ತಂದೆಗೆ ಸುಳ್ಳು ಹೇಳಿ ಈ ಬಾಲಿವುಡ್ ನಟಿ ಹೋಗಿದ್ದೆಲ್ಲಿಗೆ ? ರಾತ್ರಿ ಪೂರಾ ಸುತ್ತಿ ಮರುದಿನ ಬೆಳಗ್ಗೆ ತಲುಪಿದ್ದ ಶ್ರೀದೇವಿ ಪುತ್ರಿ 

ಬಾಲಿವುಡ್‌ನ ಕ್ಯೂಟ್ ಹುಡುಗಿ ಜಾಹ್ನವಿ ಕಪೂರ್ ತಂದೆಗೆ ಸುಳ್ಳು ಹೇಳಿ ಸೀಕ್ರೆಟ್ ಟ್ರಿಪ್ ಹೋಗಿರುವ ಬಗ್ಗೆ ಇತ್ತೀಚೆಗೆ ರಿವೀಲ್ ಮಾಡಿದ್ದಾರೆ. ನಿರ್ಮಾಪಕ ಬೋನಿ ಕಪೂರ್‌ ಹಾಗೂ ಶ್ರೀದೇವಿ ಪುತ್ರಿ ಜಾಹ್ನವಿ ಈ ವಿಚಾರವನ್ನು ಇತ್ತೀಚೆಗೆ ಬಹಿರಂಗಪಡಿಸಿದ್ದಾರೆ.

ಲಾಸ್ ಏಂಜಲೀಸ್‌ನಿಂದ ಲಾಸ್ ವೆಗಾಸ್‌ಗೆ ಕದ್ದುಮುಚ್ಚಿ ಹೋಗಿದ್ದ ಜಾಹ್ನವಿ ತಂದೆ ಬಳಿ ತಾನು ಸಿನಿಮಾ ನೋಡೋಕೆ ಹೋಗೋದಾಗಿ ಹೇಳಿ ಹೋಗಿದ್ರು. ಸಿನಿಮಾ ನೋಡೋಕೆ ಹೋಗ್ತೀನಿ ಎಂದು ಹೇಳಿ ಫ್ಲೈಟ್ ಹತ್ತಿ ವೇಗಾಸ್‌ಗೆ ಹೋಗಿ ಅಲ್ಲಿ ಜಾಲಿಯಾಗಿ ಸುತ್ತಿ ಮರುದಿನ ಬೆಳಗ್ಗೆ ಮರಳಿ ಬಂದಿದ್ದರಂತೆ.

ಪಂಜಾಬ್‌ನಲ್ಲಿ ಶೂಟಿಂಗ್: ಜಾಹ್ನವಿಗೆ ರೈತ ಪ್ರತಿಭಟನೆ ಬಿಸಿ

ಸದ್ಯ ನಟಿ ಗುಡ್ ಲಕ್ ಜೆರಿ ಸಿನಿಮಾ ಶೂಟಿಂಗ್‌ನಲ್ಲಿ ಬ್ಯುಸಿ ಇದ್ದಾರೆ. ಸಿದ್ಧಾರ್ಥ್‌ ಸೇನ್ ಗುಪ್ತಾ ನಿರ್ದೇಶನದ ಸಿನಿಮಾದಲ್ಲಿದೀಪಕ್ ದೊಬ್ರಿಯಾಲ್, ಮೀತಾ ವಷಿಷ್ಠ, ನೀರಜ್ ಸೂದ್ ನಟಿಸುತ್ತಿದ್ದಾರೆ. ಇದಲ್ಲದೆ ದೋಸ್ತಾನ2 ಸಿನಿಮಾದಲ್ಲಿ ಕಾರ್ತಿಕ್ ಆರ್ಯನ್ ಜೊತೆ ಕಾಣಿಸಿಕೊಳ್ಳಲಿದ್ದಾರೆ.

ದಢಾಕ್ ಸಿನಿಮಾ ಮೂಲಕ ವೀಕ್ಷಕರ ಮನಸು ಗೆದ್ದ ಜಾಹ್ನವಿ