ಜೂ.ಎನ್‌ಟಿಆರ್‌ಗೆ ಸಾಯಿ ಪಲ್ಲವಿ ನಾಯಕಿ: ಹಾಗಾದ್ರೆ ಬಾಲಿವುಡ್ ಬ್ಯೂಟಿ ಜಾನ್ವಿ ಕಪೂರ್ ಕಥೆ ಏನು?

ಜೂ.ಎನ್‌ಟಿಆರ್‌ ನಟನೆಯ ದೇವರ ಸಿನಿಮಾಗೆ ಸಾಯಿ ಪಲ್ಲವಿ ನಾಯಕಿಯಾಗಿ ಎಂಟ್ರಿ ಕೊಟ್ಟಿದ್ದಾರೆ ಎನ್ನುವ ಸುದ್ದಿ ವೈರಲ್ ಆಗಿದೆ. ಹಾಗಾದ್ರೆ ಬಾಲಿವುಡ್ ಬ್ಯೂಟಿ ಜಾನ್ವಿ ಕಪೂರ್ ಕಥೆ ಏನು ಎಂದು ಅಭಿಮಾನಿಗಳು ತಲೆಕೆಡಿಸಿಕೊಂಡಿದ್ದಾರೆ. 

Is Sai Pallavi a part of Jr NTR starrer Devara? Here is the details sgk

ಟಾಲಿವುಡ್ ಸ್ಟಾರ್ ಜೂ.ಎನ್ ಟಿ ಆರ್ ಸದ್ಯ ದೇವರ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಈಗಾಗಲೇ ಶೂಟಿಂಗ್ ಪ್ರಾರಂಭವಾಗಿದ್ದು ಭರ್ಜರಿಯಾಗಿ ಚಿತ್ರೀಕರಣ ನಡೆಯುತ್ತಿದೆ. ಅಂದಹಾಗೆ ಈ ಸಿನಿಮಾಗೆ ನಾಯಕಿಯಾಗಿ ಈಗಾಗಲೇ ಬಾಲಿವುಡ್ ಬ್ಯೂಟಿ ಜಾನ್ವಿ ಕಪೂರ್ ಆಯ್ಕೆಯಾಗಿದ್ದಾರೆ. ಅಲ್ಲದೇ ಜಾನ್ವಿ ಫಸ್ಟ್ ಲುಕ್ ಕೂಡ ರಿಲೀಸ್ ಆಗಿದೆ. ಈ ನಡುವೆ ಮತ್ತೊಂದು ಸುದ್ದಿ ವೈರಲ್ ಆಗಿದೆ. ಜೂ.ಎನ್‌ಟಿಆರ್‌ಗೆ ನಾಯಕಿಯಾಗಿ ಸೌತ್ ಸುಂದರಿ ಸಾಯಿ ಪಲ್ಲವಿ ಎಂಟ್ರಿ ಕೊಟ್ಟಿದ್ದಾರೆ ಎನ್ನುವ ಕೇಳಿ ಬರುತ್ತಿದೆ. 

ದೇವರಾ ಸಿನಿಮಾದಲ್ಲಿ ಜಾನ್ವಿ ಕಪೂರ್ ಜೊತೆಗೆ ಸೈಫ್ ಅಲಿ ಖಾನ್, ಪ್ರಕಾಶ್ ರಾಜ್ ಸೇರಿದಂತೆ ದೊಡ್ಡ ತಾರಾಬಳಗವೆ ಸಿನಿಮಾದಲ್ಲಿದೆ. ಈ ನಡುವೆ ಸಾಯಿ ಪಲ್ಲವಿ ಎಂಟ್ರಿ ಸಿಕ್ಕಾಪಟ್ಟೆ ಕುತೂಹಲ ಹೆಚ್ಚಿಸಿದೆ. ಒಂದು ವೇಳೆ  ಪ್ರೇಮಂ ಸುಂದರಿ ಎಂಟ್ರಿ ಕೊಟ್ಟರೆ ಜಾನ್ವಿ ಪಾತ್ರದ ಕಥೆ ಏನು ಎನ್ನುವ ಮಾತು ಕೂಡ ಕೇಳಿ ಬರುತ್ತಿದೆ. ಸಾಯಿ ಪಲ್ಲವಿ ಮತ್ತು ಜೂಎನ್ ಟಿ ಆರ್ ಅವರನ್ನು ತೆರೆಮೇಲೆ ನೋಡಲು ಅಭಿಮಾನಿಗಳು ಸಹ ಕಾತರರಾಗಿದ್ದರು. ಆದರೆ ಸದ್ಯ ಕೇಳಿ ಬರುತ್ತಿರುವ ಮಾಹಿತಿ ಪ್ರಕಾರ ಸಾಯಿ ಪಲ್ಲವಿ ದೇವರಾ ಸಿನಿಮಾದಲ್ಲಿ ನಟಿಸುತ್ತಿಲ್ಲ ಎನ್ನಲಾಗಿದೆ. 

ಈ ಬಗ್ಗೆ ದೇವರಾ ಸಿನಿಮಾತಂಡವೇ ಪರೋಕ್ಷವಾಗಿ ಬಹಿರಂಗ ಪಡಿಸಿದೆ. ಬ್ರಹ್ಮಾನಂದಂ ಅವರ ಕಾಮಿಡಿ ವಿಡಿಯೋ ಶೇರ್ ಮಾಡುವ ಮೂಲಕ ನೋ ಎಂದು ಹೇಳಿದ್ದಾರೆ. ಇದನ್ನು ಶೇರ್ ಮಾಡಿ ಜೂ.ಎನ್ ಟಿ ಆರ್ ಅಭಿಮಾನಿಗಳು ನಿರಾಸೆ ವ್ಯಕ್ತಪಡಿಸುತ್ತಿದ್ದಾರೆ. ಸಾಯಿ ಪಲ್ಲವಿ ಈ ಸಿನಿಮಾದ ಭಾಗವಾಗಿಲ್ಲ ಎಂದು ಸಿನಿಮಾತಂಡವೇ ಸ್ಪಷ್ಟನೆ ನೀಡಿದೆ ಎಂದು ಅಭಿಮಾನಿಗಳು ಪ್ರತಿಕ್ರಿಯೆ ನೀಡುತ್ತಿದ್ದಾರೆ. ಈ ಮೂಲಕ ಸಾಯಿ ಪಲ್ಲವಿ ಅವರನ್ನು ಜೂ.ಎನ್ ಟಿ ಆರ್ ಜೊತೆ ನೋಡುವ ಕನಸು ಕನಸಾಗೆ ಉಳಿಯಿತು. 

ಅಂದಹಾಗೆ ಈ ಸಿನಿಮಾದಲ್ಲಿ ನಟಿಸಲು ಸಾಯಿ ಪಲ್ಲವಿ ಅವರಿಗೆ ಆಫರ್ ಮಾಡಲಾಗಿತ್ತು. ಆದರೆ ಸಾಯಿ ಪಲ್ಲವಿ ಪಾತ್ರ ಇಷ್ಟವಾಗದೇ ರಿಜೆಕ್ಟ್ ಮಾಡಿದ್ದಾರೆ ಎನ್ನುವ ಸುದ್ದಿ ಕೂಡ ಇದೆ. ಈ ಬಗ್ಗೆ ಇನ್ನೂ ಅಧಿಕೃತ ಮಾಹಿತಿ ಬಹಿರಂಗವಾಗಿಲ್ಲ. ಈಗಾಗಲೇ ಜಾನ್ವಿ ಕಪೂರ್ ನಾಯಕಿಯಾಗಿ ಎಂಟ್ರಿ ಕೊಟ್ಟಿರುವುದರಿಂದ ಮತ್ತೋರ್ವ ನಾಯಕಿಯಾಗಿ ನಟಿಸಲು ಸಾಯಿ ಪಲ್ಲವಿ ಇಷ್ಟಪಟ್ಟಿಲ್ಲ ಎನ್ನುವ ಮಾತು ಸಹ ಇದೆ. ಹಾಗಾಗಿ ನಿಜಕ್ಕೂ ಸಾಯಿ ಪಲ್ಲವಿ ಸಿನಿಮಾ ರಿಜೆಕ್ಟ್  ಮಾಡಿದ್ರಾ ಅಥವಾ ಇದು ಕೇವಲ ಗಾಳಿಸುದ್ದಿನಾ ಎನ್ನುವುದು ಅವರೇ ಸ್ಪಷ್ಟ ಪಡಿಸಬೇಕಿದೆ.   

ಪ್ರೇಮಂನಿಂದ ಗಾರ್ಗಿವರೆಗೆ: ಸಾಯಿ ಪಲ್ಲವಿ ಅತ್ಯುತ್ತಮ ಚಿತ್ರಗಳಿವು!
 
ದೇವರಾ ಮೂಲಕ ಬಾಲಿವುಡ್ ನಟಿ ಜಾನ್ವಿ ಕಪೂರ್ ಮೊದಲ ಬಾರಿಗೆ ಸೌತ್ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ದಕ್ಷಿಣ ಭಾರತದ ಚಿತ್ರಗಳಲ್ಲಿ ನಟಿಸುವುದು ಜಾನ್ವಿಯ ದೊಡ್ಡ ಕನಸಾಗಿತ್ತು. ಅದರಲ್ಲೂ ಜೂ.ಎನ್ ಟಿ ಆರ್ ಜೊತೆ ನಟಿಸಬೇಕೆಂದು ಅನೇಕ ಬಾರಿ ಹೇಳಿಕೊಂಡಿದ್ದರು. ಅದರಂತೆ ಈಗ ಜೂ.ಎನ್ ಟಿ ಆರ್‌ಗೆ ನಾಯಕಿಯಾಗಿ ಸೌತ್ ಅಭಿಮಾನಿಗಳ ಮುಂದೆ ಬರ್ತಿದ್ದಾರೆ.

ಸಾಯಿ ಪಲ್ಲವಿ ನಂಬರ್‌ ಇದ್ರೂ ಕಾಲ್ ಮಾಡೋಕೆ ಭಯ: ನಟ ಗುಲ್ಶನ್ ದೇವಯ್ಯ 

ದೇವರಾ ಬಗ್ಗೆ 

ಈ ಚಿತ್ರದಲ್ಲಿ ಜೂ.ಎನ್‌ಟಿಆರ್ ದ್ವಿಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಕೊರಟಾಲ ಶಿವ ಆಕ್ಷನ್ ಕಟ್ ಹೇಳುತ್ತಿದ್ದಾರೆ.   ಅನಿರುದ್ಧ್ ರವಿಚಂದರ್ ಸಂಗೀತ ಸಂಯೋಜನೆ ಈ ಚಿತ್ರಕ್ಕಿದೆ. ದೇವರಾ ಜೂ.ಎನ್‌ಟಿಆರ್ ಅವರ 30ನೇ ಸಿನಿಮಾವಾಗಿದೆ. ಸದ್ಯ ಚಿತ್ರೀಕರಣ ಹಂತದಲ್ಲಿರುವ ಈ ಸಿನಿಮಾ ಮುಂದಿನ ವರ್ಷ ತೆರೆಗೆ ಬರುತ್ತಿದೆ.

Latest Videos
Follow Us:
Download App:
  • android
  • ios