ತಂದೆಯ ಸಾವಿನ ನಂತರ ದೇವರ ಮೇಲೆ ಸಿಟ್ಟಾದ ಪ್ರಿಯಾಂಕ | ದೇವರ ಜೊತೆಗಿನ ಸಂಬಂಧ ಬದಲಾಯ್ತು ಎಂದಿದ್ಯಾಕೆ ?

ನಟಿ ಪ್ರಿಯಾಂಕಾ ಇತ್ತೀಚಿನ ಸಂದರ್ಶನದಲ್ಲಿ ತನ್ನ ತಂದೆಯ ಮರಣದ ನಂತರ ದೇವರೊಂದಿಗಿನ ಸಂಬಂಧವು ಸ್ವಲ್ಪ ಬದಲಾಗಿದೆ ಎಂದು ಹೇಳಿದ್ದಾರೆ. ತಂದೆಯ ಅನಾರೋಗ್ಯದ ಸಂದರ್ಭ ದೇವರ ಮೊರೆ ಹೋಗಿದ್ದನ್ನು ನೆನಪಿಸಿಕೊಂಡಿದ್ದಾರೆ.

ನಾನು ಹೋಗಬೇಕಾದ ಪ್ರತಿಯೊಂದು ದೇವಸ್ಥಾನಕ್ಕೂ ಹೋಗಿದ್ದೆ. ಅಲ್ಲಿ ಮಾಡಬೇಕಾದ ಪ್ರತಿಯೊಂದು ಪ್ರಾರ್ಥನೆಯನ್ನು ಮಾಡಿದ್ದೇನೆ ಎಂದಿದ್ದಾರೆ.

ಮಸೀದಿಯಲ್ಲಿ ಹಾಡ್ತಿದ್ರು ಪ್ರಿಯಾಂಕ ಚೋಪ್ರಾ ತಂದೆ

ತಂದೆಯನ್ನು ಉಳಿಸುವ ಪ್ರಯತ್ನದಲ್ಲಿ ನಾನು ಪ್ರತಿಯೊಬ್ಬ ಸ್ವಾಮಿ ಅಥವಾ ಸ್ವಾಮೀಜಿ, ಗುರುಗಳನ್ನು ಭೇಟಿಯಾದೆ ಎಂದು ಪ್ರಿಯಾಂಕಾ ಹೇಳಿದ್ದಾರೆ.

ತಂದೆ ಅಗಲಿದಾಗ ನಾನು ತುಂಬಾ ಕೋಪಗೊಂಡಿದ್ದೆ ಎಂದು ಹೇಳಿದ್ದಾರೆ ನಟಿ. ತಮ್ಮ ಲೇಟೆಸ್ಟ್ ಪುಸ್ತಕ ಅನ್‌ಫಿನಿಶ್ಡ್‌ನಲ್ಲಿ ಬಹಳಷ್ಟು ವಿಚಾರಗಳನ್ನು ನಟಿ ಶೇರ್ ಮಾಡಿದ್ದಾರೆ