ನಟಿ ಜಾಹ್ನವಿ ಕಪೂರ್ ಕೈಯಲ್ಲಿ ಬಾಲ್: ಮೈಮೇಲಿದ್ದದ್ದು ಕೈಯಲ್ಯಾಕೆ ಬಂತು ಪ್ರಶ್ನಿಸ್ತಿದ್ದಾರೆ ನೆಟ್ಟಿಗರು!
ಮಿಸ್ಟರ್ & ಮಿಸೆಸ್ ಮಹಿ ಚಿತ್ರದ ಪ್ರೊಮೋಷನ್ಗಾಗಿ ಕ್ರಿಕೆಟ್ ಬಾಲ್ ಪರ್ಸ್ ಹಿಡಿದು ನಟಿ ಜಾಹ್ನವಿ ಕಪೂರ್ ಮಿಂಚಿದ್ರೆ ನೆಟ್ಟಿಗರು ಈ ರೀತಿಯೆಲ್ಲಾ ಹೇಳೋದಾ?
ಕೆಲ ದಿನಗಳ ಹಿಂದೆ ಜಾಹ್ನವಿ ಕಪೂರ್ ಬೆನ್ನ ಮೇಲೆ ಕ್ರಿಕೆಟ್ ಬಾಲ್ ತೋರಿಸಿ ಸಕತ್ ಮಿಂಚಿದ್ದರು. ಆದರೆ ತರ್ಲೆ ನೆಟ್ಟಿಗರು ಏನೇನೋ ಪ್ರಶ್ನೆ ಕೇಳಿ ನಟಿಯ ತಲೆ ಕೆಡಿಸಿದ್ದರು. ಈ ಉಡುಗೆಯನ್ನು ನಟಿ ಮಿ. & ಮಿಸೆಸ್ ಮಾಹಿ' ಸಿನಿಮಾದ ಪ್ರಚಾರದ ವೇಳೆ ತೊಟ್ಟುಕೊಂಡಿದ್ದರು. ಈ ಉಡುಗೆಯ ಪ್ರಚಾರದಲ್ಲಿ ನಟ ರಾಜ್‌ಕುಮಾರ್ ರಾವ್ ಜೊತೆಗಿದ್ದರು. ಕ್ರಿಕೆಟ್ ಬಾಲ್ ಬಟ್ಟೆ ಹಾಕುವುದಕ್ಕೆ ಕಾರಣವೂ ಇದೆ. ಅದೇನೆಂದರೆ, ಮಿ. & ಮಿಸೆಸ್ ಮಾಹಿ' ಚಿತ್ರವು ಕ್ರಿಕೆಟ್‌ಗಾಗಿ ಹಂಚಿಕೊಂಡ ಪ್ರೀತಿಯೊಂದಿಗೆ ದಂಪತಿಯ ನಡುವಿನ ಅಪೂರ್ಣ ಪರಿಪೂರ್ಣ ಪಾಲುದಾರಿಕೆಯ ಕಥೆಯನ್ನು ವಿವರಿಸುತ್ತದೆ ಎನ್ನಲಾಗಿದೆ. ಶರಣ್ ಶರ್ಮಾ ಇದನ್ನು ನಿರ್ದೇಶಿಸಿದ್ದಾರೆ. ಮೇ 31 ರಂದು ಚಿತ್ರ ಬಿಡುಗಡೆಯಾಗಲಿದೆ. ಅದರ ಸಲುವಾಗಿ ನಟಿ ಕ್ರಿಕೆಟ್ ಬಾಲ್ನ ಡ್ರೆಸ್ ಹಾಕಿಕೊಂಡಿದ್ದರು.
ಆದರೆ ಕ್ರಿಕೆಟ್ ಬಾಲ್ ಥೀಮ್ನೊಂದಿಗಿನ ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ತರ್ಲೆ ಕಮೆಂಟಿಗರು ಕ್ರಿಕೆಟ್ ಬಾಲ್ ನಿಜ. ಮುಂದೆ ನೋಡಬೇಕೋ, ಹಿಂದೆ ನೋಡಬೇಕೋ ಗೊತ್ತಾಗ್ತಿಲ್ಲ ಎಂದು ಹೇಳಿದ್ದರು. ಇನ್ನು ಕೆಲವರು ಇದಾಗಲೇ ಕ್ರಿಕೆಟ್ ಬಾಲ್ ಇರುವಾಗ ಮತ್ತ್ಯಾಕೆ ಎಂದೂ ಪ್ರಶ್ನಿಸಿದ್ದರು, ಒಟ್ಟಿನಲ್ಲಿ ನಟಿಯ ಕ್ರಿಕೆಟ್ ಬಾಲ್ ಡ್ರೆಸ್ ಸೋಷಿಯಲ್ ಮೀಡಿಯಾದಲ್ಲಿ ಹಂಗಾಮ ಸೃಷ್ಟಿಸಿತ್ತು. ಬೆನ್ನ ಮೇಲೆ ಕ್ರಿಕೆಟ್ ಬಾಲ್ ಬಳಿಕ ಜಾಹ್ನವಿ ಕಪೂರ್ ಈಗ ಕೈಯಲ್ಲಿ ಬಾಲ್ ಹಿಡಿದುಕೊಂಡು ಪೋಸ್ ಕೊಟ್ಟಿದ್ದಾರೆ. ಬಾಲ್ ಶೇಪ್ನ ಪರ್ಸ್ ಒಂದನ್ನು ಕೈಯಲ್ಲಿ ಹಿಡಿದುಕೊಂಡು ಪಾಪರಾಜಿಗಳಿಗೆ ಪೋಸ್ ಕೊಟ್ಟಿದ್ದಾರೆ. ಅಷ್ಟಕ್ಕೆ ಸುಮ್ಮನಿರದ ಪಾಪರಾಜಿಗಳು ಬಾಲ್ನಿಂದ ಹೊಡೀರಿ ಹೊಡೀರಿ ಎಂದು ಹೇಳಿದ್ದು, ಜಾಹ್ನವಿ ಹಾಗೆ ಮಾಡಿದ್ದಾರೆ ಕೂಡ.
ಬೆನ್ನ ಹಿಂದೆ ಬಾಲ್ ತೋರಿಸಿದ ಜಾಹ್ನವಿ ಕಪೂರ್, ಥೂ ನೆಟ್ಟಿಗರು ಹಿಂಗಾ ಕಮೆಂಟ್ ಮಾಡೋದು?
ಈ ವಿಡಿಯೋಗೂ ಸಾಕಷ್ಟು ಕಮೆಂಟ್ಸ್ ಬರುತ್ತಿವೆ. ಬೆನ್ನಾಯಿತು, ಈಗ ಕೈಯಲ್ಲೇ ಬಾಲ್ ಹಿಡಿದಿದ್ದೀರಿ, ಇನ್ನು ಎಲ್ಲೆಲ್ಲಿ ಬಾಲ್ ನೋಡಬೇಕು ಎಂದು ಪ್ರಶ್ನಿಸುತ್ತಿದ್ದಾರೆ. ಅಷ್ಟಕ್ಕೂ, ಬಾಲಿವುಡ್ ಎವರ್ಗ್ರೀನ್ ತಾರೆ ಶ್ರೀದೇವಿ ಅವರ ಪುತ್ರಿ ಜಾಹ್ನವಿ ಕಪೂರ್, ಆಗಾಗ್ಗೆ ಸದ್ದು ಮಾಡುತ್ತಲೇ ಇರುತ್ತಾರೆ. ಸಿನಿಮಾಗಳಲ್ಲಿ ಅಲ್ಲದಿದ್ದರೂ ಸೋಷಿಯಲ್ ಮೀಡಿಯಾಗಳಲ್ಲಿ ಇವರದ್ದೇ ಹವಾ. ಕೆಲ ದಿನಗಳ ಹಿಂದೆ ಕದ್ದುಮುಚ್ಚಿ ನಟಿ ಜಾಹ್ನವಿ ಕಪೂರ್ ಮತ್ತು ಅವರ ಬಾಯ್ಫ್ರೆಂಡ್ ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಸುಶೀಲ್ ಕುಮಾರ್ ಶಿಂಧೆ ಅವರ ಮೊಮ್ಮಗ, ಶಿಖರ್ ಅವರ ಮದ್ವೆಯಾಗೋಯ್ತು ಎಂದು ಭಾರಿ ಸುದ್ದಿಯಾಗಿತ್ತು. ಏಕೆಂದರೆ, ಕೆಲ ದಿನಗಳ ಹಿಂದೆ ಮಧ್ಯಪ್ರದೇಶದ ಉಜ್ಜಯಿನಿಯಲ್ಲಿರುವ ಮಹಾಕಾಳೇಶ್ವರ ಜ್ಯೋತಿರ್ಲಿಂಗ ದೇವಸ್ಥಾನಕ್ಕೆ ಈ ಜೋಡಿ ಭೇಟಿ ನೀಡಿದ್ದ ಜೋಡಿ ಅಲ್ಲಿ ಒಟ್ಟಿಗೆ ಕುಳಿತು ದಂಪತಿಯಂತೆ ವಿಶೇಷ ಪೂಜೆ ಸಲ್ಲಿಸಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿತ್ತು. ಇಬ್ಬರು ಒಟ್ಟಿಗೆ ಪೂಜೆ ಸಲ್ಲಿಸಿದ ಫೋಟೋಗಳು ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದ್ದವು. ಮದುವೆ ಆಗೋಯ್ತಾ ಅಥವಾ ಶೀಘ್ರವೇ ಮದ್ವೆ ಆಗಲಿದ್ದಾರೆ ಎನ್ನುವ ಚರ್ಚೆ ಬಿ-ಟೌನ್ನಲ್ಲಿ ಶುರುವಾಗಿತ್ತು. ಈ ಬಗ್ಗೆ ನಟಿಯಾಗಲೀ ಶಿಖರ್ ಆಗಲೀ ಯಾವುದೇ ಸ್ಪಷ್ಟನೆ ಕೊಟ್ಟಿಲ್ಲ.
ಇನ್ನು ನಟಿಯ ಡೇಟಿಂಗ್ ವಿಚಾರಕ್ಕೆ ಬರುವುದಾದರೆ, ಈಕೆ ಶಿಖರ್ ಜೊತೆ ಫಿಕ್ಸ್ ಆಗಿರುವುದು ನಿಜ ಎಂಬುದಾಗಿ ಕೆಲ ದಿನಗಳ ಹಿಂದೆ ಪರೋಕ್ಷವಾಗಿಯೇ ಹೇಳಿದ್ದರು ಜಾಹ್ನವಿ ತಂದೆ, ಶ್ರೀದೇವಿ ಪತಿ ಬೋನಿ ಕಪೋರ್. ಜೂಮ್ಗೆ ನೀಡಿದ ಸಂದರ್ಶನದಲ್ಲಿ ಅವರು, ‘ನನಗೆ ಶಿಖರ್ ಅಂದರೆ ಪ್ರೀತಿ. ಜಾಹ್ನವಿ ಶಿಖರ್ ಜೊತೆ ಕಾಣಿಸಿಕೊಳ್ಳುವುದಕ್ಕಿಂತಲೂ ಅಂದರೆ ಓಡಾಡ ಶುರು ಮಾಡುವುದಕ್ಕಿಂತಲೂ ಮೊದಲು ನನಗೆ ಅವನ ಜೊತೆ ಒಳ್ಳೆಯ ಫ್ರೆಂಡ್ಶಿಪ್ ಇತ್ತು. ಅವನು ಎಂದಿಗೂ ನನ್ನ ಮಗಳನ್ನು ಬಿಟ್ಟು ಹೋಗಲು ಸಾಧ್ಯವಿಲ್ಲ ಎಂದು ನನಗೆ ಅನಿಸಿತು. ಯಾವುದಾದರೂ ಸಹಾಯ ಬೇಕಾದರೆ ಆತ ಯಾವಾಗಲೂ ಓಡಿ ಬರುತ್ತಾನೆ. ಅವನು ನನ್ನೊಂದಿಗೆ, ಜಾಹ್ನವಿ ಮತ್ತು ಅರ್ಜುನ್ ಅವರೊಂದಿಗೆ ಒಳ್ಳೆಯ ಸ್ನೇಹ ಹೊಂದಿದ್ದಾರೆ. ಹಾಗಾಗಿ ಅವರಂತಹ ವ್ಯಕ್ತಿ ನಮ್ಮ ಜೀವನದಲ್ಲಿ ಸಿಕ್ಕಿರುವುದು ನಮ್ಮ ಅದೃಷ್ಟ ಎಂದಿದ್ದಾರೆ. ಈ ಮೂಲಕ ಮಗಳು ಮತ್ತು ಶಿಖರ್ ಸಂಬಂಧವನ್ನು ಒಪ್ಪಿಕೊಂಡಿದ್ದರು.
ಶಾರುಖ್ ಖಾನ್ ಸಾಯಲ್ಲ... ನಾವು ಮಾತ್ರ ಸಾಯ್ತೇವಾ ಎಂದ ಮಕ್ಕಳು! ಶಾಕಿಂಗ್ ವಿಡಿಯೋ ವೈರಲ್