶಕ್ಕೂ ಇಬ್ಬರೂ ಹಾರಿ ಈ ಗಾಸಿಪ್ಗೆ ಮತ್ತಷ್ಟು ಪುಷ್ಟಿ ತುಂಬಿದ್ದರು.
ಇಂತಿಪ್ಪ ಜಾಹ್ನವಿ, ಈಗ ಸೌತ್ ಸಿನಿಮಾದಲ್ಲಿ ನಟಿಸಲಿದ್ದಾರೆ ಎಂದು ಕೆಲ ತಿಂಗಳಿನಿಂದ ಸುದ್ದಿಯಾಗಿತ್ತು. ಅದು ನಿಜವಾಗಿದೆ. ಯಂಗ್ ಟೈಗರ್, ಪ್ಯಾನ್ ಇಂಡಿಯಾ (Pan India) ಹೀರೋ ಎನ್‌ಟಿಆರ್ 30 ಚಿತ್ರದ ಮೂಲಕ ಟಾಲಿವುಡ್ಗೆ ಎಂಟ್ರಿ ಕೊಟ್ಟಿದ್ದಾರೆ. ಜೂನಿಯರ್ ಎನ್‌ಟಿಆರ್ ನಟನೆಯ 30ನೇ (NTR 30) ಸಿನಿಮಾಗೆ ಜಾಹ್ನವಿ ಕಪೂರ್ ಅವರು ಹೀರೋಯಿನ್ ಆಗಿ ಆಯ್ಕೆ ಆಗಿದ್ದಾರೆ. ಅವರ ಫಸ್ಟ್ ಲುಕ್ ಪೋಸ್ಟರ್ ಈಚೆಗೆಬಿಡುಗಡೆ ಆಗಿತ್ತು. ಆ ಮೂಲಕ ಅಭಿಮಾನಿಗಳಿಗೆ ಜಾಹ್ನವಿ ಕಪೂರ್ ಖುಷಿ ಸುದ್ದಿ ನೀಡಿದ್ದಾರೆ. ಈ ಸಂದರ್ಭದಲ್ಲಿ ಇತ್ತೀಚೆಗೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು ಸ್ವಾರಸ್ಯಕರವಾದ ವಿಚಾರಗಳನ್ನು ರಿವೀಲ್ ಮಾಡಿದ್ದಾರೆ. ಚಿತ್ರವು ಎಲ್ಲಾ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿದ್ದು, ಸದ್ಯ ಚಿತ್ರೀಕರಣಕ್ಕೆ ಸಿದ್ಧವಾಗುತ್ತಿದೆ. ಈ ಸಿನಿಮಾದ ಮೂಲಕ ಮೊದಲ ಬಾರಿಗೆ ಸೌತ್ ಸಿನಿಮಾ ಇಂಡಸ್ಟ್ರಿಗೆ ಎಂಟ್ರಿ ಕೊಡುತ್ತಿರುವುದಕ್ಕೆ ತುಂಬಾ ಖುಷಿಯಾಗುತ್ತಿದೆ ಎಂದು ಜಾಹ್ನವಿ ಹೇಳಿಕೊಂಡಿದ್ದಾರೆ.
Jr NTR ಜೊತೆ ರೊಮಾನ್ಸ್ ಮಾಡಲು ಜಾಹ್ನವಿ ಕಪೂರ್‌ಗೆ ಈ ಪರಿ ಸಂಭಾವನೆಯಾ?
ಜಾಹ್ನವಿ ಕಪೂರ್ ವೃತ್ತಿಜೀವನದಲ್ಲಿ ಇದು ಬಹುದೊಡ್ಡ ಸಿನಿಮಾ ಆಗಲಿದೆ. ಖ್ಯಾತ ನಿರ್ದೇಶಕ ಕೊರಟಾಲ ಶಿವ ಅವರು ಈ ಚಿತ್ರಕ್ಕೆ ಆ್ಯಕ್ಷನ್-ಕಟ್ ಹೇಳುತ್ತಿದ್ದಾರೆ. ಹಲವು ತಿಂಗಳ ಕಾಲ ಮಾತುಕಥೆ ನಡೆದು, ಅಂತಿಮವಾಗಿ ಜಾಹ್ನವಿ ಕಪೂರ್ ಅವರಿಗೆ ಅವಕಾಶ ನೀಡಲಾಗಿದೆ. ಇದು ಪ್ಯಾನ್ ಇಂಡಿಯಾ ಸಿನಿಮಾ ಆಗಲಿದೆ. ಆ ಕಾರಣಕ್ಕಾಗಿ ಬಾಲಿವುಡ್ ನಟಿಗೆ ಮಣೆ ಹಾಕಲಾಗಿದೆ. ಈಗಾಗಲೇ ನಿರ್ದೇಶಕ ಕೊರಟಾಲ ಶಿವ ತಮಗೆ ಹಲವು ಬಾರಿ ಮೆಸೇಜ್ ಮಾಡಿದ್ದು, ಪೂರ್ವಸಿದ್ಧತಾ ಚಿತ್ರೀಕರಣಕ್ಕೆ ರೆಫರೆನ್ಸ್ ಕೇಳುತ್ತಿರುವುದಾಗಿ ನಟಿ ಹೇಳಿಕೊಂಡಿದ್ದಾರೆ.
ಎನ್‌ಟಿಆರ್ ಜೊತೆಗಿನ ತಮ್ಮ ಸಿನಿಮಾದ ಬಗ್ಗೆ ಬಹಳ ಉತ್ಸುಕರಾಗಿರುವ ನಟಿ, ಸಿನಿಮಾ ಶೂಟಿಂಗ್‌ಗಾಗಿ ದಿನಗಳನ್ನು ಎಣಿಸುತ್ತಿದ್ದೇನೆ. ಎನ್‌ಟಿಆರ್ ಜೊತೆ ಕೆಲಸ ಮಾಡುವ ಅವಕಾಶಕ್ಕಾಗಿ ನಾನು ಪ್ರತಿದಿನ ಪ್ರಾರ್ಥಿಸುತ್ತಿದ್ದೆ ಎಂದು ರಿವೀಲ್ ಮಾಡಿದ್ದಾರೆ. ಎನ್‌ಟಿಆರ್ ಜೊತೆ ಕೆಲಸ ಮಾಡುವ ಕನಸು ನನಸಾಗಲಿದೆ. ಅವರ RRR ಚಿತ್ರ ನೋಡಿದೆ. ಅವರ ಅಭಿನಯವನ್ನು ನೋಡಿ ಅಚ್ಚರಿಗೊಂಡೆ ಎಂದು ಜಾಹ್ನವಿ ಹೇಳಿದ್ದಾರೆ.
ಬಾಯ್ಫ್ರೆಂಡ್ ಜೊತೆ ವಿದೇಶಕ್ಕೆ ಹಾರಿದ ನಟಿ Janhvi Kapoor
ಭಾರಿ ವೆಚ್ಚದಲ್ಲಿ ಪ್ಯಾನ್ ಇಂಡಿಯನ್ ರೇಂಜ್ ನಲ್ಲಿ ಮಹತ್ವಾಕಾಂಕ್ಷೆಯಿಂದ ನಿರ್ಮಾಣವಾಗುತ್ತಿರುವ ಈ ಸಿನಿಮಾವನ್ನು ಯುವ ಸುಧಾ ಆರ್ಟ್ಸ್ ಮತ್ತು ಎನ್ ಟಿಆರ್ ಆರ್ಟ್ಸ್ ಸಂಸ್ಥೆ ನಿರ್ಮಿಸುತ್ತಿದೆ. ಅನಿರುದ್ಧ್ ಸಂಗೀತ ನೀಡಲಿದ್ದಾರೆ. ಚಿತ್ರ ಮಾರ್ಚ್ 23 ರಂದು ಅದ್ಧೂರಿಯಾಗಿ ಲಾಂಚ್ ಆಗಲಿದೆ. ಅಷ್ಟಕ್ಕೂ NTR 30 ಚಿತ್ರಕ್ಕೆ ಜಾಹ್ನವಿ ಪಡೆಯಲಿರುವ ಸಂಭಾವನೆ ಮೂರೂವರೆ ಕೋಟಿ ರೂಪಾಯಿ (3.5 crores) ಎನ್ನುವ ಸುದ್ದಿಯಿದೆ. ಇದು ನಿಜವೇ ಆಗಿದ್ದರೆ, ಇಲ್ಲಿಯವರೆಗೆ ಜಾಹ್ನವಿ ಮಾಡಿರುವ ಚಿತ್ರಗಳಲ್ಲಿನ ಅತಿ ಹೆಚ್ಚು ಸಂಭಾವನೆ ಎನಿಸಲಿದೆ. ಹೊಸದಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿರುವ 25 ವರ್ಷದಯ ಯುವನಟಿಯೊಬ್ಬಳು ಇಷ್ಟೊಂದು ಸಂಭಾವನೆ (Remmuneration) ಪಡೆಯುವುದು ಕೂಡ ದಾಖಲೆ ಎನ್ನಲಾಗುತ್ತಿದೆ.
ಇನ್ನು ಈ ಯಂಗ್ ನಟಿಯ ಜೀವನದ ಬಗ್ಗೆ ಹೇಳುವುದಾದರೆ, ಅವರದ್ದು ಐಷಾರಾಮಿ ಬದುಕು ಎನ್ನುವುದು ಬೇರೆ ಹೇಳಬೇಕಾಗಿಲ್ಲ. ಅಮ್ಮ ಸೂಪರ್ಸ್ಟಾರ್ (Super Star) ಆದರೆ ತಂದೆ ಬೋನಿ ಕಪೂರ್ (Bony Kapoor) ಕೋಟ್ಯಧೀಶ. ಇದೇ ಕಾರಣಕ್ಕೆ 2022 ರ ವೇಳೆಗೆ ಜಾಹ್ನವಿಯ ಸಂಪತ್ತು $ 10 ಮಿಲಿಯನ್ (10 million Dollar) ಎಂದು ದಾಖಲಾಗಿತ್ತು. ಅಂದರೆ ಸುಮಾರು 82 ಕೋಟಿ ರೂಪಾಯಿಗಳು. ಇದು ಅಪ್ಪ-ಅಮ್ಮನ ಸಂಪತ್ತು ಎಲ್ಲಾ ಸೇರಿಸಿದ್ದೇ ಆದರೂ ಜಾಹ್ನವಿ ಕೂಡ ಸಾಕಷ್ಟು ಗಳಿಸುತ್ತಿದ್ದಾರೆ. ಜಾಹ್ನವಿ ಸಿನಿಮಾಗಳಷ್ಟೇ ಅಲ್ಲ, ಹಲವು ಬ್ರಾಂಡ್ಗಳ ಪ್ರಚಾರ ಮಾಡುವ ಮೂಲಕ ಅಪಾರ ಹಣ ಗಳಿಸುತ್ತಿದ್ದಾರೆ. ಅಷ್ಟೇ ಅಲ್ಲದೇ, ವಿವಿಧ ಉತ್ಪನ್ನಗಳನ್ನು ಪ್ರಚಾರಕ್ಕೆ ಸಂಬಂಧಿಸಿದಂತೆ ಸೋಶಿಯಲ್ ಮೀಡಿಯಾದಲ್ಲಿ (Social Media) ಕೆಲ ಪೋಸ್ಟ್ ಮಾಡುವ ಮೂಲಕ ಹಣಗಳಿಸುತ್ತಿದ್ದಾರೆ. ಸದ್ಯ ಈಕೆಯ ಮಾಸಿಕ ಆದಾಯ ಲೆಕ್ಕಾಚಾರ ಮಾಡುವುದಾದರೆ ಅರ್ಧ ಕೋಟಿ ರೂಪಾಯಿಗಳು (Half Crore Rupees) ಹಾಗೂ ವಾರ್ಷಿಕ ಆದಾಯ ಸುಮಾರು 6 ರಿಂದ 8 ಕೋಟಿ ಎಂದು ಹೇಳಲಾಗಿದೆ.