ಪ್ರೇಮಂನಿಂದ ಗಾರ್ಗಿವರೆಗೆ: ಸಾಯಿ ಪಲ್ಲವಿ ಅತ್ಯುತ್ತಮ ಚಿತ್ರಗಳಿವು!
ಸಾಯಿ ಪಲ್ಲವಿ ದಕ್ಷಿಣದ ಮೊಸ್ಟ್ ಟ್ಯಾಲೆಂಟೆಡ್ ನಟಿ. ಚಿತ್ರರಂಗಕ್ಕೆ ಕಾಲಿಟ್ಟಾಗ ಆಕೆಗೆ 23 ವರ್ಷ ಮತ್ತು ಜಾರ್ಜಿಯಾದಲ್ಲಿ ವೈದ್ಯಕೀಯ ಅಧ್ಯಯನ ಮಾಡುತ್ತಿದ್ದರು. ಇಂದು ಸಾಯಿ ಪಲ್ಲವಿ ವೈವಿಧ್ಯಮಯ ಪಾತ್ರಗಳಿಗೆ ಹೆಸರುವಾಸಿಯಾಗಿದ್ದಾರೆ. ಸಾಯಿ ಪಲ್ಲವಿ ಅವರ ಅತ್ಯುತ್ತಮ ಪ್ರದರ್ಶನಗಳು ಇವು.
ಪ್ರೇಮಂ (2015): ಪ್ರೇಮಂ ಸಾಯಿ ಪಲ್ಲವಿ ಅವರ ಚೊಚ್ಚಲ ಚಿತ್ರ. ಈ ಮಲಯಾಳಂ ರೊಮ್ಯಾಟಿಕ್ ಈ ಚಲನಚಿತ್ರದಲ್ಲಿ ಸಾಯಿ ಪಲ್ಲವಿ ಮಲಾರ್ ಎಂಬ ಕಾಲೇಜು ಉಪನ್ಯಾಸಕಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಕಲಿ (2016): ‘ಕಲಿ’ಸಿನಿಮಾದಲ್ಲಿ, ಪಲ್ಲವಿ ಸಿದ್ಧಾರ್ಥ್ (ದುಲ್ಕರ್ ಸಲ್ಮಾನ್) ಅವರನ್ನು ವಿವಾಹವಾದ ಹ್ಯಾಪಿ ಗೋ ಲಕ್ಕಿ ಪತ್ನಿಯ ಪಾತ್ರವನ್ನು ನಿರ್ವಹಿಸಿದ್ದಾರೆ. ಆದರೆ ತನ್ನ ಗಂಡನ ಜೀವನವು ಅಪಾಯದಲ್ಲಿದ್ದಾಗ, ರಾತ್ರಿಯಲ್ಲಿ ಏಕಾಂಗಿಯಾಗಿ ವಾಹನ ಚಲಾಯಿಸುವ ಭಯವನ್ನು ಅವರು ಜಯಿಸುವ ಪಾತ್ರವನ್ನು ನಿಭಾಯಿಸಿದ್ದಾರೆ.
ಫಿದಾ (2017): ಫಿದಾ ಚಿತ್ರದ ಮೂಲಕ , ತೆಲುಗು ಚಲನಚಿತ್ರೋದ್ಯಮದಲ್ಲಿ ಸಾಯಿ ತಮ್ಮ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ ಈ ಚಿತ್ರದಲ್ಲಿ ಭಾನುಮತಿಯ ಪಾತ್ರವು ಅವರ ವೃತ್ತಿಜೀವನವನ್ನು ಮುಂದಿನ ಹಂತಕ್ಕೆ ಕೊಂಡೊಯ್ದಿತು. ಶೇಕರ್ ಕಮ್ಮುಲಾ ಬರೆದ ಈ ಪ್ರಬಲ ಮಹಿಳಾ ಪಾತ್ರವು ಇಂದಿಗೂ ಫೇಮಸ್.
ಅಥಿರಾನ್ (2019): ಈ ಮಲಯಾಳಂ ಸೈಕಲಾಜಿಕಲ್ ಥ್ರಿಲ್ಲರ್‌ನಲ್ಲಿ (Psychological) , ಸಾಯಿ ಪಲ್ಲವಿ ಆಟಿಸಂನಿಂದ ಬಳಲುತ್ತಿರುವ ಹುಡುಗಿಯ ನಿತ್ಯ ಪಾತ್ರವನ್ನು ನಿರ್ವಹಿಸಿದ್ದಾರೆ. ಈ ಚಿತ್ರವು ಫಹಾದ್ ಫಸ್ಸಿಲ್ ನಿರ್ವಹಿಸಿದ ಡಾ. ನಾಯರ್ ಅವರೊಂದಿಗಿನ ನಿತ್ಯಾ ಅವರ ಸಂವಾದದ ಸುತ್ತ ಸುತ್ತುತ್ತದೆ.
ಪವಾ ಕದೈಗಲ್ (2020): ಪವಾ ಕದೈಗಲ್ ಸಿನಿಮಾ ಒರು ಇರಾವು ಎಂಬ ಶೀರ್ಷಿಕೆಯನ್ನು ಸಹ ಹೊಂದಿದೆ. ಇದು ನಾಲ್ಕು ಸಣ್ಣ ಕಥೆಗಳ ಸಂಕಲನ ಹೊಂದಿರುವ ಸರಣಿ. ಈ ವೆಟ್ರಿ ಮೆರಾನ್ ನಿರ್ದೇಶನದ ಸರಣಿಯಲ್ಲಿ, ಸಾಯಿ ತನ್ನ ಅಂತರ್-ಜಾತಿ ವಿವಾಹದ ನಂತರ ತನ್ನ ಪೋಷಕರನ್ನು ಒಪ್ಪಿಸಲು ಉತ್ಸುಕಳಾಗಿರುವ ಗರ್ಭಿಣಿ ಮಹಿಳೆ ಸುಮತಿ ಪಾತ್ರದಲ್ಲಿ ಎಲ್ಲರ ಮನ ಗೆದ್ದಿದ್ದಾರೆ
ಶ್ಯಾಮ್ ಸಿಂಘಾ ರಾಯ್ (2021): ಈ ತೆಲುಗು ಪಿರಿಯಾಡಿಕ್ ಡ್ರಾಮಾದಲ್ಲಿ (Periodic Drama) , ಪಲ್ಲವಿ ಬಂಗಾಳಿ ದೇವದಾಸಿಯ ಪಾತ್ರವನ್ನು ನಿರ್ವಹಿಸಿದ್ದಾರೆ ಮತ್ತು ದುರ್ಗಾ ದೇವಾಲಯದಲ್ಲಿ ನರ್ತಿಸುವಾಗ ಬಂಗಾಳಿ ಉಡುಪಿನಲ್ಲಿ ಸುಂದರವಾಗಿ ಕಾಣಿಸುತ್ತಾರೆ.
ಗಾರ್ಗಿ (2022): ‘ಗಾರ್ಗಿ’ಸಿನಿಮಾದಲ್ಲಿ, ಮಕ್ಕಳ ಹಲ್ಲೆಯ ಆರೋಪ ಹೊತ್ತಿರುವ ತನ್ನ ತನ್ನ ತಂದೆಯ ಹೆಸರನ್ನು ತೆರವುಗೊಳಿಸುವ ಅನ್ವೇಷಣೆಯಲ್ಲಿ ಸಾಯಿ ಪಲ್ಲವಿ ಶಾಲಾ ಶಿಕ್ಷಕಿಯ ಪಾತ್ರವನ್ನು ನಿರ್ವಹಿಸಿದ್ದಾರೆ.