ಅನೇಕ ಮಕ್ಕಳು ಬೇಕು ಎಂದು ಈ ಹಿಂದೆ ಹೇಳಿದ್ದ ಬಾಲಿವುಡ್​ ನಟಿ ಪರಿಣಿತಿ ಚೋಪ್ರಾ ಗರ್ಭಿಣಿಯಾಗಿದ್ದಾರೆಯೆ? ಕೊನೆಗೂ ಸಿಕ್ಕಿದೆ ಉತ್ತರ 

ಬಾಲಿವುಡ್​ ನಟಿ ಪರಿಣಿತಿ ಚೋಪ್ರಾ ಮತ್ತು ಆಮ್​ ಆದ್ಮಿ ಪಕ್ಷದ ನಾಯಕ, ರಾಜ್ಯಸಭಾ ಸದಸ್ಯ ರಾಘವ್ ಚಡ್ಡಾ (Raghav Chadha) ಮದುವೆ ಲೈಫ್​ ಎಂಜಾಯ್​ ಮಾಡುತ್ತಿದ್ದಾರೆ. ಕಳೆದ ಸೆಪ್ಟೆಂಬರ್​ನಲ್ಲಿ ಲೀಲಾ ಪ್ಯಾಲೇಸ್ ಮತ್ತು ದಿ ಒಬೆರಾಯ್ ಉದಯವಿಲಾಸ್‌ನಲ್ಲಿ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದೆ. ಸರೋವರದ ಮೇಲೆ ನಿರ್ಮಿಸಲಾದ ಐಷಾರಾಮಿ ಹೋಟೆಲ್‌ನಲ್ಲಿ ಮದುವೆ ನಡೆದಿದೆ. ಕಳೆದ ಮೇ 13 ರಂದು ದೆಹಲಿಯಲ್ಲಿ ನಿಶ್ಚಿತಾರ್ಥ (Engagement) ಮಾಡಿಕೊಂಡಿದ್ದ ಈ ಜೋಡಿಯ ಮದುವೆಗಾಗಿ ಫ್ಯಾನ್ಸ್​ ಕಾತರದಿಂದ ಕಾಯುತ್ತಿದ್ದರು. ಎಂಗೇಜ್​ಮೆಂಟ್​ಗೂ ಮೊದಲು ಈ ಪ್ರೇಮ ಪಕ್ಷಿಗಳು ಸ್ವಲ್ಪ ಸಮಯದವರೆಗೆ ಪರಸ್ಪರ ಡೇಟಿಂಗ್ ನಡೆಸುತ್ತಿದ್ದಾರೆ ಎಂದು ಹಲವು ತಿಂಗಳುಗಳಿಂದ ಸುದ್ದಿಯಾಗಿದ್ದರೂ, ಜೋಡಿ ಮಾತ್ರ ಇದರ ಬಗ್ಗೆ ತುಟಿಕ್​ ಪಿಟಿಕ್​ ಎಂದಿರಲಿಲ್ಲ. ನಂತರ ನಿಶ್ಚಿತಾರ್ಥ ಮಾಡಿಕೊಳ್ಳುವ ಮೂಲಕ ಎಲ್ಲರ ಕುತೂಹಲಕ್ಕೆ ತೆರೆ ಎಳೆದಿದ್ದರು. ಇದೀಗ ಮದುವೆಯನ್ನೂ ಆಗಿದ್ದು, ಲೈಫ್​ ಎಂಜಾಯ್​ ಮಾಡುತ್ತಿದ್ದಾರೆ.

ಇದರ ನಡುವೆಯೇ ಇದೀಗ ವಿಶೇಷ ವರದಿಯೊಂದು ಸದ್ದು ಮಾಡುತ್ತಿದೆ. ಅದೇನೆಂದರೆ ನಟಿ ಪರಿಣಿತಿ ಮದುವೆಯಾದ ಐದು ತಿಂಗಳಿಗೆ ಗುಡ್​​ ನ್ಯೂಸ್​ ಕೊಡುತ್ತಿದ್ದಾರೆ ಎನ್ನುವುದು. ಅಷ್ಟಕ್ಕೂ ನಟಿ ಈ ರೀತಿ ಸುದ್ದಿಯಾಗಲು ಕಾರಣ, ವಿಮಾನ ನಿಲ್ದಾಣದಿಂದ ಅವರು ಬರುತ್ತಿರುವ ವಿಡಿಯೋ ವೈರಲ್​ ಆಗಿದ್ದು, ಅದರಲ್ಲಿ ಪರಿಣಿತಿ ಗರ್ಭಿಣಿಯಂತೆ ಕಾಣುತ್ತಿದ್ದಾರೆ ಎನ್ನುವುದು ಅಭಿಮಾನಿಗಳ ಅಭಿಮತ. ಈ ಹಿಂದೆ ಡಿಸೆಂಬರ್​ನಲ್ಲಿ ಕೂಡ ಪರಿಣಿತಿ ಗರ್ಭಿಣಿ ಎನ್ನುವ ಸುದ್ದಿ ಹರಿದಾಡಿತ್ತು. ಆದರೆ ಆ ಸುದ್ದಿಯನ್ನು ನಟಿ ತಳ್ಳಿಹಾಕಿದ್ದರು. ಇದೀಗ ದೀಪಿಕಾ ಪಡುಕೋಣೆ ಗರ್ಭಿಣಿ ಎನ್ನುವ ಸುದ್ದಿ ತಿಳಿಯುತ್ತಲೇ ಪರಿಣಿತಿಯ ಬಗ್ಗೆ ಅವರ ಫ್ಯಾನ್ಸ್​ ತಲೆಕೆಡಿಸಿಕೊಳ್ಳುತ್ತಿದ್ದು, ಇದರ ನಡುವೆ ಈ ವಿಡಿಯೋ ಸಕತ್​ ಸದ್ದು ಮಾಡುತ್ತಿದೆ. 

ಶಾರುಖ್​ ಪುತ್ರನ ಡ್ರಗ್ಸ್​ ಕೇಸ್​ ನಡೆಸಿದ ಅಧಿಕಾರಿಯ ಪತ್ನಿಗೆ ಪಾಕ್​ನಿಂದ ಜೀವ ಬೆದರಿಕೆ!

 ಕೆಲ ತಿಂಗಳ ಹಿಂದೆ ನಟಿ ಅಮ್ಮನಾಗುವ ವಿಷಯದ ಕುರಿತು ಬಹಿರಂಗವಾಗಿ ಮಾತನಾಡಿದ್ದರು. ತಮಗೆ ಮಗುವನ್ನು ಹೆರುವುದಕ್ಕಿಂತಲೂ ದತ್ತು ತೆಗೆದುಕೊಳ್ಳಬೇಕು ಎನ್ನುವ ಆಸೆಯಿದೆ ಎಂದು ಹೇಳಿದ್ದರು. ಒಂದಲ್ಲ, ಎರಡಲ್ಲ ಅನೇಕ ಮಕ್ಕಳನ್ನು ದತ್ತಕಕ್ಕೆ ಪಡೆಯುವ ಆಸೆಯನ್ನು ನಟಿ ಬಿಚ್ಚಿಟ್ಟಿದ್ದರು. ನಾನು ಮಗುವನ್ನು ದತ್ತು ತೆಗೆದುಕೊಳ್ಳಲು ಬಯಸುವೆ, ಒಂದಲ್ಲ ಹಲವು ಮಕ್ಕಳನ್ನು ದತ್ತು ತೆಗೆದುಕೊಳ್ಳಲು ಬಯಸುವೆ ಎಂದು ಫಿಲ್ಮ್‌ಫೇರ್‌ಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದರು. ನನಗೆ ಮಗುವನ್ನು ದತ್ತು ತೆಗೆದುಕೊಳ್ಳುವುದು ಇಷ್ಟ. ನನಗೆ ಸಾಕಷ್ಟು ಮಕ್ಕಳು ಬೇಕು. ನನಗೆ ಎಲ್ಲಾ ಮಕ್ಕಳನ್ನು ಹೆರುವುದು ಕಷ್ಟವಾಗಬಹುದು. ಅದಕ್ಕಾಗಿ ನಾನು ದತ್ತು ತೆಗೆದುಕೊಳ್ಳಲು ಬಯಸುವೆ ಎಂದು ಅವರು ಹೇಳಿದ್ದರು. 

 ಇದರ ಮಧ್ಯೆ ಗರ್ಭಿಣಿ ವಿಷ್ಯ ಸಕತ್​ ಸದ್ದು ಮಾಡಿತು. ಆದರೆ ಇದೀಗ ನಟಿಯ ಟೀಂ ಈ ಬಗ್ಗೆ ಸ್ಪಷ್ಟನೆ ಕೊಟ್ಟಿದ್ದು, ವೈರಲ್​ ವರದಿಗೆ ಗರಂ ಆಗಿದೆ. ಈ ರೀತಿ ಸುಳ್ಳು ಸುದ್ದಿ ಹರಡುವುದನ್ನು ನಿಲ್ಲಿಸುವಂತೆ ಹೇಳಿದೆ. ನಟಿಯ ಕೈಯಲ್ಲಿ ಸಾಕಷ್ಟು ಸಿನಿಮಾಗಳಿವೆ. ಸಿನಿಮಾದಲ್ಲಿ ಅವರು ಬಿಜಿಯಾಗಿದ್ದಾರೆ. ಇದರ ಜೊತೆಗೆ ಸಂಸಾರವನ್ನೂ ಬ್ಯಾಲೆನ್ಸ್​ ಮಾಡುತ್ತಿದ್ದಾರೆ. ಇದರ ಮಧ್ಯೆ ಕ್ಯಾಸುವಲ್​ ಆಗಿ ಧರಿಸಿರುವ ಡ್ರೆಸ್​ನಿಂದ ಇಷ್ಟೆಲ್ಲಾ ಸುದ್ದಿ ಹರಿದಾಡಿದ್ದು, ಇವೆಲ್ಲಾ ಸುಳ್ಳು ಎಂದು ಟೀಂ ಹೇಳಿದೆ. ಆದರೆ ಈ ಬಗ್ಗೆ ನಟಿ ಅಥವಾ ರಾಘವ್​ ಚಡ್ಡಾ ಯಾವುದೇ ಮಾಹಿತಿ ನೀಡಲಿಲ್ಲ. 

ಜಪಾನ್​ ಪಬ್​ನಲ್ಲಿ ಶಾರುಖ್​ ಪುತ್ರ ಜುನೈದ್​ ಜೊತೆ ಕುಣಿದು ಕುಪ್ಪಳಿಸಿದ ಸಾಯಿ ಪಲ್ಲವಿ! ಅಸಲಿ ವಿಷ್ಯ ಇಲ್ಲಿದೆ