ಇತ್ತೀಚೆಗಷ್ಟೇ ಪ್ರಿಯಾಂಕ ಚೋಪ್ರಾಳ ಹಳೆ ಮನೆಗೆ ಶಿಫ್ಟ್ ಆದ ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಆ ಮನೆಗೆ ಕೊಡ್ತಿರೋ ಬಾಡಿಗೆ ಎಷ್ಟು ಗೊತ್ತಾ..?

ಜುಹುವಿನಲ್ಲಿರುವ ಚಂದದ ಲಕ್ಷುರಿ ಮನೆಗೆ ಭಾರೀ ಮೊತ್ತದ ಬಾಡಿಗೆ ನೀಡುತ್ತಾರೆ ಜಾಕಿ. ಚಂದದ ಬಾಲ್ಕನಿ ಇರೋ ಬಂಗಲೆಯ ತಿಂಗಳ ಬಾಡಿಗೆ ದುಬಾರಿ ಇದೆ.

ಎಕ್ಸ್‌ ಲವರ್ಸ್‌ ಸಿದ್ಧಾರ್ಥ್ ಮಲ್ಹೋತ್ರಾ, ಆಲಿಯಾ ಭಟ್ ಬ್ರೇಕಪ್‌ ನಂತರ ಭೇಟಿಯಾಗಿದ್ದರಾ?...

ಜುಹುವಿನಲ್ಲಿರುವ ಮನೆಯನ್ನು ಲೀಸ್ನಲ್ಲಿ ತಗೊಂಡ ಜಾಕ್ವೆಲಿನ್ ಇದಕ್ಕೆ ದೊಡ್ಡ  ಮೊತ್ತವನ್ನೇ ಪಾವತಿಸುತ್ತಿದ್ದಾರೆ. ಕಟ್ಟಡದ ನಾಲ್ಕು ಮತ್ತು ಐದನೇ ಮಹಡಿಯಲ್ಲಿರುವ ಮನೆ ತೆಗೆದುಕೊಂಡ ಜಾಕಿ ಸೀ ಫೇಸಿಂಗ್ ವ್ಯೂ ಕೂಡಾ ಎಂಜಾಯ್ ಮಾಡಬಹುದು.

5 ಬೆಡ್ ರೂಂಗಳಿರುವ ಲಕ್ಷುರಿ ಮನೆಯಲ್ಲಿ ಚಂದದ್ದೊಂದು ಲಿವಿಂಗ್ ರೂಂ ಮತ್ತು ಸಮುದ್ರಕ್ಕೆ ಮುಖಮಾಡಿರುವ ವಿಶಾವಾದ ಬಾಲ್ಕನಿಯೂ ಇದೆ.

ಸಹ ಸ್ಪರ್ಧಿಗಳ ಅಂಡರ್‌ವೇರ್‌ ವಾಶ್‌ಮಾಡಿದರೆ ನನಗೆ ತೃಪ್ತಿ ಸಿಗುತ್ತೆ: ರಾಖಿ ಸಾವಂತ್‌!

ಮೂರು ವರ್ಷಕ್ಕೆ ಮನೆ ಲೀಸ್ಗೆ ಪಡೆದಿದ್ದು ತಿಂಗಳಿಗೆ 6.78 ಲಕ್ಷ ಪಾವತಿಸಬೇಕಾಗುತ್ತದೆ. ಈ ಮನೆಯನ್ನು 7 ಕೋಟಿ ಕೊಟ್ಟು ಪಡೆದಿದ್ದಾರೆ ನಟಿ. ಭೂತ್ ಪೊಲೀಸ್ ಸಿನಿಮಾ ಮಾಡಿರೋ ಜಾಕಿ, ಬಚ್ಚನ್ ಪಾಂಡೆಯಲ್ಲಿಯೂ ನಟಿಸುತ್ತಿದ್ದಾರೆ. ಕಿಕ್ 2 ಸಿನಿಮಾದಲ್ಲಿ ಸಲ್ಮಾನ್ ಖಾನ್ ಜೊತೆ ಕಾಣಿಸಿಕೊಳ್ಳಲಿದ್ದಾರೆ.