ಎಕ್ಸ್ ಲವರ್ಸ್ ಸಿದ್ಧಾರ್ಥ್ ಮಲ್ಹೋತ್ರಾ, ಆಲಿಯಾ ಭಟ್ ಬ್ರೇಕಪ್ ನಂತರ ಭೇಟಿಯಾಗಿದ್ದರಾ?
ಬಾಲಿವುಡ್ ನಟಿ ಆಲಿಯಾ ಭಟ್ ಹಾಗೂ ರಣಬೀರ್ ಕಪೂರ್ ರಿಲೆಷನ್‌ಶಿಪ್ ಮದುವೆಯ ಹಂತ ತಲುಪಿದೆ. ಈ ವರ್ಷದಲ್ಲಿ ಈ ಜೋಡಿ ಹಸೆಮಣೆ ಏರಬಹುದು ಎಂದು ವರದಿಗಳು ಹೇಳುತ್ತವೆ. ಆಲಿಯಾ ಈ ಮೊದಲು ತಮ್ಮ ಕೋ ಸ್ಟಾರ್ ಸಿದ್ಧಾರ್ಥ್ ಮಲ್ಹೋತ್ರಾ ಜೊತೆ ಡೇಟ್ ಮಾಡುತ್ತಿದ್ದರು. ನಂತರ ಇಬ್ಬರ ಸಂಬಂಧ ಬ್ರೇಕ್ ಆಯಿತು. ಬ್ರೇಕಪ್ ನಂತರ ಈ ಜೋಡಿ ಮೀಟ್ ಆಗಿದ್ದರಾ? ಇಲ್ಲಿದೆ ವಿವರ.
ಸಿದ್ಧಾರ್ಥ್ ಮಲ್ಹೋತ್ರಾ ಮತ್ತು ಆಲಿಯಾ ಭಟ್ ಡೇಟಿಂಗ್ ಮಾಡುತ್ತಿದ್ದರು. ನಂತರ ಅವರ ಸಂಬಂಧ ಮುರಿದು ಬಿತ್ತು.
ಆಲಿಯಾ ಭಟ್ ಒಮ್ಮೆ ಸಿದ್ಧಾರ್ಥ್ ಮಲ್ಹೋತ್ರಾ ಜೊತೆಯ ಬ್ರೇಕಪ್ ಮತ್ತು ಅದರ ನಂತರದ ಸಂಬಂಧದ ಬಗ್ಗೆ ಬಹಿರಂಗವಾಗಿ ಮಾತನಾಡಿದರು.
ನಟಿ ಪ್ರಸ್ತುತ ರಣಬೀರ್ ಕಪೂರ್ ಜೊತೆ ಡೇಟಿಂಗ್ ಮಾಡುತ್ತಿದ್ದರೆ, ಸಿದ್ಧಾರ್ಥ್ ಕಿಯಾರಾ ಅಡ್ವಾಣಿಯೊಂದಿಗೆ ಡೇಟಿಂಗ್ ಮಾಡುತ್ತಿದ್ದಾರೆ.
ಕಾಫಿ ವಿಥ್ ಕರಣ್‌ನಲ್ಲಿ ಮಲ್ಹೋತ್ರಾ, ಕಪ್ ನಂತರ ಆಲಿಯಾರನ್ನು ಭೇಟಿಯಾಗಿಲ್ಲ ಎಂದಿದ್ದಾರೆ.
ಮತ್ತೊಂದೆಡೆ ಡಿಎನ್‌ಎಗೆ ನೀಡಿದ ಸಂದರ್ಶನದಲ್ಲಿ, ಸಿದ್ಧಾರ್ಥ್ ಮಲ್ಹೋತ್ರಾರನ್ನು ಭೇಟಿಯಾಗಿದ್ದೆ ಎಂದು ಆಲಿಯಾ ಹೇಳಿದ್ದರು.
ಸಂದರ್ಶನದಲ್ಲಿ, ಆಲಿಯಾ ಅವರು ಕರಣ್ ಜೋಹರ್ ಶೋನ ಆ ಎಪಿಸೋಡ್ ನೋಡಿದ್ದಾರೆ ಮತ್ತು ಸಿದ್ಧಾರ್ಥ್ ಅನ್ನು ಭೇಟಿಯಾಗಿದ್ದಾರೆ ಎಂದು ಹೇಳಿದ್ದರು.
ಆದರೆ, ಅವರು ಭೇಟಿಯಾಗುವ ಮೊದಲು ಅದನ್ನು ಶೂಟ್ ಮಾಡಲಾಗಿದೆ. ಭೇಟಿ ಅತ್ಯಂತ ನಾರ್ಮಲ್ ಆಗಿತ್ತು ಎಂದು ಅವರು ಉಲ್ಲೇಖಿಸಿದ್ದಾರೆ.
ಇಬ್ಬರ ನಡುವೆ ಯಾವುದೇ ಬ್ಯಾಡ್ ವೈಬ್ಸ್ ಇಲ್ಲ ಮತ್ತು ಆಕೆಗೆ ಮಲ್ಹೋತ್ರಾ ಬಗ್ಗೆ ಅಪಾರ ಪ್ರೀತಿ ಮತ್ತು ಗೌರವವಿದೆ ಎಂದು ಸಂದರ್ಶನದಲ್ಲಿ ಬಹಿರಂಗಪಡಿಸಿದ್ದಾರೆ ಆಲಿಯಾ ಭಟ್.
ಸ್ಟೂಡೆಂಟ್ ಆಫ್ ದಿ ಇಯರ್ ಮೂಲಕ ಈ ನಟಿರಿಬ್ಬರೂ ಜೊತೆಯಾಗಿ ಬಣ್ಣದ ಲೋಕಕ್ಕೆ ಕಾಲಿಟ್ಟವರು. ನಂತರ ಕಪೂರ್ ಆ್ಯಂಡ್ ಸನ್ಸ್‌ನಲ್ಲಿಯೂ ಜೊತೆಯಾಗಿ ಕೆಲಸ ಮಾಡಿದ್ದರು.
ಅವರ ಬ್ರೇಕಪ್ ಕಹಿಯಾಗಿರಲಿಲ್ಲ. ಅಲ್ಲಿ ಸಂತೋಷ ಮತ್ತು ಒಳ್ಳೆಯ ನೆನಪುಗಳು ಮಾತ್ರ ಇವೆ ಎಂದು ಮಲ್ಹೋತ್ರಾ ಕಾಫಿ ವಿಥ್ ಕರಣ್ ಎಪಿಸೋಡ್‌ನಲ್ಲಿ ಹೇಳಿದ್ದರು.